Friday, March 22, 2013

ವೃದ್ಧೆಯ ಚಿನ್ನಾಭರಣ ದೋಚಿದ ಸಾಧುವಿನ ಬಂಧನಮಾರ್ಚ್ -23-2013

ಕೋಲ್ಕತಾ: ನಗರದ ಕ್ಯಾಮಕ್ ಮತ್ತು ಶೇಕ್ಸ್‌ಪಿಯರ್ ಸರಾನಿ ಮುಂತಾದ ಬೀದಿಗಳ ಭವ್ಯ ಸ್ಥಳಗಳಲ್ಲಿ ಮನೆಗಳಲ್ಲಿ ಭಿಕ್ಷೆ ಬೇಡುವ ಸಾಧು ಶನಿ ಮಹಾರಾಜ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಭಿಕ್ಷೆ ಬೇಡುವ ನೆಪದಲ್ಲಿ ಕ್ಯಾಮಕ್ ಸ್ಟ್ರೀಟ್‌ನ ಮನೆಯೊಂದಕ್ಕೆ ನುಗ್ಗಿ ಅಲ್ಲಿ ವಾಸಿಸುವ ಹಿರಿಯ ಮಹಿಳೆ ಶಕುಂತಲಾ ದೇವಿ ಲಾಡಿಯರಿಗೆ ಹಲ್ಲೆ ನಡೆಸಿ ಆಕೆಯ ಚಿನ್ನಾಭರಣಗಳೊಂದಿಗೆ ಪರಾರಿಯಾದ ಆರೋಪವನ್ನು ಸಾಧು ವಿರುದ್ಧ ಹೊರಿಸಲಾಗಿದೆ.
ಆರೋಪಿಯನ್ನು ಹೌರಾದ ಬೌರಿಯದಲ್ಲಿರುವ ಆತನ ಅಡಗುದಾಣದಿಂದ ಬಂಧಿಸಲಾಗಿದೆ. ಆತನನ್ನು ಪ್ರಕಾಶ್ ಶರ್ಮಾ (29) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ನೀಡಿದ ಹೇಳಿಕೆಯ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕೃಪೆ:ವಾ.ಭಾರತಿ 

No comments:

Post a Comment