Thursday, March 7, 2013

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ವಿರೋಧಿ ಬರಹ: ವಿದ್ಯಾರ್ಥಿಗಳಿಂದ ಪ್ರತಿಭಟನೆ


ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ವಿರೋಧಿ ಬರಹ: ವಿದ್ಯಾರ್ಥಿಗಳಿಂದ ಪ್ರತಿಭಟನೆ


ಕಾಸರಗೋಡು, ಮಾ.6: ಕಾಸರಗೋಡು ಸರಕಾರಿ ಕಾಲೇಜಿ ನಲ್ಲಿ ಕನ್ನಡ ವಿರೋಧಿ ಬರಹಗಳು ಪ್ರತ್ಯಕ್ಷಗೊಂಡಿವೆ. ಬುಧವಾರ ಬೆಳಗ್ಗೆ ಕಾಲೇಜಿನ ಗೋಡೆ ಮತ್ತು ನೋಟಿಸ್ ಬೋರ್ಡ್ ಗಳಲ್ಲಿ ಕನ್ನಡ ವಿರೋಧಿ ಬರಹಗಳು ಕಂಡು ಬಂದಿದ್ದು, ಇದು ಅಲ್ಪ ಸಮಯ ಗೊಂದಲಕ್ಕೆ ಕಾರಣ ವಾಗಿತ್ತು.
‘ಇದು ಕರ್ನಾಟಕವಲ್ಲ, ಇದು ಮಲಯಾಳಿಗಳ ಕೇರಳ. ನಿಮಗೆ ಇಲ್ಲಿ ಯಾವುದೇ ಅವಕಾಶವಿಲ್ಲ’ ಎಂಬ ಮಲಯಾಳಂ ಬರಹಗಳು ಕಾಲೇಜಿನ ಗೋಡೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಇದರ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದಿಗ್ಬಂಧನ ವಿಧಿಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಾಂಶುಪಾಲರ ಸಮ್ಮುಖದಲ್ಲಿ ವಿದ್ಯಾರ್ಥಿ ಗಳೊಂದಿಗೆ ಮಾತುಕತೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.
ಕಳೆದ ಸಾಲಿನ 170 ಪುಟಗಳ ಕಾಲೇಜು ಮ್ಯಾಗಝಿನ್ ನಲ್ಲಿ ಕನ್ನಡಕ್ಕೆ ಕೇವಲ ಒಂದು ಪುಟವನ್ನು ಮಾತ್ರ ಮೀಸಲಿರಿ ಸಲಾಗಿತ್ತು. ಇಂಗ್ಲಿಷ್‌ಗೆ 4 ಪುಟಗಳು ಮೀಸಲಿದ್ದವು. ಉಳಿ ದಂತೆ ಎಲ್ಲವೂ ಮಲಯಾಳಮಯವಾಗಿತ್ತು. ಇದರ ವಿರುದ್ಧ ಕನ್ನಡ ವಿದ್ಯಾರ್ಥಿಗಳು ಸೋಮವಾರ ವೌನ ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದರು. ಇದರ ಬೆನ್ನಿಗೆ ಇಂದು ಬೆಳಗ್ಗೆ ಕನ್ನಡ ವಿರೋಧಿ ಬರಹಗಳು ಪ್ರತ್ಯಕ್ಷಗೊಂ ಡಿದ್ದು, ಕಾಲೇಜಿನಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ

No comments:

Post a Comment