Tuesday, March 12, 2013

ಮೂವರ ಮೃತ್ಯುಗೆ ಕಾರಣವಾದ ಕುಂಜತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿಥಿಲಗೊಂಡ ಹೊಂಡಗಳು:ಕಣ್ಣಿದ್ದೂ ಕುರುಡರಂತೆ ವರ್ತಿಸುವ ಲೋಕೋಪಯೋಗಿ ಇಲಾಖೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಾರಣವಾದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಿರುಗು ರಸ್ತೆಯಲ್ಲಿ ಹೊಂಡಗಳು ಶಿಥಿಲಗೊಂಡಿದ್ದು ಕಿರುವಾಹನಗಳು ಇಲ್ಲಿಂದ  ಸಂಚರಿಸುವಾಗ ಶಿಥಿಲಗೊಂಡ ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಫಘಾತಗಳು ಸಂಭವಿಸುತ್ತಿದೆ.ಇದೇ ರೀತಿ ಮೊನ್ನೆ ಇದೇ  ಹೊಂಡಗಳನ್ನುತಪ್ಪಿಸುವ ಭರದಲ್ಲಿ ತಂದೆ ಪುತ್ರ ಸಹಿತ ಮೂವರ ಮೃತ್ಯುಗೆ ಇದೇ ಹೊಂಡಗಳು ಕಾರಣವಾಗಿವೆ. ಹೊಂಡದ ಬಗ್ಗೆ ಹಲವಾರು ಸಲ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಅಧಿಕೃತರ ಗಮನಕ್ಕೆ ತಂದಿದ್ದರೂ  ಕಣ್ಣಿದ್ದೂ ಕುರುಡರಂತೆ ವರ್ತಿಸುವ  ಲೋಕೋಪಯೋಗಿ ಇಲಾಖೆಯ ಅಧಿಕೃತರು ಇನ್ನೂ ಕೂಡಾ ಗಾಢವಾದ ನಿದ್ರೆಯಲ್ಲಿದ್ದಾರೆಂದು ಮಂಜೇಶ್ವರ ಗ್ರಾಹಕರ ವೇದಿಕೆ ಆರೋಪಿಸಿದೆ.
ಈಗಾಗಲೇ ಟೆಂಡರ್ ಪಾಸಾಗಿ ಇನ್ನೂ ಕೂಡಾ ಕೆಲಸವನ್ನು ಆರಂಭಿಸದ ಲೋಕೋಪಯೋಗಿ ಇಲಾಖೆಯು ಮೂವರ ಮೃತ್ಯುಗೆ ಕಾರಣವಾದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯ ತಿರುಗು ರಸ್ತೆಯಲ್ಲಿ ಶಿಥಿಲಗೊಂಡಿರುವ ಹೊಂಡಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರುತ್ತಿರುವುದು ಇಲ್ಲಿಯ ಸಾರ್ವಜನಿಕರ ಕ್ಷಮೆಯನ್ನು ಪರೀಕ್ಷಿಸುತ್ತಿರುವುದಾಗಿ ಗ್ರಾಹಕರ ವೇದಿಕೆ ತಿಳಿಸಿದೆ.
ಕುಂಜತ್ತೂರಿನ  ರಾಷ್ಟ್ರೀಯ ಹೆದ್ದಾರಿಯ ತಿರುಗು ರಸ್ತೆಯಲ್ಲಿ ಹಲವು ಅಫಘಾತಗಳು ಸಂಭವಿಸಿ ಅಧಿಕ ಜನರು ಕೂಡಾ ಇಲ್ಲಿ ಕೊನೆಯುಸಿರೆಳೆದಿದ್ದಾರೆ.ವೇದಿಕೆಗಳಲ್ಲಿ ಬಿಗಿ ಬಾಷಣಗಳನ್ನು ಮಾಡುತ್ತಿರುವ ಜನಪ್ರತಿನಿಧಿಗಳು ಲೋಕೋಪಯೋಗಿ ಇಲಾಖೆಯ ಅಧಿಕೃತರ ವಿರುದ್ದ ಶಭ್ದವೆತ್ತಬೇಕಾಗಿದೆ ಹೊರತು ಅಫಘಾತ ಸಂಭವಿಸಿದ ನಂತ್ರ  ವಿಧಿಯ ಲೀಲೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ.
ಅಫಘಾತಕ್ಕೆ ಕಾರಣವಾಗುತ್ತಿರುವ ಹೊಂಡ ಇರುವ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯು ತಿರುಗು ರಸ್ತೆ ಅಫಘಾತ ವಲಯ ರಸ್ತೆಯಾಗಿದೆ. ಸಂಭಂಧಪಟ್ಟ ಇಲಾಖೆಯವರು ಹೊಂಡವನ್ನು ಕೂಡಲೇ ಸರಿಪಡಿಸಿ ಅಫಘಾತ ವಲಯ ಎಂಬ ಫಲಕವನ್ನು ಹಾಕಲು ನಾಗರಿಕರು ಆಗ್ರಹಿಸಿದ್ದಾರೆ.ಇಲ್ಲವಾದರೆ ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕೃತರ ಅನಾಸ್ಥೆಯ ವಿರುದ್ದ ನಾಗರಿಕರ ಬೆಂಬಲದೊಂದಿಗೆ ಗ್ರಾಹಕರ ವೇದಿಕೆಯ ಪ್ರತಿಭಟನೆಗೆ ಸಜ್ಜಾಗುವುದಾಗಿ ಮಂಜೇಶ್ವರ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಮುರಳೀಧರ್ ಭಟ್ ತಿಳಿಸಿರುತ್ತಾರೆ.

No comments:

Post a Comment