Sunday, March 24, 2013

ರೈಲ್ವೇ ಪ್ರಯಾಣ ದರದಲ್ಲಿ ಇನ್ನೊಂದು ಸುತ್ತಿನ ಏರಿಕೆ?:


ಮಾರ್ಚ್ -24-2013

ಹೊಸದಿಲ್ಲಿ: ರೈಲ್ವೇ ಪ್ರಯಾಣ ದರ ಇನ್ನೊಂದು ಸುತ್ತು ಏರಿಕೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್‌ನಲ್ಲಿ ಇಂಧನ ಮೇಲ್ತೆರಿಗೆ ಅನ್ವಯವಾಗುವಾಗ ಪ್ರಯಾಣ ದರಗಳಲ್ಲಿ ಏರಿಕೆಯಾಗಬಹುದು ಎಂಬುದಾಗಿ ರೈಲ್ವೇ ಮಂಡಳಿ ಅಧ್ಯಕ್ಷ ವಿನಯ್ ಮಿತ್ತಲ್ ಶನಿವಾರ ಸೂಚನೆ ನೀಡಿದ್ದಾರೆ.
ರೈಲ್ವೇ ಸಚಿವ ಪವನ್ ಕುಮಾರ್ ಬನ್ಸಾಲ್ ರೈಲ್ವೆ ಪ್ರಯಾಣ ದರವನ್ನು ಜನವರಿ 9ರಂದು ಏರಿಸಿದ್ದರು. ಅದು ಕಳೆದ 10 ವರ್ಷಗಳಲ್ಲಿ ನಡೆದ ಮೊದಲ ರೈಲ್ವೇ ಪ್ರಯಾಣ ದರ ಏರಿಕೆಯಾಗಿತ್ತು. ಹೊಸ ಪ್ರಯಾಣದ ದರ ಜನವರಿ 21ರ ಮಧ್ಯರಾತ್ರಿಯಿಂದ ಚಾಲ್ತಿಗೆ ಬಂದಿತ್ತು. ಪ್ರಯಾಣ ದರ ಏರಿಕೆಯಿಂದ 6,600 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ ಎಂದು ಸಚಿವ ಹೇಳಿದ್ದರು.
ಪ್ರಯಾಣ ದರ ಏರಿಕೆಯಿಂದ ಜನವರಿ 21 ಮತ್ತು ಮಾರ್ಚ್ 31ರ ನಡುವೆ ಹೆಚ್ಚುವರಿ 1,200 ಕೋಟಿ ರೂ. ಗಳಿಕೆಯಾಗಲಿದೆ ಎಂದು ಸಚಿವರು ಹೇಳಿದ್ದರು. ಅದೇ ವೇಳೆ, ಸರಕು ಸಾಗಣೆ ದರದಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಿರಲಿಲ್ಲ.
ಆದಾಗ್ಯೂ, ಪ್ಲಾಟ್‌ಫಾರಂ ಟಿಕೆಟ್‌ನಲ್ಲಿ ಯಾವುದೇ ಹೆಚ್ಚಳ ಮಾಡಿರಲಿಲ್ಲ. ದರ ಹೆಚ್ಚಳದಿಂದಾಗಿ ಸಾಮಾನ್ಯ ದ್ವಿತೀಯ ದರ್ಜೆ ಉಪನಗರ ಪ್ರಯಾಣದಲ್ಲಿ 35 ಕಿ.ಮೀ. ದೂರದವರೆಗೆ 2 ರೂ. ಹೆಚ್ಚಳವಾಗಿತ್ತು. 8 ರೂ. ಇದ್ದ ಪ್ರಯಾಣ ದರ 10 ರೂ. ಆಗಿತ್ತು.
ಸ್ಲೀಪರ್ ದರ್ಜೆಯ 770 ಕಿ.ಮೀ. ವರೆಗಿನ ಪ್ರಯಾಣ ದರದಲ್ಲಿ 50 ರೂ. ಹೆಚ್ಚಳವಾಗಿದೆ. 270 ರೂ. ಇದ್ದ ಪ್ರಯಾಣ ದರ 320 ರೂ. ಆಗಿದೆ.

No comments:

Post a Comment