Monday, March 18, 2013

ಕಲ್ಲಡ್ಕ: ಸಮಸ್ತ ಮಹಾಸಮ್ಮೇಳನ, ಸನ್ಮಾನ ಸಮಾರಂಭ


ಕಲ್ಲಡ್ಕ: ಸಮಸ್ತ ಮಹಾಸಮ್ಮೇಳನ, ಸನ್ಮಾನ ಸಮಾರಂಭ
ಮಾರ್ಚ್ -18-2013

ಬಂಟ್ವಾಳ: ಸಮಸ್ತ ಮದ್ರಸ ಮ್ಯಾನೇಜ್‌ಮೆಂಟ್‌ನ ವಿಟ್ಲ ರೇಂಜ್ ಆಶ್ರಯದಲ್ಲಿ ಕರ್ನಾಟಕಕ್ಕೆ ಪ್ರಥಮ ಬಾರಿ ಆಗಮಿಸಿದ ಸಮಸ್ತದ ನೂತನ ಅಧ್ಯಕ್ಷ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್‌ರಿಗೆ ಸನ್ಮಾನ ಹಾಗೂ ಸಮಸ್ತ ಮಹಾಸಮ್ಮೇಳನವು ರವಿವಾರ ಸಂಜೆ ಕಲ್ಲಡ್ಕ- ಗೋಳ್ತಮಜಲಿನ ಶಂಸುಲ್ ಉಲಮಾ ನಗರದ ಕಾಳಂಬಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತ ನಾಡಿದ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್, ವಿರೋಧಿಗಳೂ ಕೂಡಾ ಅಂಗೀಕರಿಸುವ ಏಕೈಕ ಪ್ರಶ್ನಾತೀತ ಪ್ರಸ್ಥಾನವಾಗಿದೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎಂದರು. 
ಸನ್ಮಾನ: ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್ ಹಾಗೂ ಕೋಶಾಧಿಕಾರಿ ಶೈಖುನಾ ಪಿ.ಪಿ. ಇಬ್ರಾಹೀಂ ಮುಸ್ಲಿಯಾರ್ ಪಾರನ್ನೂರು ರನ್ನು ಸಮ್ಮೇಳನ ಸ್ವಾಗತ ಸಮಿತಿಯ ಚೆಯರ್‌ಮ್ಯಾನ್ ಹಾಜಿ ಕೆ.ಎಸ್. ಇಸ್ಮಾಯೀಲ್ ಕಲ್ಲಡ್ಕ ಹಾಗೂ ಕನ್ವೀನರ್ ಹಾಜಿ ಜಿ.ಅಬೂಬಕರ್ ಗೋಳ್ತಮಜಲು ಸನ್ಮಾನಿಸಿದರು.
ದ.ಕ. ಜಿಲ್ಲಾ ಸಮಸ್ತ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಆ ನೆರವೇರಿಸಿದರು. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಸ್ಸಮದ್ ಪೂಕೋಟೂರು, ಅಬ್ದುಲ್ ಬಾರಿ ಬಾಖವಿ ಕೊಡುವಳ್ಳಿ, ನಾಸಿರ್ ಫೈಝಿ ಕೂಡತ್ತಾಯಿ ಮುಖ್ಯ ಭಾಷಣಗೈದರು.
ಕಾರ್ಯಕ್ರಮದಲ್ಲಿ ಪಟ್ಟಿಕ್ಕಾಡ್ ಜಾಮಿಯ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಶೈಖುನಾ ಅಲಿಕುಟ್ಟಿ ಉಸ್ತಾದ್, ಸೈಯದ್ ಸ್ವಾಬಿಖಲಿ ಶಿಹಾಬ್ ತಂಙಳ್, ಸೈಯದ್ ಪೂಕೋಯ ತಂಙಳ್ ತೃಕರೀಪುರ, ವಿ.ಕೆ.