Thursday, March 21, 2013

ಮಂಜೇಶ್ವರ ತಾಲೂಕು ಅಸ್ಥಿತ್ವಕ್ಕೆ:ಕೊನೆಗೂ ಈಡೇರಿದ ಮಂಜೇಶ್ವರ ಜನತೆಯ ದೀರ್ಘ ಕಾಲದ ಬೇಡಿಕೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಜೇಶ್ವರ ತಾಲೂಕು ಗೆ ರೂಪು ನೀಡಬೇಕೆಂಬ ಮಂಜೇಶ್ವರದ  ಜನತೆಯ ದೀರ್ಘಕಾಲದ ಬೇಡಿಕೆಗೆ ಸರಕಾರ ಕೊನೆಗೂ ಸ್ಪಂಧಿಸಿದೆ.ಜನಪರ ಹೋರಾಟಕ್ಕೆ ಸಿಕ್ಕಿದ ಪ್ರತಿಫಲ ಎಂಬಂತೆ ಮಂಜೇಶ್ವರ ತಾಲೂಕು ರೂಪೀಕರಣದ  ಅಧಿಕೃತವಾದ ಘೋಷಣೆಯನ್ನು ವಿಧಾನ ಸಭೆಯಲ್ಲಿ ಹಣಕಾಸು ಖಾತೆ ಸಚಿವ ಕೆ.ಎಂ.ಮಾಣಿ ನಿನ್ನೆ ಘೋಷಿಸಿದ್ದಾರೆ.
ಹೊಸ ತಾಲೂಕು ರೂಪೀಕರಣದ ಮೂಲಕ ಕಾಸರಗೋಡು ಜಿಲ್ಲೆಯ ತಾಲೂಕುಗಳ ಸಂಖ್ಯೆ ನಾಲ್ಕಕ್ಕೇರಿದೆ.ಈಗಾಗಲೇ ಅಸ್ಥಿತ್ವದಲ್ಲಿದ್ದ ಕಾಸರಗೋಡು,ಹೊಸದುರ್ಗದ ಹೊರತಾಗಿ ಇದೀಗ ಮಂಜೇಶ್ವರ ಹಾಗು ವೆಳ್ಳರಿಕುಂಡು ತಾಲೂಕುಗಳು ಇನ್ನು ಹೊಸತಾಗಿ ಸೇರ್ಪಡೆಗೊಳ್ಳಲಿದೆ.
ಮಂಜೇಶ್ವರ ತಾಲೂಕನ್ನು ರೂಪೀಕರಿಸಲು ಇಲ್ಲಿಯ ಜನತೆ ದೀರ್ಘಕಾಲದಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ.ಹೊಸತಾಗಿ ರೂಪುಗೊಳ್ಳಲಿರುವ ಮಂಜೇಶ್ವರ ತಾಲೂಕಿನಲ್ಲಿ ವರ್ಕಾಡಿ,ಮೀಂಜ,ಪೈವಳಿಕೆ,ಮಂಗಲ್ಪಾಡಿ,ಪುತ್ತಿಗೆ,ಹಾಗು ಎಣ್ಮಕಜೆ ಗ್ರಾ.ಪಂಚಾಯತುಗಳು ಒಳಗೊಳ್ಳಲಿವೆ.ಇದೇ ಸಂದರ್ಭ ಮಂಜೇಶ್ವರ ತಾಲೂಕು ಪ್ರಧಾನ ಕೇಂದ್ರವನ್ನು ಮಂಜೇಶ್ವರದಲ್ಲೇ ಸ್ಥಾಪಿಸಬೇಕೆನ್ನುವುದು ಇಲ್ಲಿಯ ಬಹುಜನರ ಬೇಡಿಕೆಯಾಗಿದೆ.ಯಾಕಂದರೆ ಮಂಜೇಶ್ವರ ಮಂಡಲವಾಗಿದೆ.ಇಲ್ಲಿ ಎಲ್ಲಾ ಸರಕಾರಿ ಕಚೇರಿಗಳು ಈಗಾಗಲೇ ಅಸ್ಥಿತ್ವದಲ್ಲಿದೆ. ಬಗ್ಗೆ ತೀರ್ಮಾನ ಇನ್ನಷ್ಟೇ ಕೈಗೊಳ್ಳಬೇಕಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಹಾಗು ಮಂಜೇಶ್ವರ ಗ್ರಾಹಕರ ವೇದಿಕೆ,ಕೇರಳ ವ್ಯಾಪಾರಿ ಏಕೋಪನ ಸಮಿತಿ,ಮೊದಲಾದ ಸಂಘಟನೆಗಳು ಕೂಡಾ  ಮಂಜೇಶ್ವರ ತಾಲೂಕು ರೂಪೀಕರಿಸುವ ಘೋಷಣೆಯನ್ನು ಸ್ವಾಗತಿಸಿದೆ.

No comments:

Post a Comment