Thursday, March 14, 2013

ರಾಜ್ಯದಲ್ಲಿ ಮಲಯಾಳ ಕಡ್ಡಾಯ ಗಡಿನಾಡ ಕನ್ನಡಿಗರನ್ನು ವಂಚಿಸುವ ತಂತ್ರ:ಗ್ರಾಹಕರ ವೇದಿಕೆ ಆರೋಪನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕೇರಳದಲ್ಲಿ ಮಲಯಾಳ ಬಾಷೆ ಕಲಿಕೆ ಕಡ್ಡಾಯಗೊಳಿಸಬೇಕು ಮಲಯಾಳಂ ಬಾಷೆಯಲ್ಲಿ ಪ್ಲಸ್ ಟು ಉತ್ತೀರ್ಣರಾದವರಿಗೆ ಮಾತ್ರ ಉದ್ಯೋಗ ಲಭಿಸುವಂತಿದೆಂಬ ಸರಕಾರದ ನೂತನ ಆದೇಶ ಗಡಿನಾಡ ಕನ್ನಡಿಗರನ್ನು ವಂಚಿಸುವ ತಂತ್ರವಾಗಿದೆ ಎಂದು ಮಂಜೇಶ್ವರ ಗ್ರಾಹಕರ ವೇದಿಕೆ ಅರೋಪಿಸಿದೆ
ಸರಕಾರದ ಹೊಸ ನೀತಿ ಜ್ಯಾರಿ ಅದಲ್ಲಿ ಗಡಿನಾಡ ಪ್ರದೇಶವಾದ ಸಪ್ತಬಾಷೆಗಳ ಜನರು ನೆಲೆಸಿರುವ ಕಾಸರಗೋಡು ಜಿಲ್ಲೆ ಜನರು ಸರಕಾರಿ ಉದ್ಯೋಗಗಳಿಂದ ವಂಚಿತರಾಗಲಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಮಾತ್ರ ಕನ್ನಡಿಗರ ಬಗ್ಗೆ ಕಾಳಜಿ ವಹಿಸುವ ಜನಪ್ರತಿನಿಧಿಗಳು ಇದೀಗ ಕನ್ನಡಿಗರನ್ನು ನಾಶಗೈಯಲು ಯತ್ನಿಸುತಿದ್ದಾರೆಂದು ಗ್ರಾಹಕರ ವೇದಿಕೆ ತಿಳಿಸಿದೆ.
ಗಡಿ ನಾಡ ಪ್ರದೇಶದ ಕಾಲೇಜುಗಳಲ್ಲೂ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತಿದ್ದು ಕನ್ನಡಿಗರನ್ನು ಎಲ್ಲಾ ರಂಗದಲ್ಲೂ ಬುದ್ದಿಹೀನರನ್ನಾಗಿ ಮಾಡಿ ಮಲಯಾಳ ತಿಳಿಯದ ಗಡಿನಾಡ ಕನ್ನಡಿಗರಿಗೆ ನಾಲ್ಕನೇ ದರ್ಜೆಯ ಉದ್ಯೋಗ ನೀಡುವುದು ರೀತಿಯ ಕೇರಳ ಸರಕಾರದ ಸುತ್ತೋಲೆ ಹೊರಡಿಸುವಾಗ ಸಪ್ತ ಬಾಷಾ ಭೂಮಿಯಾದ ಕಾಸರಗೋಡು ಜಿಲ್ಲೆಯನ್ನು ಕೇರಳದ ಭೂಪಟದಿಂದ ಅಳಿಸಿದಂತಿದೆ.ಇದರ ವಿರುದ್ದ ಗಡಿನಾಡ ಕನ್ನಡಿಗರಾದ ನಾವೆಲ್ಲರೂ ಪ್ರತಿಭಟಿಸಲು ಸನ್ನದ್ದರಾಗಬೇಕೆಂದು ಗ್ರಾಹಕರ ವೇದಿಕೆ ತಿಳಿಸಿದೆ.ಕೇರಳದ ಅದೆಷ್ಟೋ ಮಂದಿ ಜನರು ಕರ್ನಾಟಕದಲ್ಲಿ ಹಲವು ಸ್ಥಳಗಳಲ್ಲಿ ಉದ್ಯೋಗದಲ್ಲಿದ್ದು ಮಾತ್ರವಲ್ಲದೆ ಅದೆಷ್ಟೋ ಕೇರಳೀಯರು ಕರ್ನಾಟಕದ ಜತೆಯಾಗಿ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ.ಹಾಗಿದ್ದರೆ ಇವರಲ್ಲಿ ಕರ್ನಾಟಕದ ಜನತೆ ಅಥವಾ ಸರಕಾರ ಯಾವುದಾದರೂ ತಾರತಮ್ಯವನ್ನು ತೋರಿದೆಯಾ ಎಂದು ಗ್ರಾಹಕರ ವೇದಿಕೆ ಪ್ರಶ್ನಿಸಿದೆ.
.
ಜಿಲ್ಲೆಯ  ಕನ್ನಡ ಮಾದ್ಯಮ ಶಾಲೆಯೊಂದರಲ್ಲಿ ಕನ್ನಡ ತಿಳಿಯದ ಶಿಕ್ಷಕರ ನೇಮಕಾತಿ ಕನ್ನಡಕ್ಕೆ ಮಾಡಿದ ಅಪಮಾನದ ಬಾಗವಾಗಿದೆ ಕೇರಳ ಸರಕಾರ ಬಾಷೆ ವಿಷಯದಲ್ಲಿ ಪಕ್ಷಪಾತ ನಿಲುವು ಬಿಟ್ಟುಗಡಿನಾಡ ಕನ್ನಡಿಗರ ಮೂಲಭೂತ ಹಕ್ಕುಗಳ ಸಂರಕ್ಷಣೆ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿಯವರಿಗೆ ಬರೆದ ತುರ್ತು ಆದೇಶದಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆ ಆಗ್ರಹಿಸಿದೆ

No comments:

Post a Comment