ಅಬೂಬಕರ್ ಮುಸ್ಲಿಯಾರ್, ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಸೈಯದ್ ಹಬೀಬುರ್ರಹ್ಮಾನ್ ತಂಙಳ್ ಗಡಿಯಾರ, ಸೈಯದ್ ಬಾಅಲವಿ ತಂಙಳ್ ಕುಕ್ಕಾಜೆ, ಸೈಯದ್ ಅಲವಿ ತಂಙಳ್ ವಾಲೆಮುಂಡೋವು, ಸೈಯದ್ ಝೈನುಲ್ ಆಬಿದೀನ್ ತಂಙಳ್ ಕಣ್ಣೂರು, ಸೈಯದ್ ಯಹ್ಯಾ ತಂಙಳ್ ಕೆಐಸಿ ಕುಂಬ್ರ, ಸೈಯದ್ ಶರಫುದ್ದೀನ್ ತಂಙಳ್ ಸಾಲ್ಮರ, ಬಿ.ಕೆ.ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಶೈಖುನಾ ಪಾತೂರು ಅಹ್ಮದ್ ಮುಸ್ಲಿಯಾರ್, ಹಾಜಿ ಮುಹಮ್ಮದ್ ಕುಂಞಿ ಯೆನೆಪೊಯ, ಹಾಜಿ ಕಣಚೂರು ಮೋನು, ಹಾಜಿ ಎಸ್. ಎಂ.ಅಬ್ದುರ್ರಶೀದ್, ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಮುಹಮ್ಮದ್ ಹನೀಫ್ ಮಂಗಳೂರು, ಕೆ.ಅಶ್ರಫ್ ಮಂಗಳೂರು, ಹಾಜಿ ಮುಸ್ತಫಾ ಕೆಂಪಿ ಉಪ್ಪಿನಂಗಡಿ, ಅಬ್ದುರ್ರಹ್ಮಾನ್ ಹಾಜಿ ಹಾಸ್ಕೊ ಮೂಡುಬಿದಿರೆ, ಎಂ.ಎಸ್. ಮುಹಮ್ಮದ್, ಹಾಜಿ ಕೆ.ಪಿ.ಅಹ್ಮದ್ ಆಕರ್ಷಣ್ ಪುತ್ತೂರು, ಹಾಜಿ ನೌಶಾದ್ ಸೂರಲ್ಪಾಡಿ, ಹಾಜಿ ಮಜೀದ್ ಸೂರಲ್ಪಾಡಿ, ಹಾಜಿ ಜಿ.ಅಬ್ದುಲ್ ಖಾದರ್ ಗೋಳ್ತಮಜಲು, ಹಾಜಿ ಐ.ಮೊಯ್ದಿನಬ್ಬ, ಟಿ.ಎಂ.ಶಹೀದ್ ಅರಂತೋಡು, ಹಾಜಿ ಬಿ.ಕೆ. ಮುಹಮ್ಮದ್ ಆತೂರು, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಹಾಜಿ ಅಬ್ದುಲ್ಲತೀಫ್ ಮದರ್ ಇಂಡಿಯಾ, ಹಾಜಿ ಬಿ.ಹುಸೈನ್ ಕೊಡಾಜೆ, ಹಾಜಿ ಮಮ್ಮುಂಞಿ ಸೋನಾ ಮಂಗಳೂರು, ಹಾಜಿ ಎಚ್. ಎಸ್.ಉಸ್ಮಾನ್ ಪಾಣೆಮಂಗಳೂರು, ಹಾಜಿ ಎಸ್.ಅಬ್ಬಾಸ್ ಸಜಿಪ, ಹಾಜಿ ಅಬ್ಬಾಸ್ ಚಕ್ಕಮಕ್ಕಿ, ಹಾಜಿ ಬಿ.ಎಸ್. ಹುಸೈನ್ ಜೋಕಟ್ಟೆ, ಹಾಜಿ ಸಿ.ಕೆ. ಇಬ್ರಾಹೀಂ ಮೊದಲಾದವರು ಭಾಗವಹಿಸಿದ್ದರು.
ಸ್ವಾಗತ ಸಮಿತಿಯ ವೈಸ್ ಕನ್ವೀನರ್ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಕೋಶಾಧಿಕಾರಿ ಕೆ. ಅಬ್ದುಲ್ ಹಮೀದ್ ಹಾಜಿ ವಂದಿಸಿ ದರು. ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನಕ್ಕೆ ಮುಂಚಿತವಾಗಿ ಖ್ಯಾತ ವಿದ್ವಾಂಸ ಎಂ.ಪಿ.ಮುಸ್ತಫಲ್ ಫೈಝಿ ತಿರೂರುರಿಂದ ‘ತ್ವರೀಖತ್ ಸತ್ಯ ಹಾಗೂ ಮಿಥ್ಯ’ ಎಂಬ ವಿಷಯದಲ್ಲಿ ಅಧ್ಯಯನ ಶಿಬಿರ ನಡೆಯಿತು
ಕೃಪೆ: ವಾ.ಭಾರತಿ 

No comments:

Post a Comment