Sunday, March 10, 2013

ಮೂಡುಬೆಳ್ಳೆ ಪ್ರಾರ್ಥನಾ ಮಂದಿರಕ್ಕೆ ಬಜರಂಗದಳದ ದಾಳಿಉಡುಪಿ, ಮಾ.9: ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ಕುದುರೆಮಲೆಯ ಮನೆಯೊಂದರಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಕೂಟಕ್ಕೆ ಮಾ.೮ರಂದು ರಾತ್ರಿ ೧೦:೩೦ರ ಸುಮಾರಿಗೆ ಹಠಾತ್ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು, ವೃದ್ಧೆಯೊಬ್ಬಳು ಸೇರಿದಂತೆ ಹಲವು ಮಂದಿ ಪ್ರಾರ್ಥನಾ ನಿರತರಿಗೆ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಪುಡಿಗೈದಿದ್ದಾರೆ. ಕಟ್ಟಿಂಗೇರಿಯ ರೋಶನ್ ರಾಜೇಶ್ ಲೋಬೊ ಎಂಬವರ ಮನೆಯಲ್ಲಿ ಸ್ಥಾಪಿಸಲಾಗಿರುವ ‘ವರ್ಡ್ಸ್ ಆಫ್ ವಿಕ್ಟರಿ’ ಎಂಬ ಪ್ರಾರ್ಥನಾ ಮಂದಿರ ದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿರ್ವ ಮಟ್ಟಾರಿನ ಬಜರಂಗದಳದ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿ ದಂತೆ ಒಟ್ಟು 19 ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿರ್ವ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಂತಹ ಘಟನೆಗಳು ಸಂಭವಿಸಿದಾಗ ಸಾರ್ವಜನಿಕರು ತಕ್ಷಣ ಮಾಹಿತಿ ನೀಡು ವುದರಿಂದ ಆರೋಪಿಗಳ ವಿರುದ್ಧ ಕ್ರಮ ಜರಗಿಸಲು ಸಹಕಾರಿ ಯಾಗುತ್ತದೆ.
ಇದರಿಂದ ಇಂತಹ ಘಟನೆಗಳನ್ನು ತಡೆಗಟ್ಟಬಹುದು ಎಂದರು.ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯನವರನ್ನು ಘಟನೆಯ ಕುರಿತು ಪ್ರಶ್ನಿಸಿದಾಗ, ಘಟನಾ ಸ್ಥಳದಲ್ಲಿ ಪ್ರಾರ್ಥನೆ ನಡೆಯುತ್ತಿರುವ ಕುರಿತು ಮಾಹಿತಿ ಇದೆಯೇ ಹೊರತು ಅಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿ ಮತಾಂತರ ನಡೆದಿಲ್ಲ... ಒತ್ತಡ ಹೇರಿಲ್ಲ’
‘ಇಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿಲ್ಲ. ಪ್ರಾರ್ಥನೆಗೆ ಬರುವಂತೆ ಯಾರಿಗೂ ಒತ್ತಡ ಹೇರುತ್ತಿಲ್ಲ. ತಾವು ಸ್ವಇಚ್ಛೆಯಿಂದಲೇ ಪ್ರಾರ್ಥನೆಗೆ ಆಗಮಿಸಿದ್ದೇವೆ. ಕಳೆದ ೧೨ ವರ್ಷಗಳಿಂದ ನಾನು ಕುಟುಂಬ ಸಮೇತವಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ’ ಎಂದು ಬಜರಂಗದಳದವರಿಂದ ಹಲ್ಲೆಗೆ ಒಳಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಟ್ಟಾರಿನ ಜನಾರ್ದನ ಆಚಾರ್ಯ ಪತ್ರಿಕೆಗೆ ತಿಳಿಸಿದ್ದಾರೆ. ಮಣಿಪಾಲದ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಅಜೆಕಾರಿನ ಸೂರ್ಯ ಎಂಬವರ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದೆ.

No comments:

Post a Comment