Friday, March 29, 2013

ಸೌದಿ ಅರೇಬಿಯಾದಲ್ಲಿ ಉದ್ಯೋಗ ಸ್ವದೇಶೀಕರಣ: ಮಂಜೇಶ್ವರ ಜನತೆ ಆತಂಕದಲ್ಲಿ*ರಹಿಮಾನ್ ಉದ್ಯಾವರ
ಮಂಜೇಶ್ವರ:ಇದೀಗ ಸೌದಿ ರಾಷ್ಟ್ರವು ತನ್ನ ಪ್ರಜೆಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ಒಂದೇ ಒಂದು ಉದ್ದೇಶದಿಂದ ಹೊರ ರಾಷ್ಟ್ರದ  ಪ್ರವಾಸಿಗಳನ್ನು ಯಾವುದಾದರೊಂದು ನೆಪವೊಡ್ಡಿ ಸೌದಿ ಪೊಲೀಸ್ ಹಿಡಿದು ಜೈಲಿಗೆ ಅಟ್ಟಿ ತನ್ನ ದೇಶಕ್ಕೆ ವಾಪಾಸು ಕಳಿಸುತ್ತಿದೆ.ಇದರಿಂದ ಮಂಜೇಶ್ವರ ಮಾತ್ರವಲ್ಲ ಕಾಸರಗೋಡು ಜಿಲ್ಲೆಯ ಜನತೆಯಲ್ಲೇ ಇದೊಂದು ಭಾರೀ ಆತಂಕವನ್ನು ಹುಟ್ಟಿಸಿದೆ.
ಕುಂಜತ್ತೂರು,ಮಂಜೇಶ್ವರ,ಉಪ್ಪಳ,ಕುಂಬಳೆಯ ಅತ್ಯಧಿಕ ಜನರು ಸೌದಿ ಅರೇಬಿಯಾದ ಹಲವು ಕಡೆಗಳಲ್ಲಿ ಉದ್ಯೋಗವನ್ನು ಹರಸಿಕೊಂಡು ಹೋಗಿ ಅಲ್ಲಿ ನೆಲೆ ನಿಂತಿದ್ದಾರೆ.ಇದೀಗ ಸೌದಿ ಅರೇಬಿಯಾವು ನೂತನವಾಗಿ ಜಾರಿಗೆ ತಂದ ಹೊಸ ನಿಯಮದಿಂದ ಎಲ್ಲಾ ಪ್ರವಾಸಿಗಳು ಉದ್ಯೋಗವಿಲ್ಲದೆ ವಸತಿಯಿಂದ ಹೊರಬಾರದ ಸ್ಥಿತಿಯಲ್ಲಿ ಅತಂತ್ರರಾಗಿದ್ದಾರೆ.ಇದೀಗ ಕಳೆದ ಕೆಲವು ದಿನಗಳಿಂದ ಸೌದಿ ಪೊಲೀಸರು ಹೊರರಾಜ್ಯದ ಪ್ರವಾಸಿಗಳಿರುವ ವಸತಿ ಗೃಹಗಳಿಗೂ ನುಗ್ಗಿ ತಪಾಸನೆಯನ್ನು ಆರಂಭಿಸಿದ್ದಾರೆ.ಇದೀಗ ಮಂಜೇಶ್ವರ, ಉಪ್ಪಳ, ಕುಂಬಳೆ ಸಹಿತ ಕಾಸರಗೋಡು ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಹೋದ  ಪ್ರವಾಸಿಗಳು ಅತ್ಯಧಿಕವಿರುವ ರಿಯಾದ್ ಪಟ್ಟಣದಲ್ಲಿ ಬಿಗು ತಪಾಸನೆ ನಡೆಯುತ್ತಿದೆ.ಇದೀಗ ಹಲವರು ಉದ್ಯೋಗಗಳನು ಕಳೆದುಕೊಂಡು ತಾಯ್ನಾಡಿಗೆ ಮರಳಬೇಕಾದ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ.
ಸೌದಿ ಅರೇಬಿಯಾದಲ್ಲಿ ಭಾರತೀಯರೂ ಸೇರಿದಂತೆ 20 ಲಕ್ಷ ದಕ್ಷಿಣ ಏಷ್ಯಾದ ಕಾರ್ಮಿಕರು ಅಲ್ಲಿನ ವಿವಿಧ ವಲಯಗಳಲ್ಲಾಗಿ ದುಡಿಯುತಿದ್ದಾರೆ.ಇವರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು ಭಾರತೀಯರ ಪೈಕಿ ಹೆಚ್ಚಿನವರು ಕೇರಳದವರು ಇದರಲ್ಲೂ ಅತ್ಯಧಿಕ ಜನರು ಕಾಸರಗೋಡು ಜಿಲ್ಲೆಯವರಾಗಿದ್ದಾರೆ.