Monday, March 25, 2013

ಉದ್ಯಾವರ ಶ್ಮಶಾನದ ಬಳಿ ದುಷ್ಕರ್ಮಿಗಳ ಅಟ್ಟಹಾಸನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಉದ್ಯಾವರ ಶ್ಮಶಾನ ಗುಡ್ಡೆ ಬಳಿ ದುಷ್ಕರ್ಮಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತಿದ್ದು ಕಳೆದ ರಾತ್ರಿ ಕೇರಳ ವಾಟರ್ ಆಥೋರಿಟಿ ವಾಟರ್ ಟ್ಯಾಂಕೊಂದರ ಪೈಪನ್ನು ಕತ್ತರಿಸಿ ರಾತ್ರಿ ಇಡೀ ನೀರು ಹರಿದು ಹೋಗಿ ಬೆಳಗ್ಗೆ ಸುತ್ತ ಮುತ್ತ ಸುಮಾರು ೨೫೦ ಕುಟುಂಬಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ಬಂದೊದಗಿದೆ. ಕೃತ್ಯ ಅಲ್ಲಿಯ ಸುತ್ತಮುತ್ತಲಿನ ಪ್ರದೇಶದ ವ್ಯಕ್ತಿಗಳೇ ಮಾಡಿರಬೇಕೆಂದು ಸ್ಥಳೀಯರು ಶಂಶಯವನ್ನು ವ್ಯಕ್ತಪಡಿಸಿದ್ದಾರೆ.ಗಾಂಜಾ ಹಾಗು ಇತರ ಮಾದಕ ದ್ರವ್ಯಗಳನ್ನು ಸೇವಿಸಿ ಶವ ಹೊತ್ತಿಸುವ ಶ್ಮಶಾನದ ಒಳಗೆ ಮದ್ಯರಾತ್ರಿಯಲ್ಲೂ ಕಾಣಸಿಗುವ ಕೆಲವು ಸ್ಥಳೀಯ ಯುವಕರ ಕೃತ್ಯವಾಗಿರಬಹುದೆಂದು ಶ್ಮಶಾನದ ಗುಡ್ಡೆ ನಿವಾಸಿಯೊಬ್ಬರು ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿ ಸಾಧಾರಣವಾಗಿ ದಿವಸಕ್ಕೊಮ್ಮೆ ನೀರಿನ ಪೈಪನ್ನು ತುಂಡು ಮಾಡಲಾಗುತ್ತದೆ.ನಂತ್ರ ಮರುದಿವಸ ಹತ್ತಿರದ ಮನೆಯವರು ಸ್ವಂತ ಹಣ ಖರ್ಚು ಮಾಡಿ ಪೈಪನ್ನು ಸರಿಮಾಡುತ್ತಾರೆ.ದಿನವೂ ನೀರಾವರಿ ಇಲಾಖೆಗೆ ದೂರು ನೀಡಿದರೆ ಅದರಿಂದ ಎನೂ ಪ್ರಯೋಜನ ಸಿಗುವುದಿಲ್ಲವೆಂಬುದು ಸ್ಥಳೀಯ ಅಭಿಪ್ರಾಯ. ಇದು ಮಾತ್ರವಲ್ಲದೆ ಪ್ರದೇಶದಲ್ಲಿ ರಾತ್ರಿ ಸಮಯಗಳಲ್ಲಿ ಮನೆಗಳ ಮುಂಬಾಗದಲ್ಲಿ ಹಾಗು ವಿದ್ಯುತ್ ಕಂಬಗಳಲ್ಲಿ ಅಳವಡಿಸಲಾಗಿರುವ ಬಲ್ಬ್ ಗಳನ್ನು ಕೂಡಾ ಕಳವುಮಾಡಲಾಗುತ್ತಿದೆ.ನಂತ್ರ ಮದ್ಯರಾತ್ರಿಯಲ್ಲಿ ಮನೆಗಳ ಬಾಗಿಲಿಗೆ ಜೋರಾಗಿ ಶಬ್ಧ ಬರುವ ರೀತಿಯಲ್ಲಿ ಹೊಡೆಯುವುದು ಮೊದಲಾದ ರೀತಿಯ ಉಪದ್ರಗಳನ್ನು ನೀಡುತ್ತಿರುವುದಾಗಿ ಇಲ್ಲಿಯ ಸ್ಥಳೀಯರಿಂದ ಆರೋಪ ಕೇಳಿ ಬಂದಿದೆ.ಶ್ಮಶಾನ ವಿರುವ ಸ್ಥಳಕ್ಕೆ ಹೆದರಿ ಯಾರೂ ಬರುವುದಿಲ್ಲವೆಂಬ ಧೈರ್ಯುದಿಂದ ಸ್ಥಳೀಯ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯವಾಗಿದೆ ಎಂದು ಸ್ಥಳೀಯ ನಿವಾಸಿ ರಹ್ಮತುಲ್ಲಾ ಎಂಬವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಂಭಂಧಪಟ್ಟವರು ಇತ್ತ ಕಡೆ ಗಮನ ಹರಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

No comments:

Post a Comment