Friday, March 1, 2013

ಕಾಸರಗೋಡು: ಕೃಷಿ ಭೂಮಿಯಲ್ಲಿ ಅನಿಲ ಪೈಪ್ ಅಳವಡಿಕೆ


ಕಾಸರಗೋಡು: ಕೃಷಿ ಭೂಮಿಯಲ್ಲಿ ಅನಿಲ ಪೈಪ್ ಅಳವಡಿಕೆ

*ಕೃಷಿಕರಿಂದ ಕಾಮಗಾರಿಗೆ ತಡೆ; ಪರಿಹಾರಕ್ಕೆ ಆಗ್ರಹ
ಕಾಸರಗೋಡು, ಫೆ.28:ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಯೋಜನೆಗೆ ಕುಂಬಳೆ ಇಚ್ಲಂಪಾಡಿಯಲ್ಲಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ತಡೆಯೊಡ್ಡಿದ ಘಟನೆ ನಡೆದಿದೆ. ಯಾವುದೇ ಮುನ್ಸೂಚನೆ ಹಾಗೂ ನಷ್ಟ ಪರಿಹಾರ ನೀಡದೇ ಫಲ ಭರಿತ ಕೃಷಿ ಪ್ರದೇಶದಲ್ಲಿ ಈ ಪೈಪ್ ಲೈನ್‌ನ್ನು ಕೊಂಡೊಯ್ಯಲು ಕಾಮಗಾರಿ ನಡೆಸುತ್ತಿದ್ದು, ನೂರಾರು ಅಡಿಕೆ ಮರಗಳನ್ನು ಕಡಿದು ಹಾಕಿದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯ ಕೃಷಿಕರು ಹಾಗೂ ನಾಗರಿಕರು ಕಾಮಗಾರಿಗೆ ತಡೆಯನ್ನೊಡ್ಡಿದರು. ಕೃಷಿಕರಿಗೆ ಪರಿಹಾರ ಧನವನ್ನು ನೀಡದೆ ಅಡಿಕೆ ತೋಟ ಹಾಗೂ ಗದ್ದೆ ಪ್ರದೇಶಗಳ ಮೂಲಕ ಪೈಪ್‌ಲೈನ್ ಅಳವಡಿಸಲು ನಿರ್ಧರಿಸಲಾಗಿದೆ. ಗೈಲ್ ಕಂಪೆನಿ ಈ ಯೋಜನೆಯನ್ನು ಹಾಕಿ ಕೊಂಡಿದೆ. ಜಿಲ್ಲೆಯ ಕೃಷಿ ಹಾಗೂ ಜನಸಂಚಾರ ಹೊಂದಿರುವ ಪ್ರದೇಶವನ್ನೇ ಕಂಪೆನಿ ಪೈಪ್ ಅಳವಡಿಸಲು ಗುರುತಿಸಿದೆ. ಇದರ ವಿರುದ್ಧ ಈಗಾಗಲೇ ಹೋರಾಟ ನಡೆಯುತ್ತಲೇ ಇದೆ.
ಇಚ್ಲಂಪಾಡಿಯಲ್ಲಿ ತೋಟದ ಮಧ್ಯೆಯೇ ಪೈಪ್ ಲೈನನ್ನು ಅಳವಡಿಸಲಾಗಿದ್ದು, ಇದರಿಂದಾಗಿ ಲಕ್ಷಾಂತರ ರೂ. ವೌಲ್ಯದ ಕೃಷಿ ಸಂಪತ್ತನ್ನು ಕಳೆದು ಕೊಳ್ಳುವಂತಾಗಿದೆ. ನಾಗರಿಕರ ವಿರೋಧದ ನಡುವೆಯೂ ಕಾಮಗಾರಿ ನಡೆಸಲು ಕಂಪೆನಿ ಮುಂದಾ ಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆ ಯಲ್ಲಿ ಕ್ರಿಯಾ ಸಮಿತಿ ಇಚ್ಲಂಪಾಡಿ ಯಲ್ಲಿ ಪ್ರತಿಭಟನೆ ನಡೆಸಿ ಕಾಮಗಾರಿಗೆ ತಡೆಯೊಡ್ಡಿತು. ಪೈಪ್ ಅಳವಡಿಸಲು 10 ಮೀ. ಗಿಂತ ಕಡಿಮೆ ಸ್ಥಳ ಅಗತ್ಯ ವಿದ್ದರೂ 20 ಮೀಟರ್‌ಗಿಂತ ಅಧಿಕ ಸ್ಥಳವನ್ನು ಅಗೆದು ಕೃಷಿನಾಶಕ್ಕೆ ಕಾರಣ ವಾಗಿದ್ದಾರೆ.
ಅಧಿಕಾರಿಗಳು ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ. ಇದೀಗ ಇಚ್ಲಂಪಾಡಿ ಮೂಲಕ ಹಾದುಹೋಗಿರುವ ಈ ಯೋಜನೆ ಮುಂದೆ ಹೇರೂರು, ಬಜಪೆ, ಕಯ್ಯಾರು ಹಾಗೂ ಕಳಾಯಿ ಮೂಲಕ ಮಂಗಳೂರಿಗೆ ತಲುಪಲಿದೆ. ಈ ಅವಧಿಯಲ್ಲಿ ಸಾಕಷ್ಟು ಕೃಷಿ ಹಾಗೂ ಫಲವತ್ತಾದ ಭೂಮಿ ಯನ್ನು ಕಳೆದು ಕೊಳ್ಳುವ ಭೀತಿಯನ್ನು ನಾಗರಿಕರು ವ್ಯಕ್ತ ಪಡಿಸುತ್ತಿದ್ದಾರೆ.
ಕ್ರಿಯಾ ಸಮಿತಿಯ ಸಂಚಾಲಕ ಡಿ.ಎಸ್. ಮೋಹನ್ ಕುಮಾರ್, ಅಧ್ಯಕ್ಷ ಮಹೇಶ್ ಭಟ್, ಶಂಕರೈಲರ್, ಪ್ರವೀಣ್ ಅಮೆತ್ತೋಡ್, ಶ್ರೀಧರ್, ಸುರೇಶ್, ಉಮೇಶ, ಯೂಸುಫ್ ಇಚ್ಲಂಪಾಡಿ, ಜಯರಾಮ ಶೆಟ್ಟಿ, ತ್ರಿವಿಕ್ರಮ, ಅಂದುಂಞಿ, ನಾರಾಯಣ ಮೊದಲಾದವರು ನೇತೃತ್ವ ನೀಡಿದರು

No comments:

Post a Comment