Sunday, March 24, 2013

ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣ: ಪತ್ರಕರ್ತ ನವೀನ್ ಬಿಡುಗಡೆ


ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣ: ಪತ್ರಕರ್ತ ನವೀನ್ ಬಿಡುಗಡೆ- ಮಾರ್ಚ್ -24-2013

ಮಂಗಳೂರು, : ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಆರೋಪಿಗಳಲ್ಲೊಬ್ಬರಾಗಿ ಬಂಧಿತ ರಾಗಿದ್ದ ಮಾಧ್ಯಮ ವರದಿಗಾರ ನವೀನ್ ಸೂರಿಂಜೆ ಮಂಗಳೂರು ಸಬ್‌ಜೈಲ್‌ನಿಂದ ಶನಿವಾರ ಸಂಜೆ ಬಿಡುಗಡೆಗೊಂಡಿದ್ದಾರೆ.
ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿಯ ಪ್ರಕರಣದಲ್ಲಿ ನವೀನ್‌ರ ಪಾತ್ರ ಇಲ್ಲ. ನವೀನ್ ದಾಳಿಗೆ ಪ್ರಚೋದನೆಯನ್ನೂ ನೀಡಿಲ್ಲ. ಬದಲಾಗಿ ದಾಳಿ ತಡೆಯಲು ಪ್ರಯತ್ನಿಸಿ ದ್ದಾರೆ ಎಂದು ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ ವಿಜಯಕುಮಾರ್ ನೀಡಿದ ಹೇಳಿಕೆಯನ್ನು ಆಧರಿಸಿ ಕಳೆದ ಮಾ.18 ರಂದು ನವೀನ್‌ಗೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸ ಬೇಕಿದ್ದ ಐದು ಲಕ್ಷ ರೂ. ಬಾಂಡನ್ನು ಮಂಗಳೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನವೀನ್‌ರ ಬಾವ ಜಗನ್ನಾಥ ಶೆಟ್ಟಿ ಸಲ್ಲಿಸಿದ ಬಳಿಕ ನವೀನ್ ಬಿಡುಗಡೆಯ ಪ್ರಕ್ರಿಯೆ ಪೂರ್ಣ ಗೊಂಡಿತ್ತು. ಇಂದು ಸಂಜೆ 6 ಗಂಟೆಯ ಸುಮಾರಿಗೆ ನವೀನ್ ಸೂರಿಂಜೆ ಮಂಗಳೂರು ಸಬ್‌ಜೈಲ್‌ನಿಂದ ಬಿಡು ಗಡೆಯಾಗಿ ಹೊರಬಂದರು.
ಈ ಸಂದರ್ಭದಲ್ಲಿ ಪಿಯುಸಿಎಲ್ ರಾಜ್ಯ ಅಧ್ಯಕ್ಷ ಪಿ.ಬಿ.ಡೇಸಾ, ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಕಾರ್ಪೊರೇಟರ್ ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲಾಧ್ಯಕ್ಷ ಮುನೀರ್ ಕಾಟಿಪಳ್ಳ, ನಾಯಕರಾದ ಬಿ.ಕೆ. ಬದ್ರುದ್ದೀನ್, ಸಂತೋಷ ಬಜಾಲ್, ಸೌಮ್ಯಾ, ಡಿಎಸ್‌ಎಸ್ ನಾಯಕ ಕೃಷ್ಣಾನಂದ, ನವೀನ್‌ರ ಬಂಧುಮಿತ್ರರು ಉಪಸ್ಥಿತರಿದ್ದು ಅವರನ್ನು ಸ್ವಾಗತಿಸಿದರು. ಸಬ್‌ಜೈಲ್‌ನ ಹೊರಗೆ ಪತ್ರಕರ್ತರು, ಹಿತೈಷಿಗಳು ನವೀನ್‌ರನ್ನು ಸ್ವಾಗತಿಸಲು ಕಾದಿದ್ದರೆ, ಜೈಲಿನಲ್ಲಿ ಕೈದಿಗಳು ಜಯ ಘೋಷದೊಂದಿಗೆ ಬೀಳ್ಕೊಟ್ಟರು.
