Wednesday, March 6, 2013

ತೆರಿಗೆ ತಪಾಸಣಾ ಕೇಂದ್ರದಲ್ಲಿ ನಿಲ್ಲಿಸಲಾಗಿದ್ದ ಲಾರಿಯಿಂದ ಟಯರ್ ಕಳವುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಾರಾಟ ತೆರಿಗೆ ತಪಾಸಣಾ ಕೇಂದ್ರದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರ ಚೀಸ್ ನಿಂದ ಹಿಂಬದಿಯ ಒಂದು ಟಯರ್,ಬ್ಯಾಟ್ರಿ,ಹಾಗು ಗಾಜುಗಳನ್ನು ಪುಡಿಗೈದ ಘಟನೆ ಇಲ್ಲಿಗೆ ಸಮೀಪದ ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.ಈ ಬಗ್ಗೆ ಅಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಮಂಗಳೂರು ಕಡೆಯಿಂದ ಯಾವುದೋ ಬಾಗಕ್ಕೆ ತೆರಳಬೇಕಾಗಿದ್ದ ಲಾರಿಯೊಂದು ದಾರಿ ತಪ್ಪಿ ಮಂಜೇಶ್ವರ ಚೆಕ್ ಪೋಸ್ಟ್ ಗೆ ಬಂದು ತಲುಪಿತ್ತು.ಆದರೆ ಲಾರಿಗೆ ದಾಖಲೆಗಳಿಲ್ಲದ  ಹಿನ್ನೆಲೆಯಲ್ಲಿ ಇದರ ಚಾಲಕನಿಗೆ ಅಧಿಕಾರಿಗಳು ನೋಟೀಸ್ ನೀದಿದ್ದರು.ಅದನ್ನು ಪಡೆದು ತೆರಳಿದ ಚಾಲಕ ನಂತ್ರ ಮರಳಿ ಬರಲಿಲ್ಲವೆನ್ನಲಾಗಿದೆ.ಇದೀಗ ಈ ಲಾರಿ ಕಲೆದ ೩ ತಿಂಗಳಿನಿಂದ ಚೆಕ್ ಪೊಸ್ಟ್ ನಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

No comments:

Post a Comment