Saturday, March 23, 2013

ನಿಮ್ಮ ಮೊಬೈಲಿಗೆ +92 ನಂಬರ್ ನಿಂದ ಕರೆ ಬಂದರೆ ಅಪಾಯ:ಮಂಜೇಶ್ವರ ಗ್ರಾಹಕರ ವೇದಿಕೆಯಿಂದ ಮೊಬೈಲ್ ಪ್ರಿಯರಿಗೊಂದು ಮಾಹಿತಿರಹಿಮಾನ್ ಉದ್ಯಾವರ
ಮಂಜೇಶ್ವರ:ಕೆಲವೊಂದು ಮೊಬೈಲ್ ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತದೆ ಯಾರಿರಬಹುದು ಎಂಬ ಕುತೂಹಲದಿಂದ ತಿರುಗಿ ನೀವು ಕರೆಮಾಡುತ್ತೀರಿ ಅಲ್ಲಿಗೆ ಮುಗೀತು.ನಿಮಗೆ ಗೊತ್ತಿಲ್ಲದಂತೆ ನಿಮ್ಮ ಸಿಮ್ ಕಾರ್ಡ್ ನ ನಕಲು ಪ್ರತಿ ಅಂತರಾಷ್ಟ್ರೀಯ ವಂಚಕ ಜಾಲದ ಕೈ ಸೇರುತ್ತದೆ.
+92#,+90#,+09#.ಸಂಖ್ಯೆಯ ಕರೆ   ಅದು ವಂಚಕ ಜಾಲದ್ದೇ ಆಗಿರುತ್ತದೆ ಅಕಸ್ಮಾತ್ ನೀವು ಕರೆಯನ್ನು ಸ್ವೀಕರಿಸಿದರೆ ಅತ್ತ ಕಡೆಯಿಂದ ಕಾಲ್ ಸೆಂಟರ್ ನವರ ಸೋಗಿನಲ್ಲಿ ವಂಚಕರು ನಿಮ್ಮಲ್ಲಿ ಮಾತನಾಡಲು ಆರಂಭಿಸುತ್ತಾರೆ.ನಂತರ ಯಾವುದೋ ಸಂಖ್ಯೆ ಒತ್ತಿ ಎಂದು ನಿಮಗೆ ನಿರ್ಧೇಶನ ನೀಡುತ್ತಾರೆ.ಆ ಮೂಲಕ ನಿಮ್ಮ ಸಿಮ್ ನ ದಾಖಲೆಗಳನ್ನು ಹ್ಯಾಕ್ ಮಾಡಿ ನಿಮಗೆ ಗೊತ್ತಿಲ್ಲದೇ ನಿಮ್ಮ ಸಿಮ್ ಕಾರ್ಡ್ ನ ನಖಲನ್ನು ಸೃಷ್ಟಿಸುತ್ತಾರೆ.
ಇತ್ತೀಚೆಗೆ ಉ.ಪ್ರದೇಶದ ಬಿಎಸ್ಸೆನ್ನಲ್ ಬಳಕೆದಾರರು ಇಂತದ್ದೇ ವಂಚನೆಗೆ ಬಲಿಯಾದ ಬಗ್ಗೆ ವರದಿಯಾಗಿದೆ.ಇಂತಹ ಅಪರಿಚಿತ ಕರೆ ಸ್ವೀಕರಿಸಿದ ತಕ್ಶಣವೇ ಅವರ ಖಾತೆಯಲ್ಲಿದ್ದ ಹಣ ಖಾಲಿಯಾಗಿದೆ.ಅಲ್ಲದೆ ಮತೆ ಮೂರು ಬಾರಿ ರೀ ಚಾರ್ಜ್ ಮಾಡಿದಾಗಲೂ ಕೆಲವೇ ಕ್ಷಣಗಳಲ್ಲಿ ಅಷ್ಟೂ ಹಣ ಮಾಯವಾಗಿದೆ.
