Sunday, March 10, 2013

ಕುಂಜತ್ತೂರು:ಭೀಕರ ಅಫಘಾತ:ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ:ಮೂವರು ಮೃತ್ಯು;ಓರ್ವ ಗಂಭೀರಮಂಜೇಶ್ವರ:ಮಸೀದಿಯೊಂದರ ನೆರ್ಚೆ ಮುಗಿಸಿ ಸ್ಕೂಟರ್ ನಲ್ಲಿ ಹಿಂತಿರುಗುತಿದ್ದ ನಾಲ್ವರಿಗೆ ಟ್ಯಾಂಕರ್ ಲಾರಿ ಹಾಗು ಸ್ಕೂಟರ್ ಡಿಕ್ಕಿ ಸಂಭವಿಸಿ ಸ್ಕೂಟರಿನಲ್ಲಿದ್ದ ನಾಲ್ವರ ಪೈಕಿ ಮೂವರು ಮೃತ ಪಟ್ಟು ಓರ್ವ ಬಾಲಕ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಕುಂಜತ್ತೂರು ಜಂಕ್ಷನ್ ನಲ್ಲಿ  ಇಂದು ಸಂಜೆ ಸಂಭವಿಸಿದೆ.
ಮೃತರನ್ನು ಕುಂಜತ್ತೂರು ಸನ್ನಡ್ಕ ನಿವಾಸಿ ಅಶ್ರಫ್ ಮೌಲವಿ(೪೮), ತೂಮಿನಾಡು ಲಕ್ಷಂ ವೀಡು ನಿವಾಸಿ ಅಬೂಬಕ್ಕರ್ ಯಾನೆ ಅಬ್ಬುಂಞಿ(೪೫) ಅವರ ಮಗ ಕಾಸರಗೋಡು ಸಹದಿಯ್ಯ ಶಾಲೆಯ ೮ ನೇತರಗತಿ ವಿದ್ಯಾರ್ಥಿ ಸಮದ್,ಎಂದು ಗುರುತಿಸಲಾಗಿದೆ.ಸ್ಕೂಟರ್ ನಲ್ಲಿದ್ದ ಅಬೂಬಕ್ಕರ್ ನ ಇನ್ನೊಬ್ಬ ಮಗ ಸಾಬಿತ್ (೮) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:ಉದ್ಯಾವರ ಜುಮಾ ಮಸೀದಿಯಲ್ಲಿ ನಡೆಯುತಿದ್ದ  ವಾರ್ಷಿಕ ರಾತೀಬ್ ನೇರ್ಚೆ ಮುಗಿಸಿ ಸ್ಕೂಟರ್ ನಲ್ಲಿ ನಾಲ್ವರು ಬರುತ್ತಿರುವಾಗ ಕುಂಜತ್ತೂರು ಜಂಕ್ಷನ್ ಗೆ ತಲುಪುವಾಗ ತಲಪಾಡಿ ಕಡೆಯಿಂದ ಕಾಸರಗೋಡು ಬಾಗಕ್ಕೆ ಅಡುಗೆ ಅನಿಲ ಹೇರಿ ಕೊಂಡು ಬರುತಿದ್ದ ಟ್ಯಾಂಕರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನ ಹಿಂಬಾಗದಲ್ಲಿದ್ದ ಅಬೂಬಕ್ಕರ್ ಸ್ಥಳದಲ್ಲೇ ಮೃತಪಟ್ಟರೆ ಅವರ ಮಗ ಸಮದ್ ಹಾಗು ಸ್ಕೂಟರ್ ಸವಾರ ಅಶ್ರಫ್ ಮೌಲವಿ ಆಸ್ಪತ್ರೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದರು.ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಬೂಬಕ್ಕರ್ ಕಡಲೆ ಮಾರಿ ತನ್ನ ಕುಟುಂಬವನ್ನು ಸಾಕುತಿದ್ದರು ಇವರ ಮೂವರ ಮಕ್ಕಳ ಪೈಕಿ ಇಬ್ಬರು ಇಂದು ತಂದೆಯ ಜತೆಯಾಗಿ ಮಸೀದಿಯ ನೇರ್ಚೆಗೆ ಹೋಗಿದ್ದರು ಇದೀಗ ಒಂದೇ ಮನೆಯಲ್ಲಿ ೨ ಸಾವು ಸಂಭವಿಸಿರುತ್ತದೆ,ಇನ್ನೊಬ್ಬ ಮಗ ಕೂಡಾ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದೆ.ಸ್ಕೂಟರ್ ಚಲಾಯಿಸುತಿದ್ದ ಅಬೂಬಕ್ಕರ್ ಮುಸ್ಲಿಯಾರ್ ರವರು ಹೊಸಂಗಡಿ ಪಿರಾರ್ ಮೂಲೆ ಯ ಮಸೀದಿಯೊಂದರಲ್ಲಿ ಅದ್ಯಾಪಕನಾಗಿ ಕೆಲಸ ನಿರ್ವಹಿಸುತಿದ್ದರು.ಮೂವರ ದುರ್ಮರಣದಿಂದ ಇಂದು ಕುಂಜತ್ತೂರು ಶೋಕ ಸಾಗರದಲ್ಲಿ ಮುಳುಗಿದೆ. ಅಫಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ೨ ಗಂಟೆ ಕಾಲ ಸಂಚಾರ ಸ್ಥಗಿತ ಗೊಂಡಿತು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್.ಮಂಗಳೂರು,ಮಂಗಳೂರು ಶಾಸಕ ಯು.ಟಿ.ಅಬ್ದುಲ್ ಖಾದರ್,ಕಾಸರಗೋಡು ಜಿಲ್ಲಾಧಿಕಾರಿ ಪಿ.ಎಸ್.ಮಹಮ್ಮದ್ ಸಗೀರ್ ಪಾರ್ಥಿವ ಶರೀರವನ್ನು ಇಟ್ಟಿರುವ ಮಂಗಲ್ಪಾಡಿ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ನಡೆಸಿದರು. ಜಿಲ್ಲಾಧಿಕಾರಿ ಮೃತ ಕುಟುಂಬಕ್ಕೆ ೧೦ ಸಾವಿರ ತುರ್ತು ಧನ ಸಹಾಯ ಘೋಷಿಸಿದರು
ಪೊಲೀಸರಿಗೆ ಹಲ್ಲೆ: ೫೦ ಜನರ ವಿರುದ್ದ ಕೇಸು: ಘಟನಾ ಸ್ಥಳಕ್ಕೆ ತಲುಪಿದ ಮಂಜೇಶ್ವರ ಸೀನಿಯರ್ ಪೊಲೀಸ್ ಅಧಿಕಾರಿಗಳಾದ ಶಾಜಿ ಹಾಗು ಬಾಲಚಂದ್ರನ್ ರವರಿಗೂ ಸಾರ್ವಜನಿಕರಿಗೂ ಮಾತಿನಲ್ಲಿ ಚಕಮಕಿ ನಡೆದು ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆಗೈದಿದ್ದಾರೆಂದು ದೂರಿ ಪೊಲೀಸರು ಕಂಡರೆ ಪತ್ತೆ ಹಚ್ಚಬಹುದಾದಂತಹ ೫೦ ಜನರ ವಿರುದ್ದ ಕೇಸು ದಾಖಲಿಸಿರುತ್ತಾರೆ
ಮೃತ ಪಟ್ಟ ಅಬೂಬಕ್ಕರ್

ಮೃತಪಟ್ಟ ಅಶ್ರಫ್ ಮೌಲವಿ 

ಮೃತಪಟ್ಟ ಸಮದ್ 
No comments:

Post a Comment