Friday, March 8, 2013

ಅನಧಿಕೃತ ಮರಳು ಸಾಗಾಟ:ರಿಕ್ಷಾ ವಶಕ್ಕೆ ಚಾಲಕ ಪರಾರಿನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರಿಕ್ಷಾವೊಂದರಲ್ಲಿ ಅನಧಿಕೃತವಾಗಿ ಮರಳು ಸಾಗಿಸುತಿದ್ದ ಆಟೋ ವನ್ನು ಪೊಲೀಸರು ಬೆನ್ನಟ್ಟಿದಾಗ ಚಾಲಕ ರಿಕ್ಷಾವನ್ನು ಉಪೇಕ್ಷಿಸಿ ಪರಾರಿಯಾದ ಘಟನೆ ಬಂಗ್ರ ಮಂಜೇಶ್ವರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಹೊಸಂಗಡಿಯಿಂದ ಮಂಜೇಶ್ವರ ಬಾಗಕ್ಕೆ  ರಿಕ್ಷಾದಲ್ಲಿ ಮರಳು ತುಂಬಿಸಿ ಸಂಚರಿಸುತಿದ್ದ ವೇಳೆ ಪೊಲೀಸರು ರಿಕ್ಷಾವನ್ನು ಹಿಂಬಾಲಿಸುತಿದ್ದ ವೇಳೆ ಚಾಲಕ ರಿಕ್ಷಾವನ್ನು ಉಪೇಕ್ಷಿಸಿ ಪರಾರಿಯಾಗಿದ್ದಾನೆ.ಉಪೇಕ್ಷಿಸಿದ ರಿಕ್ಷಾವನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.ಅದರಲ್ಲಿ 7 ಗೋಣಿ ಚೀಲದಲ್ಲಿ ಮರಳನ್ನು ತುಂಬಿಸಿಡಲಾಗಿತ್ತು.

No comments:

Post a Comment