ಮುಂದಿನ ಹೋರಾಟ ನಿರ್ಧರಿ ತವಾಗಿಲ್ಲ: 
ನವೀನ್ ಜಾಮೀನಿನ ಮೇಲೆ ಬಿಡುಗಡೆ ಯಾಗುವುದ ರೊಂದಿಗೆ ಕಾನೂನಿನ ಹೋರಾಟದ ಹಲವು ಬಾಗಿಲುಗಳು ತೆರೆದುಕೊಂಡಿವೆ. ಈಗ ಒಂದು ಹಂತದ ಜಯ ಸಿಕ್ಕಿದೆ. ಮುಂದಿನ ಹಂತದಲ್ಲಿ ಪ್ರಕರಣದ ವಿಚಾರಣೆಯಲ್ಲಿ ಈಗಿರುವಂತೆಯೇ ಭಾಗವಹಿಸುವ, ಇಲ್ಲವೆ ಕಾನೂನಿ ಅನ್ಯ ಮಾರ್ಗದಲ್ಲಿ ಸಾಗುವ ವಿಷಯವಾಗಿ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂಬುದಾಗಿ ನವೀನ್ ಪರ ವಕೀಲ ಸತೀಶ್ ಬಂಟ್ವಾಳ್ ತಿಳಿಸಿದ್ದಾರೆ. ಹೋರಾಟಕ್ಕೆ ಸಂದ ಜಯ:  ನೈತಿಕ ಪೊಲೀಸ್‌ಗಿರಿಯ ವಿರುದ್ಧ ಮಾಧ್ಯಮ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಹೋ ಸ್ಟೇ ದಾಳಿ ಪ್ರಕರಣದಲ್ಲಿ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ನವೀನ್‌ರನ್ನು ಬಂಧಿಸಿದ್ದರು. ಹೈಕೋರ್ಟ್ ಮಧ್ಯ ಪ್ರವೇಶದಿಂದ ನವೀನ್‌ಗೆ ಜಾಮೀನು ದೊರಕಿದ್ದು, ಇದು ಅವರ ಹೋರಾಟಕ್ಕೆ ದೊರೆತಿರುವ ನೈತಿಕ ಜಯ ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
‘ಬಿಡುಗಡೆಯ ನಿರೀಕ್ಷೆ ಇರಲಿಲ್ಲ’
ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ.7 ರಂದು ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ನವೀನ್‌ರ ಬಿಡುಗಡೆಗೆ ಈವರೆಗೆ ಹಲವು ರೀತಿಯ ಹೋರಾಟಗಳು ನಡೆದಿದ್ದವು. ನಾಲ್ಕೂವರೆ ತಿಂಗಳ ಬಂಧನದ ಬಳಿಕ ಇಂದು ಬಿಡುಗಡೆಯಾದ ನವೀನ್‌ರನ್ನು ಸ್ವಾಗತಿಸಲು ಅವರ ತಂದೆ-ತಾಯಿ ಬಂದಿರಲಿಲ್ಲ. ಈ ವಿಷಯವಾಗಿ ನವೀನ್‌ರ ಬಾವ ಜಗನ್ನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ, ‘‘ನವೀನ್ ಬಿಡುಗಡೆಯಾ ಗುತ್ತಾನೆ ಎಂದು ಈ ಹಿಂದೆ ಹಲವು ಬಾರಿ ಜೈಲಿನ ಬಾಗಿಲಿಗೆ ಬಂದಿದ್ದ ಆತನ ತಂದೆ ತಾಯಿ ಹತಾಶರಾಗಿ ಹಿಂದಿರುಗಿದ್ದೇ ಹೆಚ್ಚು. ಜಾಮೀನಿನ ನಿರೀಕ್ಷೆ ಹುಟ್ಟಿದ ಸಮಯದಲ್ಲಿ ಯಾವುದಾದರೂ ತಾಂತ್ರಿಕ ತೊಡಕಿನ ಕಾರಣದಿಂದ ಬಿಡುಗಡೆಯಾಗುತ್ತಿರಲಿಲ್ಲ. ಅದೇ ರೀತಿ ಇಂದು ಕೂಡಾ ಆದಲ್ಲಿ ಇಲ್ಲಿಯವರೆಗೆ ಬಂದು ಹತಾಶ ರಾಗಿ ದುಃಖದೊಂದಿಗೆ ಹಿಂದಿರು ಗುವುದು ಬೇಡ ಎಂದವರು ಬಂದಿಲ್ಲ’’ ಎಂದರು
ಕೃಪೆ ವಾ.ಭಾರತಿ 

No comments:

Post a Comment