Friday, March 29, 2013

ಮತ್ತೆ ರಘುಪತಿ ಭಟ್ಟರನ್ನು ಕಾಡಿದ ಹೆಣ್ಣುಮಾರ್ಚ್ -29-2013

ಪದ್ಮಪ್ರಿಯಾ ಎಂಬ ಹೆಣ್ಣಿನ ನಿಗೂಢ ಸಾವಿನ ನೆರಳು ಇನ್ನೂ ಬಿಜೆಪಿಯನ್ನು ಕಾಡುವುದು ಬಿಟ್ಟಿಲ್ಲವೇ? ಈ ಪ್ರಶ್ನೆ ರಾಜ್ಯದ ಜನತೆಯನ್ನು ಮತ್ತೆ ಕಾಡುತ್ತಿದೆ. ಒಂದು ಹೆಣ್ಣಿನ ಕಣ್ಣೀರು, ಶಾಪದ ಫಲವಾಗಿ ಇಂದು ಬಿಜೆಪಿ ಈ ದೈನೇಸಿ ಸ್ಥಿತಿಯನ್ನು ಅನುಭವಿಸುತ್ತಿದೆಯೇ? ಪದ್ಮಪ್ರಿಯಾಗೆ ಈವರೆಗೂ ನ್ಯಾಯ ನೀಡಲು ನಮ್ಮ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಪದ್ಮಪ್ರಿಯಾರ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಯತ್ನಿಸಿದ ಮೂವರು ನಾಯಕರೂ ರಾಜಕೀಯವಾಗಿ ಮುಗಿದು ಹೋಗಿದ್ದಾರೆ. ಅಂದಿನ ಗೃಹ ಸಚಿವ ವಿ. ಎಸ್. ಆಚಾರ್ಯ ಹೃದಯಾಘಾತದಿಂದ ನಿಧನರಾದರು. ಜೀವನದ ಕೊನೆಯಲ್ಲಿ ಅವರು ಭಾರೀ ಜರ್ಜರಿತ ರಾಜಕೀಯ ಜೀವನವನ್ನು ನಡೆಸಿದರು. ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿರುವ ಸುನೀಲ್ ಕುಮಾರ್‌ರ ರಾಜಕೀಯ ಜೀವನವೂ ಮುಗಿದು ಹೋಗಿದೆ.
ಒಟ್ಟು ಬಿಜೆಪಿ ಸರ್ವರೀತಿಯಲ್ಲಿ ನಾಶದ ಹಾದಿಯಲ್ಲಿದೆ. ಇಂತಹ ಹೊತ್ತಿನಲ್ಲಿ ಸಿಡಿಲೆರಗಿದಂತೆ, ಪದ್ಮಪ್ರಿಯಾರ ಪತಿ, ಶಾಸಕ ರಘುಪತಿ ಭಟ್‌ರ ರಾಸಲೀಲೆಯ ಸಿಡಿ ಹೊರ ಬಿದ್ದಿದೆ. ಇದು ಮತ್ತೆ ಬಿಜೆಪಿಯನ್ನು ಮುಜುಗರಕ್ಕೆ ತಳ್ಳಿದೆ. ಪರಿಣಾಮವಾಗಿ ರಘುಪತಿ ಭಟ್ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಸೂತಕದ ಮನೆಯಾಗಿದೆ.
ಸಂಸ್ಕತಿ, ಪರಂಪರೆ, ಮಹಿಳೆ ಇತ್ಯಾದಿ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರಕಾರ ಆರಂಭದಿಂದಲೇ ಮಹಿಳೆಯ ಕರುಳಿಗೆ ಕತ್ತರಿ ಇಟ್ಟಿತು. ಹಿಂದಿನ ಬಾರಿ ಒಬ್ಬಳೇ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡದೆ, ಶಕುಂತಳಾ ಶೆಟ್ಟಿ ಎನ್ನುವ ಹಿರಿಯ ಮಹಿಳೆಯನ್ನು ಕೆಟ್ಟದಾಗಿ ನಡೆಸಿ ಪಕ್ಷದಿಂದ ಹೊರ ಹಾಕಿತು. ಬಳಿಕ, ಶೋಭಾ ಕರಂದ್ಲಾಜೆ ಯನ್ನು ಬಿಜೆಪಿ ಮುಂದಕ್ಕೆ ತಂದಿತಾದರೂ, ಅದರ ಹಿಂದೆ ಇರುವ ಅನೈತಿಕ ರಾಜಕಾರಣ ಎಲ್ಲರಿಗೂ ಗೊತ್ತಿರುವುದೇ.
