Sunday, March 10, 2013

ಲೈಂಗಿಕ ಅಪರಾಧ ನಿಯಂತ್ರಣಕ್ಕೆ ಕಾನೂನಿಗಿಂತ ಮಾನಸಿಕ ಪರಿವರ್ತನೆ ಅಗತ್ಯ: ನ್ಯಾ. ವರ್ಮಾಮುಂಬೈ, ಮಾ.9: ಲೈಂಗಿಕ ಅಪರಾಧ ಗಳ ವಿರುದ್ಧ ಕಾನೂನು ಜಾರಿಗಿಂತಲೂ ಸಮಾಜದ ಮಾನಸಿಕತೆಯ ಬದಲಾ ವಣೆ ಹೆಚ್ಚು ಮುಖ್ಯವಾದುದೆಂದು ಭಾರತದ ಮಾಜಿ ಮುಖ್ಯ ನ್ಯಾಯ ಮೂರ್ತಿ ಜೆ.ಎಸ್. ವರ್ಮಾ ಇಂದಿಲ್ಲಿ ಅಭಿಪ್ರಾಯಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ದಿಲ್ಲಿಯಲ್ಲಿ ನಡೆದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಬರ್ಬರ ಅತ್ಯಾಚಾರ- ಕೊಲೆ ಘಟನೆಯ ಬಳಿಕ ಮಹಿಳೆಯರ ವಿರುದ್ಧ ಅಪರಾಧದ ಬಗ್ಗೆ ಕಾನೂನುಗಳ ಪರಿಶೀಲನೆಗೆ ಸರಕಾರ ನೇಮಿಸಿದ್ದ ಸಮಿತಿಯ ಮುಖ್ಯಸ್ಥರಾಗಿದ್ದ ಅವರು, ಲಿಂಗ ನ್ಯಾಯ ಮತ್ತು ಮಹಿಳಾ ಹಕ್ಕುಗಳ ಕುರಿತು ಸತತ ಚಳವಳಿಗಳು ನಡೆಯ ಬೇಕು ಎಂದಿದ್ದಾರೆ.ಭಾರತೀಯ ವ್ಯಾಪಾರಿಗಳ ಛೇಂಬರ್ ಹಮ್ಮಿಕೊಂಡಿದ್ದ ಮಹಿಳೆ ಯರ ಹಕ್ಕಿಗೆ ಕುರಿತಾದ ಸಮ್ಮೇಳನ ವೊಂದರಲ್ಲಿ ಮಾತನಾಡುತ್ತಿದ್ದ ನ್ಯಾ. ವರ್ಮಾ, ಲೈಂಗಿಕ ಅಪರಾಧಗಳ ವಿರುದ್ಧ ಕಾನೂನು ಜಾರಿಗಿಂತ ಸಮಾಜದ ಮಾನಸಿಕತೆ ಬದಲಾಗಬೇಕಾದುದು ಅತಿ ಮುಖ್ಯವಾಗಿದೆ. ನಾಗರಿಕ ಸಮಾಜದ ಪಾತ್ರ ಸರಕಾರಕ್ಕಿಂತ ಪ್ರಧಾನವಾದುದು ಎಂದರು.
1875 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗಿತ್ತು.ಒಂದು ಶತಮಾನದ ಬಳಿಕ ಭಾರತದಲ್ಲಿ ಮಹಿಳೆಯರ ಹಕ್ಕಿಗಾಗಿ ಚಳವಳಿ ವೇಗವನ್ನು ಪಡೆದಿದೆ. 2012ರ ಡಿ.16ರ ಸಾಮೂಹಿಕ ಅತ್ಯಾಚಾರ ಪ್ರಕರಣ ಈ ಚಳವಳಿಗೆ ತೀವ್ರತೆ ನೀಡಿದೆ. ಸಾರ್ವಜನಿಕರ ಚಿಂತನೆಗೆ ಪ್ರಚೋದನೆ ನೀಡಲು ಅಂತಹ ದಾರುಣ ಘಟನೆಗಳು ನಡೆಯ ಬೇಕೆ ಎಂದು ವರ್ಮಾ ಪ್ರಶ್ನಿಸಿದರು.