ಹಲವು ಅರಬ್ ರಾಷ್ಟ್ರಗಳಲ್ಲಿ ಇತ್ತೀಚೆಗೆ ಭಾರೀ ಕ್ರಾಂತಿ ಆರಂಭಗೊಂಡಿದ್ದು,ಹಲವೆಡೆಗಳಲ್ಲಿ ರಾಜಾಡಳಿತವಿರುವ ಸರಕಾರದ ವಿರುದ್ದವೇ ಜನರು ರೊಚ್ಚಿಗೆದ್ದು ಹೋರಾಟಕ್ಕಿಳಿದುದ್ದು ಇದರ ಪರಿಣಾಮ ಹಲವು ಅರಬ್ ರಾಷ್ಟ್ರಗಳು ಕುಸಿದು ಬಿದ್ದಿವೆ.ಇಂತಹ ಬಂಡಾಯ ತಮ್ಮ ದೇಶದಲ್ಲೂ ತಲೆ ಎತ್ತದಿರಲಿ ಹಾಗು ನಮ್ಮ ಪ್ರಜೆಗಳಿಗೆ ಉದ್ಯೋಗವಕಾಶ ದೊರಕಿಸುವ ಉದ್ದೇಶದಿಂದ ಸೌದಿ ರಾಜ್ಯವು ರೀತಿಯ ಕ್ರಮಕ್ಕೆ ಚಾಲನೆ ನೀಡಿದೆ.ಎಲ್ಲಾ ಸೌದಿ ಉದ್ಯೋಗ ಸಂಸ್ಥೆಗಳಲ್ಲೂ ನಿಗದಿತ ಪ್ರಮಾಣದ ಉದ್ಯೋಗವನ್ನು ಸ್ವಂತ ಪ್ರಜೆಗಳಿಗೆ ಮಾತ್ರ ನೀಡಲು ಸೌದಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸೌದಿ ಸರಕಾರ ಮುನ್ನೆಚ್ಚರಿಕೆ ನೀಡಿದೆ.
ಪ್ರತಿಯೊಬ್ಬ ಪ್ರವಾಸಿಯೂ ಈಗ ಸೌದಿ ಸ್ಪಾನ್ಸರ್(ಉದ್ಯೋಗ ಪ್ರಾಯೋಜಕನ) ಜತೆಯಾಗಿಯೇ ಕೆಲಸಮಾಡಬೆಕಾಗುತ್ತದೆ.ಫ್ರೀ ವೀಸಾದಲ್ಲಿರುವವರನ್ನು ಸೆರೆ ಹಿಡಿಯಲಾಗುತ್ತಿದೆ. ಡ್ರೈವರ್ ವೀಸಾದಲ್ಲಿ ಹೋದವರು ಅಧಿಕ ಜನರೂ ಸ್ಪಾನ್ಸರ್ (ಉದ್ಯೋಗ ಪ್ರಾಯೋಜಕನಿಗೆ) ಗೆ ವರ್ಷದಲ್ಲಿ ಇಂತಿಷ್ಟು ಪಾವತಿಸಿ ಸೌದಿ ಸರಕಾರದ ಕಣ್ಣಿಗೆ ಮಣ್ಣೆರಚಿ ಉದ್ಯೋಗ ಅಥವಾ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡುತಿದ್ದರು.ಆದರೆ ಇದೀಗ ಹೊಸ ಕಾನೂನುನಿಂದ ಇಂತವರನ್ನು ಸೆರೆ ಹಿಡಿದು ಊರಿಗೆ ಕಳಿಸಲಾಗುತ್ತಿದೆ.ಸೌದಿ ಅರೇಬಿಯಾದಲ್ಲಿ ನಿನ್ನೆಯಿಂದ ತಪಾಸನೆ ಬಿಗಿಯಾಗಿದ್ದು ಉದ್ಯೋಗ ಸಂಸ್ಥೆಗಳು ಹಾಗು ವ್ಯಾಪಾರಿ ಕೇಂದ್ರಗಳಿಗೆ ಧಾಳಿ ನಡೆಯುತ್ತಿದೆ.ಜತೆಯಾಗಿ ರೂಂ ನಲ್ಲಿ ಇದ್ದವರನ್ನು ಸೆರೆ ಹಿಡಿಯಲಾಗುತ್ತಿದೆ.ನಿಯಮವನ್ನು ಉಲ್ಲಂಘಿಸಿದವರ ವಿರುದ್ದ ಶಿಕ್ಷಾ ಕ್ರಮ ಕೈಗೊಳ್ಳಲು ಕೂಡಾ ಸೌದಿ ಸರಕಾರ ಆದೇಶಿಸಿದೆ. ರಿಯಾದ್ ಹೊಳೆಯಾ, ಬತ್ತಾ, ನಾಸರಿಯಾ, ಸನಯಿಯಾ, ಉಮ್ಮುಲ್ ಹಮ್ಮಾಮ್ ಮೊದಲಾದ ಸ್ಥಳಗಳಲ್ಲೆಲ್ಲಾ ಹೆಚ್ಚಿನವರು ತಪಾಸನೆಗೆ ಹೆದರಿ ನಿನ್ನೆಯಿಂದ ಕೆಲಸಕ್ಕೆ ಹೋಗಿಲ್ಲ.ಅದೇ ರೀತಿ ಹೊರಗೆ ಹೋಗಲೂ ಸಾದ್ಯವಾಗದೆ ದಿಗ್ಬಂಧನ ರೀತಿಯಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿದು ಬಂದಿದೆ.


No comments:

Post a Comment