ಮಹಿಳೆಯನ್ನು ತನ್ನ ಅಧಿಕಾರಾವಧಿಯಲ್ಲಿ ಪ್ರೀತಿಯಿಂದ, ಗೌರವದಿಂದ ನೋಡುವುದನ್ನೇ ಮರೆಯಿತು. ಬಿಜೆಪಿ ಸರಕಾರದ ಅವಧಿಯಲ್ಲಿ ಮಹಿಳೆ ಯರು ಸುದ್ದಿಯಾದುದು ಬ್ಲೂಫಿಲ್ಮ್‌ಗಳ ಮೂಲಕ. ಅತ್ಯಾಚಾರ ಆರೋಪಗಳ ಮೂಲಕ, ಹತ್ಯೆಯ ಮೂಲಕ. ಪದ್ಮಪ್ರಿಯಾ ಹತ್ಯೆಯ ಕಳಂಕದೊಂದಿಗೆ ಸರಕಾರ ತನ್ನ ಅಧಿಕಾರ ಪ್ರಯೋಗವನ್ನು ಆರಂಭಿಸಿತು. ರಘುಪತಿ ಭಟ್‌ರ ಪತ್ನಿ ದಿಲ್ಲಿಯಲ್ಲಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಗೃಹಸಚಿವರ ನೇತೃತ್ವದಲ್ಲೇ ಮುಚ್ಚಿ ಹಾಕಲಾಯಿತು.
ಪದ್ಮಪ್ರಿಯಾರ ಸಾವು ಆತ್ಮಹತ್ಯೆಯೋ, ಕೊಲೆಯೋ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆಕೆಯ ಆತ್ಮಹತ್ಯೆಗೆ ಪ್ರೇರಣೆ ನೀಡಿದವರಿಗೂ ಶಿಕ್ಷೆಯಾಗಿಲ್ಲ. ಪದ್ಮಪ್ರಿಯಾರ ಅಶಾಂತ ಆತ್ಮ ಇಂದಿಗೂ ಬಿಜೆಪಿಯನ್ನು ಕಾಡುತ್ತಲೇ ಇದೆ. ಪದ್ಮಪ್ರಿಯಾರ ಸಾವಿನ ಬೆನ್ನಿಗೇ ಬಿಜೆಪಿಯ ಅನೈತಿಕ ವ್ಯವಹಾರಗಳು ಒಂದೊಂದೇ ತೆರೆಯುತ್ತಾ ಹೋದವು. ಸಚಿವ ಸ್ಥಾನದಲ್ಲಿದ್ದ ವರೇ ಅತ್ಯಾಚಾರ ಆರೋಪಕ್ಕೆ ಗುರಿಯಾಗಿ ತಮ್ಮ ಸ್ಥಾನವನ್ನು ಕಳೆದುಕೊಂಡರು. ರೇಣುಕಾಚಾರ್ಯರ ಪ್ರಕರಣವಂತೂ ಎಲ್ಲರಿಗೂ ಗೊತ್ತಿದ್ದುದೇ ಆಗಿದೆ.
ಇದಾದ ಬೆನ್ನಿಗೆ ಸದನದಲ್ಲಿ ಬ್ಲೂಫಿಲ್ಮ್ ನೋಡುವ ಮೂಲಕ ಬಿಜೆಪಿಯ ಸಚಿವರು, ಶಾಸಕರು ದೇಶದಲ್ಲೇ ಸುದ್ದಿಯಾದರು. ಸಂಸ್ಕೃತಿಯ ಹೆಸರಿನಲ್ಲಿ ಅಧಿಕಾರ ಹಿಡಿದು, ಅಧಿಕಾರ ದಲ್ಲಿರುವವರೆಗೂ  ಸಂಸ್ಕೃತಿ ಹೀನ ಕೆಲಸಗಳಲ್ಲಿ ತೊಡಗಿಕೊಂಡು ಸುದ್ದಿಯಾದ ಬಿಜೆಪಿ ನಾಯಕರು, ಇದೀಗ ಚುನಾವಣೆಯ ಹೊತ್ತಿನಲ್ಲೂ ಅದೇ ಕಂಳಂಕಗಳ ಮೂಲಕ ಗುರುತಿಸಲ್ಪಡುತ್ತಿರುವುದು ಖೇದಕರ.
