Sunday, March 10, 2013

ದಂಪತಿಗೆ ದುಡಿಮೆಯ ಹಣವನ್ನು ನೀಡದೆ ಸತಾಯಿಸಿದ ಮೇಸ್ತ್ರಿಗೆ ತಪಾರಕಿ




ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ದಂಪತಿಯನ್ನು ದುಡಿಮೆಗೆ ಗೆ ತಂದು ಸಂಭಳ ನೀಡದೆ ಸತಾಯಿಸಿದ ಮೇಸ್ತ್ರಿಯೊಬ್ಬನನ್ನು ಊರಿನವರು ಹಿಡಿದು ತಪಾರಕಿ ನೀಡಿ ಪೊಲೀಸರಿಗೊಪ್ಪಿಸಿದಘಟನೆ ಇಲ್ಲಿಗೆ ಸಮೀಪದ ಮಂಜೇಶ್ವರ ರಾಗಂ ಜಂಕ್ಷನ್ ನಲ್ಲಿ ನಡೆದಿದೆ.
ಕರ್ನಾಟಕದ ಬಳ್ಲಾರಿ ಜಿಲ್ಲೆಯ ಹೂವಿನಡಗಲಿ ತಾಲೂಕಿನ ನಿವಾಸಿಗಳಾದ ಶಂಕರ್ ಹಾಗು ಪತ್ನಿ ಲಲಿತಾಮ್ಮ ಎಂಬವರೇ ಮೇಸ್ತ್ರಿಯಿಂದ ಸಂಭಳ ಸಿಗದೆ ತಿನ್ನಲುಕುಡಿಯಲು ಚಿಕ್ಕಾಸಿನ ಗತಿಯಿಲ್ಲದೆ ಬೀದಿಪಾಲದವರು. ದಂಪತಿಗಳನ್ನು ಅದೇ ತಾಲೂಕಿನ ನಿವಾಸಿಯಾದ ಮೇಸ್ತ್ರಿ ರಾಜೇಶ್ ಎಂಬವನು ಕೆಲವು ತಿಂಗಳ ಹಿಂದೆ ರಸ್ತೆಡಾಮಾರೀಕರಣದ ಕೂಲಿ ಕೆಲಸಕ್ಕಾಗಿ ಮಂಜೇಶ್ವರ ಬಾಗಕ್ಕೆ ಕರೆಕೊಂಡು ಬಂದಿದ್ದ ಮೊದಲಿಗೆ   ದಂಪತಿಗಳಿಗೆ ಕೇವಲ 2 ಸಾವಿರ ರೂಪಾಯಿ ಮುಂಗಡವಾಗಿನೀಡಿದ್ದಲ್ಲದೆ ಬೇರೆ ಏನೂ ನೀಡಿಲ್ಲವೆಂಬುದಾಗಿ ಶಂಕರ್ ಹಾಗು ಲಲಿತಮ್ಮ ತಿಳಿಸಿದ್ದಾರೆ.ನಿನ್ನೆ ಶುಕ್ರವಾರ ರಾತ್ರಿಯಿಂದ ತಮ್ಮ 2 ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡುನಡೆದಾಡುತಿದ್ದ  ದಂಪತಿಗಳನ್ನು  ಆಟೋ ಚಾಲಕನಾಗಿರುವ ಇಸ್ತಿಹಾಕ್ ಎಂಬವರು ಊಟದ ವ್ಯವಸ್ಥೆ ಮಾಡಿ ತಂಗುವ ವ್ಯವಸ್ಥೆಯನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದರು.ಇಂದು ಸಂಜೆ ಊರಿನವರು ಇವರ ಮೇಸ್ತ್ರಿಯನ್ನು ಕರೆದು ತಂದು ವಿಚಾರಿಸಿದಾಗ   ತಪ್ಪನ್ನು ಒಪ್ಪಿಕೊಳ್ಳದ ಈತ ಊರಿನವರ ತಪಾರಕಿಯಿಂದ ಸತ್ಯ ಬಾಯಿಬಿಟ್ಟಿದ್ದಾನೆ ನಂತ್ರ ಮೇಸ್ತ್ರಿಯನ್ನು ಹಾಗು ದಂಪತಿಗಳನ್ನು  ಊರಿನವರು ಮಂಜೇಶ್ವರ ಠಾಣೆಗೆ ಒಪ್ಪಿಸಿ ಮೇಸ್ತ್ರಿ  5 ಸಾವಿರ ರೂಪಾಯಿ ದಂಪತಿಗಳಿಗೆ ನೀಡುವಂತೆತೀರ್ಮಾನವಾಯಿ

No comments:

Post a Comment