Tuesday, March 19, 2013

ಮಂಗಳೂರು-ದಮ್ಮಾಮ್ ನೇರ ವಿಮಾನ ಯಾನ: ಐಎಫ್‌ಎಫ್ ಸ್ವಾಗತ ಮಾರ್ಚ್ -19-2013

ದಮ್ಮಾಮ್: ಇದೇ ಬರುವ ಎಪ್ರಿಲ್‌ನಲ್ಲಿ ಪ್ರಾರಂಭವಾಗಲಿರುವ ಏರ್‌ಇಂಡಿಯನ್ ಎಕ್ಸ್‌ಪ್ರೆಸ್ ಮಂಗಳೂರು -ದಮ್ಮಾಮ್ ನೇರ ವಿಮಾನ ಯಾನ ಸೌಲಭ್ಯದ ಬಗ್ಗೆ ಅನಿವಾಸಿ ಭಾರತೀಯ ಸಂಘಟನೆ ಐಎಫ್‌ಎಫ್ (ಇಂಡಿಯಾ ಫ್ರಾಟರ್ನಿಟಿ ಫೋರಂ) ಘಟಕ ಸಂತಸ ವ್ಯಕ್ತಪಡಿಸಿದೆ. ನೇರ ವಿಮಾನ ಯಾನದ ಬಹು ದಿನಗಳ ಕನಸೊಂದು ನನಸಾಗಲು ವಿಮಾನ ಯಾನ ಪ್ರಾಧಿಕಾರದೊಂದಿಗೆ ಒತ್ತಡ ಹಾಕಿದ ಹಾಗೂ ಅದಕ್ಕಾಗಿ ಶ್ರಮಿಸಿದ ವಿವಿಧ ಸಂಘಟನೆಗಳ ಉದ್ಯಮಿಗಳ, ರಾಜಕೀಯ ಪ್ರತಿನಿಧಿಗಳ, ಸಾಮಾಜಿಕ ಕಾರ್ಯಕರ್ತರ ಹಾಗೂ ಕೆಲವೊಂದು ಮಾಧ್ಯಮ ವರ್ಗದವರ ಪ್ರಯತ್ನವನ್ನು ಐಎಫ್‌ಎಫ್ ದಮ್ಮಾಮ್ ಘಟಕ ಅಭಿನಂದಿಸಿದೆ.
ಮಂಗಳೂರಿನಿಂದ ದಮ್ಮಾಮ್‌ನ ಕಡೆಗೆ ನೇರ ವಿಮಾನ ಯಾನ ಸೌಲಭ್ಯ ಪ್ರಾರಂಭವಾದಂತೆಯೇ ರಿಯಾದ್ ಹಾಗೂ ಜಿದ್ದಾದ ಕಡೆಯಿಂದಲೂ ರೀತಿಯ ನೇರ ವಿಮಾನ ಯಾನ ಆದಷ್ಟು ಬೇಗನೆ ಪ್ರಾರಂಭವಾಗಲಿ ಎಂಬುದು ಐಎಫ್‌ಎಫ್‌ನ ಅಭಿಲಾಷೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ
ಕೃಪೆ ವಾ.ಭಾರತಿ 

No comments:

Post a Comment