ರಘುಪತಿ ಭಟ್‌ರ ಬ್ಲೂಫಿಲ್ಮ್ ಸಿಡಿ ತೀರಾ ಆಕಸ್ಮಿಕವಲ್ಲ. ಉಡುಪಿಯಲ್ಲಿ ರಘುಪತಿ ಭಟ್‌ಗೆ ಟಿಕೆಟ್ ನೀಡಬಾರದು ಎಂದು ಸ್ವತಃ ಬಿಜೆಪಿಯೊಳಗೆ ಕೆಲವರು ಹೋರಾಟ ನಡೆಸುತ್ತಿದ್ದರು. ಆದರೆ ಇದಾವುದಕ್ಕೂ ಕಿವಿಗೊಡದ ರಘುಪತಿ ಭಟ್, ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಬಹುತೇಕ ಬಿಜೆಪಿಯೊಳಗಿನಿಂದಲೇ ಈ ಸಿಡಿ ಹೊರ ಬಿದ್ದಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಸಿಡಿಯ ಕುರಿತಂತೆ ರಘುಪತಿ ಭಟ್ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿರುವ ವ್ಯಕ್ತಿ ತಾನಲ್ಲ ಎನ್ನುವುದನ್ನು ಖಡಾಖಂಡಿತ ವಾಗಿ ಹೇಳಲು ಹಿಂಜರಿಯುತ್ತಿದ್ದಾರೆ.
ಇದು ರಾಜಕೀಯ ಸಂಚು ಎನ್ನುವುದೇನೋ ಸರಿ. ಆದರೆ ಸಿಡಿಯನ್ನು ನಕಲಿಯೆಂದು ನಿರಾಕರಿಸಿ ಬಿಡುವುದು ಅಷ್ಟು ಸುಲಭವಲ್ಲ. ತನಿಖೆಯಿಂದಷ್ಟೇ ಸತ್ಯಾಸತ್ಯ ಎದ್ದು ಬರಬೇಕು.ಒಟ್ಟಿನಲ್ಲಿ ಈ ಪ್ರಕರಣದಿಂದಾಗಿ ಪದ್ಮಪ್ರಿಯಾ ಮತ್ತೊಮ್ಮೆ ನೆನಪಾಗಿದ್ದಾರೆ. ಆಕೆಯ ಕಣ್ಣೀರು ಉಡುಪಿಯನ್ನು ಮಾತ್ರವಲ್ಲ ಇಡೀ ಬಿಜೆಪಿಯನ್ನು ಇನ್ನೂ ಕಾಡುತ್ತಿದೆ. ಎಲ್ಲಿಯರೆಗೆ ಪದ್ಮಪ್ರಿಯಾಗೆ ನ್ಯಾಯ ದೊರಕುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ನೆಮ್ಮದಿಯಿಂದ ಇರುವುದು ಸಾಧ್ಯವಿಲ್ಲ ವೇನೋ?
ಒಟ್ಟಿನಲ್ಲಿ ರಘುಪತಿ ಭಟ್‌ರ ರಾಜಕೀಯ ಪದ್ಮಪ್ರಿಯಾ ದೆಸೆಯಿಂದ ಸಂಪೂರ್ಣ ಮುಗಿದಂತಾಗಿದೆ. ಇನ್ನು ಅವರು ಬಿಜೆಪಿಯಲ್ಲಿ ತಲೆಯೆತ್ತುವುದು ತೀರಾ ಕಷ್ಟ. ಯಾವುದೇ ಸರಕಾರ ಬರಲಿ, ಪದ್ಮಪ್ರಿಯಾ ಪ್ರಕರಣವನ್ನು ಮತ್ತೆ ತನಿಖೆಗೆ ಒಳಪಡಿಸಬೇಕಾಗಿದೆ. ಆಕೆಗಾದ ಅನ್ಯಾಯವೇನು? ಆಕೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದವರು ಯಾರು? ಎಂಬಿತ್ಯಾದಿಗಳು ತನಿಖೆಯಿಂದ ಹೊರಬಂದು ಸಂತ್ರಸ್ತೆಗೆ ನ್ಯಾಯ ಸಿಗಬೇಕು. ಇನ್ನೊಮ್ಮೆ ತನ್ನ ಅಧಿಕಾರ ಬಲದಿಂದ ಹೆಣ್ಣಿಗೆ ಅನ್ಯಾಯ ಬಗೆಯುವ ಧೈರ್ಯವನ್ನು ಯಾವ ರಾಜಕಾರಣಿಯೂ ತೋರಿಸಬಾರದು. ಉಡುಪಿಯಲ್ಲಿ ಸ್ಪರ್ಧಿಸುವ ಯಾವನೇ ಶಾಸಕ ಅಭ್ಯರ್ಥಿ ಜನರಿಗೆ ಈ ಕುರಿತ ಭರವಸೆಯನ್ನು ನೀಡಬೇ
ಕೃಪೆ:ವಾ.ಭಾರತಿ 

No comments:

Post a Comment