ಲೈಂಗಿಕ ಅಪರಾಧಗಳ ಕುರಿತು ದನಿಯೆತ್ತಿದುದಕ್ಕಾಗಿ ಯುವ ಜನತೆ ಯನ್ನು ಶ್ಲಾಘಿಸಿದ ಅವರು, ಈ ದೇಶದ ಯುವ ಜನರು ಪೊಲೀಸರ ಪ್ರಚೋದನೆಯ ಹೊರತಾಗಿಯೂ ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸಿದರು ಯುವಕ, ಯುವತಿಯರಿಗೆ ಪೊಲೀಸರು ಬರ್ಬರವಾಗಿ ಥಳಿಸುತ್ತಿದ್ದ ದೃಶ್ಯಗಳನ್ನು ನಾನು ಕಂಡಿದ್ದೇನೆ. ಆದರೆ ಅವರು ಅದಕ್ಕೆ ಪ್ರತಿಕ್ರಿಯೆ ತೋರಿಸದೆ ಶಾಂತಿಯುತ ವಾಗಿ ಪ್ರತಿಭಟಿಸಿದರು. ಇದು ಮಹಾತ್ಮಾ ಗಾಂಧಿಯವರಿಗೆ ಸಂತೋಷ ತಂದಿರಬಹುದೆಂದು ಹೇಳಿದರು.
ಯುವ ಜನರ ಚಳವಳಿಯಲ್ಲಿ ರಾಜಕೀಯ ಕಾರ್ಯಸೂಚಿ ಇಲ್ಲದಿರುವುದರಿಂದ ಅದು ಬಾಳುತ್ತದೆಂದು, ವರ್ಮಾ ಅಭಿಪ್ರಾಯಿಸಿದರು.ಅತ್ಯಾಚಾರ ಪ್ರಕರಣ ನಡೆದೊಡನೆಯೇ ಸರಕಾರವು ದಿಲ್ಲಿ ಪೊಲೀಸರನ್ನು ಹೊಗಳಿದ ಕುರಿತು ಅವರು ಆಶ್ಚರ್ಯ ವ್ಯಕ್ತಪಡಿಸಿದರು.ಘಟನೆ ನಡೆದು ನಾಲ್ಕು ದಿನಗಳ ಬಳಿಕ ಆರೋಪಿಗಳನ್ನು ಬಂಧಿಸಿದ ದಿಲ್ಲಿ ಪೊಲೀಸ್ ವರಿಷ್ಠರ ಬೆನ್ನನ್ನು ಗೃಹ ಸಚಿವರು ತಟ್ಟಿದರು. ಆದರೆ, ರಾಜಧಾನಿಯಲ್ಲೇ ನಡೆದ ಅತ್ಯಾಚಾರ ಪ್ರಕರಣವನ್ನು ಯಾಕೆ ತಡೆಯಲಾಗಲಿಲ್ಲ ಎಂದು ತಾನು ಆಶ್ಚರ್ಯ ಪಡುತ್ತಿದ್ದೇನೆಂದು ವರ್ಮಾ ಹೇಳಿದರು.
ಮಹಿಳೆಯರ ಸುರಕ್ಷತೆಯ ಕುರಿತು ನ್ಯಾಯಾಲಯಗಳು ನೀಡಿದ್ದ ನಿರ್ದೇಶನಗಳನ್ನು ಜಾರಿಗೊಳಿಸುತ್ತಿದ್ದರೆ, ದೇಶವನ್ನೇ ಆಕ್ರೋಶಗೊಳಿಸಿದ್ದ ಈ ಪ್ರಕರಣವನ್ನು ತಪ್ಪಿಸಬಹುದಿತ್ತೆಂದು ಅವರು ಹೇಳಿದರು.ಲಿಂಗ ಸೂಕ್ಷ್ಮತೆಯ ಅಗತ್ಯವನ್ನು ಒತ್ತಿ ಹೇಳಿದ ವರ್ಮಾ, ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸುವುದಿಲ್ಲ. ಲೈಂಗಿಕ ಅಪರಾಧದ ಸಂತ್ರಸ್ತೆಯೊಬ್ಬಳು ಅದಾಗಲೇ ಅವಮಾನಕ್ಕೆ ಒಳಗಾಗಿರುತ್ತಾಳೆ. ಅವಳನ್ನು ಪೊಲೀಸ್ ಠಾಣೆಯಲ್ಲಿ ಮತ್ತೂ ಅವಮಾನಿ ಸಲಾಗುತ್ತದೆ. ಆಕೆ ಅತ್ಯಂತ ಅಶ್ಲೀಲ ವಾಗಿ ನಡೆಸುವ ವೈದ್ಯಕೀಯ ಪರೀಕ್ಷೆ ಹಾಗೂ ವಿಚಾರಣೆಯನ್ನು ಎದುರಿಸ ಬೇಕಾಗುತ್ತದೆಂದು ವಿಷಾದಿಸಿದರು.

No comments:

Post a Comment