Tuesday, March 19, 2013

ಐವರು ಸಹೋದರರಿಗೆ ಈಕೆಯೊಬ್ಬಳೇ ಮುದ್ದಿನ ಮಡದಿ!

  ಡೆಹ್ರಾಡೂನ್: ಈಕೆಯ ವಯಸ್ಸು ಇಪ್ಪತ್ತೊಂದು, ಹೆಸರು ರಾಜೋ ವರ್ಮಾ. ಐದು ಜನ ಸಹೋದರರಿಗೆ ಈಕೆ ಒಬ್ಬಳೇ ಮುದ್ದಿನ ಹೆಂಡತಿ. ರೋಟೇಷನ್ ಆದಾರದಲ್ಲಿ ಪ್ರತಿ ರಾತ್ರಿ ಸಹೋದರರಲ್ಲಿ ಒಬ್ಬರಿಗೆ ದೈಹಿಕ ಸುಖ. ಇದು ಈಕೆಯ ಒನ್ ಲೈನ್ ದಿನಚರಿ. ಈಕೆಗೆ ಈಗ ಹದಿನೆಂಟು ತಿಂಗಳ ಗಂಡು ಮಗುವಿದೆ, ಮಗುವಿಗೆ ಅಪ್ಪ ಯಾರು? ಮನೆಯೊಡತಿ ರಾಜೋ ವರ್ಮಾಗೆ ಈ ಬಗ್ಗೆ ಐಡಿಯಾ ಇಲ್ಲ, ಬೇಕಾಗಿಯೂ ಇಲ್ಲ ಎನ್ನುವುದು ವಿಪರ್ಯಾಸ. ಈಕೆಯ ಮೊದಲ ಗಂಡನ ಹೆಸರು ಗುಡ್ಡು. ಸಹೋದರರ ಜೊತೆ ನನ್ನ ಹೆಂಡತಿ ದೈಹಿಕ ಸುಖ ಅನುಭವಿಸುತ್ತಿರುವುದಕ್ಕೆ ನನಗೆ ಬೇಸರವಾಗಲಿ ಅಥವಾ ಹೊಟ್ಟೆಕಿಚ್ಚಾಗಲಿ ಇಲ್ಲ ಎಂದು ಖುಷಿ ಖುಷಿಯಿಂದ ಬೆನ್ನು ತಟ್ಟಿಕೊಳ್ಳುತ್ತಾನೆ ಈಕೆಯ ಪುಣ್ಯಾತ್ಮ ಮೊದಲ ಗಂಡ. ಐದು ಜನ ಗಂಡಂದಿರ ಜೊತೆ ಹಾಸಿಗೆ ಹಂಚಿ ಕೊಳ್ಳುವುದು ಮೊದಮೊದಲು ಸರಿಯಾದ ನಿರ್ಧಾರವಲ್ಲವೆಂದು ಅನಿಸಿದರೂ ಬದಲಾದ ಸನ್ನಿವೇಶದಲ್ಲಿ ಎಲ್ಲರಿಗೂ ದೈಹಿಕ ಸುಖ ನೀಡುವುದು ಹೆಂಡತಿಯಾದ ನನ್ನ ಧರ್ಮವೆನ್ನುತ್ತಾಳೆ ಈಕೆ.
ಕೃಪೆ: ವನ್ ಇಂಡಿಯಾ 

No comments:

Post a Comment