Saturday, March 2, 2013

ಚಿನ್ನದ ಮೇಲೆ ಆಮದು ಸುಂಕವಿಲ್ಲ



ಹೊಸದಿಲ್ಲಿ: ಪ್ರಸಕ್ತ ಹಣಕಾಸು ಪರಿಸ್ಥಿತಿಯು ವಿತ್ತೀಯ ಕೊರತೆಗಿಂತಲೂ ದೊಡ್ಡ ತಲೆ ನೋವಾಗಿದೆ ಎಂದಿರುವ ಹಣಕಾಸು ಸಚಿವ ಚಿದಂಬರಂ, ಚಿನ್ನದ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಹೆಚ್ಚಿಸಲು ನಿರಾಕರಿಸಿದ್ದಾರೆ.
ಕಳೆದ ಜನವರಿಯಲ್ಲಿ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕಾಗಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಸರಕಾರ ಆಮದು ಸುಂಕವನ್ನು ಶೇ. 4ರಿಂದ ಶೇ. 6ಕ್ಕೆ ಹೆಚ್ಚಿಸಿತ್ತು.
ಆದರೆ ಫೆ. 20ರ ನಂತರ ಚಿನ್ನದ ಬೆಲೆ ಕುಸಿದಿದ್ದರಿಂದ ಮತ್ತಷ್ಟು ಆಮದು ಸುಂಕ ಏರಿಕೆಗೆ ಸರಕಾರ ಮುಂದಾಗಿಲ್ಲ. ಆಮದು ಸುಂಕವನ್ನು ಮತ್ತಷ್ಟು ಏರಿಕೆ ಮಾಡಿದಲ್ಲಿ ಕಳ್ಳ ಸಾಗಣೆ ಹೆಚ್ಚಾಗಬಹುದು ಮತ್ತು ಅಕ್ರಮಗಳು ನಡೆಯಬಹುದು ಎಂಬ ಕಾರಣದಿಂದ ಸರಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಏರಿಕೆ ಮಾಡಲು ಹಿಂದೇಟು ಹಾಕಿದೆ ಎಂದು ವಿಶ್ಲೇಷಿಸಲಾಗಿದೆ.

No comments:

Post a Comment