Sunday, March 24, 2013

ಜೆಡಿಎಸ್‌ಗೆ ನಾಗರಾಜ ಶೆಟ್ಟಿ ರಾಜೀನಾಮೆ


ಜೆಡಿಎಸ್‌ಗೆ ನಾಗರಾಜ ಶೆಟ್ಟಿ ರಾಜೀನಾಮೆ
- ಮಾರ್ಚ್ -24-2013

 ರಾಜ ಕಾರಣ ಸಾಕಾಗಿದೆ... ನಾಯಕರ ಧೋರಣೆಯಿಂದ ಬೇಸತ್ತಿದ್ದೇನೆ. ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಗೊಂಡಾಗ ಕೊನೆಯ ಉಸಿರು ಇರು ವವರೆಗೆ ಒಂದೇ ಪಕ್ಷದಲ್ಲಿ ಉಳಿಯ ಬೇಕು ಎಂದು ಸಂಕಲ್ಪಿಸಿದ್ದೆ. ಆದರೆ ಹಾಗಾಗಲಿಲ್ಲ. ಅನಿವಾರ್ಯ ಕಾರಣ ದಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ.
ಇದು ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ, ಮಾಜಿ ಸಚಿವ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ. ನಾಗರಾಜ ಶೆಟ್ಟಿಯವರ ಸ್ಪಷ್ಟ ನುಡಿ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ‘ಬಹಳ ಮಹತ್ವಾಕಾಂಕ್ಷೆಯೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆ. ಪಕ್ಷದ ಬಲವರ್ಧನೆಗಾಗಿ ಶಕ್ತಿ ಮೀರಿ ಶ್ರಮಿಸಿದ್ದೆ. ಆದರೆ, ಪಕ್ಷದ ಕೆಲವು ನಾಯಕರ ಧೋರಣೆ ಬೇಸರ ತರಿಸಿದೆ. ಹಾಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ’.
‘ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಯಾಗಬೇಕು, ಜಾತ್ಯತೀತ ಜನತಾ ದಳ ಮತ್ತೆ ಆಡಳಿತ ನಡೆಸಬೇಕು ಎಂಬ ಆಶೆಯಿಂದ ಜೆಡಿಎಸ್ ಸೇರಿದ್ದೆ. ಹಾಗೇ ಹಲವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದೆ. ಆದರೆ ಪಕ್ಷದಲ್ಲಿ ನಮ್ಮ ಕೆಲಸ ಕೆಲವು ನಾಯಕರಿಗೆ ಪಥ್ಯವಾಗಲಿಲ್ಲ. ನಮ್ಮಿಂದಾಗಿ ಪಕ್ಷಕ್ಕೆ ಹೊಡೆತ ಬೀಳುವುದು ಬೇಡ. ಪಕ್ಷ ಕಟ್ಟುವವರು ಕಟ್ಟಲಿ. ಹಾಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯ ನಾನು ಬಿಜೆಪಿ, ಕೆಜೆಪಿ ಅಂತ ಯಾವ ಪಕ್ಷಕ್ಕೂ ಸೇರ್ಪಡೆ ಗೊಳ್ಳುವ ಬಗ್ಗೆ ಯೋಚಿಸಿಲ್ಲ. ವ್ಯವಹಾರ ನೋಡಿಕೊಂಡು ನನ್ನಷ್ಟಕ್ಕೆ ಇರುತ್ತೇನೆ’ ಎಂದ ಶೆಟ್ಟಿ, ‘ಮಂಗಳೂರು ದಕ್ಷಿಣ ಕ್ಷೇತ್ರ ವಿಧಾನ ಸಭಾ ಚುನಾವಣೆಯಲ್ಲಿ ಉದ್ಯಮಿ ಸದಾನಂದ ಶೆಟ್ಟಿ ಸ್ಪರ್ಧಿಸುವುದು ಕೂಡ ಅನುಮಾನ’ ಎಂದರು.
ಮುಳುಗುವ ಹಡಗಿನಂತಿದ್ದ ಜೆಡಿಎಸ್ ಪಕ್ಷಕ್ಕೆ ನಾಗರಾಜ ಶೆಟ್ಟಿ ಸೇರ್ಪಡೆಗೊಂಡಾಗ ಕೆಲವರು ಪರ ವಿರೋಧ ವ್ಯಕ್ತಪಡಿಸಿದ್ದು ಸುಳ್ಳಲ್ಲ. ಆದರೆ ನಾಗರಾಜ ಶೆಟ್ಟಿ ಜಾತ್ಯತೀತತೆಯ ಬಗ್ಗೆ ಹೆಚ್ಚೆಚ್ಚು ಮಾತನಾಡಿ ಟೀಕಾಕಾರರ ಬಾಯ್ಮುಚ್ಚಿಸಿದ್ದರು. ಅಲ್ಲದೆ ಬಂಟ ಯುವಕರನ್ನು ಸೇರಿಸಿ ಪಕ್ಷಕ್ಕೆ ಒಂದಷ್ಟು ಶಕ್ತಿ ತುಂಬಿಸಿದ್ದರು. ಇತ್ತೀಚಿನ ಮನಪಾ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳಲು ಬಂಟ ಸಮು ದಾಯ ಜೆಡಿಎಸ್ ಕಡೆ ವಾಲಿದ್ದು ಮುಖ್ಯ ಕಾರಣವಾಗಿದೆ. ಉದ್ಯಮಿ ಸದಾನಂದ ಶೆಟ್ಟರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸಿ ದ್ದಲ್ಲದೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸು ವಂತೆ ಮಾಡಿದ್ದರು. ವಿಧಾನ ಸಭಾ ಚುನಾವಣೆಗೆ ಜೆಡಿಎಸ್‌ನ ಪ್ರಥಮ ಅಭ್ಯರ್ಥಿ ಕೂಡ ಸದಾನಂದ ಶೆಟ್ಟಿ ಆಗಿದ್ದರು. ಇದೀಗ ಸದಾನಂದ ಶೆಟ್ಟಿ ಕೂಡ ನಾಗರಾಜ ಶೆಟ್ಟರ ದಾರಿ ಹಿಡಿಯುತ್ತಿರುವುದು ಜೆಡಿಎಸ್ ನಲ್ಲಿ ಭಿನ್ನಮತವಿರುವುದಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ 44ನೆ ಬಂದರ್ ವಾರ್ಡ್‌ನಲ್ಲಿ ಜೆಡಿಎಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದ.ಕ.ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ಎಂ.ಅಸ್ಲಂ ಮತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಶಶಿರಾಜ ಶೆಟ್ಟಿಯವರನ್ನು ಒಂದಲ್ಲ ಎರಡು ಬಾರಿ ಅಮಾನತು ಮಾಡಲಾಗಿದೆ. ಮೊದಲ ಅಮಾನತನ್ನು ಹಿಂಪಡೆದಿದ್ದ ಮುಖಂಡರು ಇದೀಗ ಎರಡನೆ ಬಾರಿ ಅಮಾನತು ಮಾಡಿದ್ದರಿಂದ ಸಿಟ್ಟಾದ ನಾಗರಾಜ ಶೆಟ್ಟಿ, ಎಂ.ಜಿ.ಹೆಗಡೆ, ರಂಜಿತ್ ಮಲ್ಲಿ, ಡಾ.ಉದಯ ಸಹಿತ ಹಲವರು ರಾಜೀನಾಮೆ ಸಲ್ಲಿಸಿದ್ದಾರೆ.

ಇಬ್ಬರ ಅಮಾನತು ವಾಪಸು ಮಾಡಿ ಎಂದು ಆಗ್ರಹಿಸಿದ್ದರೂ ನಿರೀಕ್ಷಿತ ಪ್ರತಿಕ್ರಿಯೆ ಸಿಗದ ಕಾರಣ ರಾಜೀನಾಮೆ ಸಲ್ಲಿಸಿರುವ ನಾಗರಾಜ ಶೆಟ್ಟಿ ಮತ್ತಿತರರು ಕಾದು ನೋಡುವ ತಂತ್ರಕ್ಕೆ ನಿಂತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪತ್ರಿಕೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ
ಕೃಪೆ ವಾ.ಭಾರತಿ 

No comments:

Post a Comment