ನಕಲಿ ಸಿಮ್ ನ ಉದ್ದೇಶ: ನಕಲಿ ಸಿಮ್ ಕಾರ್ಡ್ ಬಳಸಿ ನಿಮ್ಮ ಮೊಬೈಲ್ ನ ಬ್ಯಾಲೆನ್ಸ್ ನಿಂದಲೇ ಅಂತರಾಶ್ರ‍್ತೀಯ ಕರೆ ಮಾಡಬಹುದಾಗಿದೆ.ಅಲ್ಲದೆ ನಕಲಿ ಸಿಮ್ ಗಳನ್ನು ಬಳಸಿ ದೇಶ ದ್ರೋಹಿ ಕೃತ್ಯಗಳಿಗೂ ಬಳಸಬಹುದಾಗಿದೆ.ಸಿಮ್ ನಕಲಿ ಎಂಬುದು ಕೊನೆಯಲ್ಲಿ ತನಿಖೆಯಲ್ಲಿ ಪತ್ತೆಯಾಗುತ್ತದಾದರೂ ಅಷ್ಟರ ತನಕ ಅನಗತ್ಯ ತೊಂದರೆಯನ್ನು ಅನುಭವಿಸ ಬೇಕಾಗುತ್ತದೆ.
ಜತೆಗೆ ನಕಲಿ ಸಿಮ್ ಮೂಲಕ ನಿಮ್ಮ ಫೇಸ್ ಬುಕ್ ಖಾತೆ ಹ್ಯಾಕ್ ಮಾಡುವುದರಿಂದ ಹಿಡಿದು ಬ್ಯಾಮ್ಕ್ ಖಾತೆಯಿಂದಲೂ ಹಣ ದೋಚಬಹುದಾಗಿದೆ.ಆನ್ ಲೈನ್ ಹಣ ವರ್ಗಾವಣೆ ಸಂದರ್ಭ ಮೊಬೈಲ್ ಗೆ ಎಸ್ಸೆಮ್ಮೆಸ್ ಮೂಲಕ ಪಿನ್ ನಂಬರ್ ಕಳಿಸಲಾಗುತ್ತದೆ.ಆ ಸಮ್ಖ್ಯೆ ನಮೂದಿಸಿದಾಗ ಮಾತ್ರ ಹಣ ವರ್ಗಾವಣೆ ಸಾಧ್ಯ.ಆದರೆ ನಿಮ್ಮ ಮೊಬೈಲ್ ಗೆ ಬರುವ ಎಸ್ಸೆಮ್ಮೆಸ್ ನಿಮ್ಮ ನಕಲಿ ಸಿಮ್ ಗೂ ಬರುತ್ತದೆ ಜೋಪಾನ.
ನಕಲು ಸಿಮ್ ಎಂದರೇನು? ನಕಲು ಹೇಗೆ ಮಾಡಲಾಗುತ್ತದೆ?: ಸಿಮ್ ನಕಲು ಸಾಪ್ಟ್ ವೇರನ್ನು ಸಿದ್ದಪಡಿಸಿಕೊಂಡೇ ಹ್ಯಾಕರ್ ಗಳು ಕರೆ ಮಾಡುತ್ತಾರೆ.ನೀವು ಅಲ್ಲಿಗೆ ಕರೆಮಾಡಿದಾಗ ಅಥವಾ ಅವರು ತಿಳಿಸಿದ ಸಂಖ್ಯೆಯನ್ನು ಒತ್ತಿದಾಗ ನಿಮ್ಮ ಸಿಮ್ ನ ಇಲಕ್ತ್ರೋನಿಕ್ ಸೀರಿಯಲ್ ನಂಬರ್ ಹಾಗು ಮೊಬೈಲ್ ಐಡೆಂಣ್ಟಿಫಿಕೇಶನ್ ನಂಬರ್ ತನ್ನದಾಗಿಸಿಕೊಳ್ಳುತ್ತಾರೆ.ಇವುಗಳೆರಡನ್ನೂ ಬಳಸಿ ಹೊಸ ಸಿಮ್ ಕಾರ್ಡ್ ಗೆ ಅಳವಡಿಸಿ ನಕಲು ಸಿಮ್ ತಯಾರಿಸಲಾಗುತ್ತದೆ.
ರಕ್ಷೆಯ ಮಾರ್ಗ ಹೆಗೆ?:ಸಿಮ್ ಕಾರ್ಡ್ ರಕ್ಷಣೆಗೆ ಪಿನ್ ನಂಬರ್ ಇರುತ್ತದೆ ಆರಂಭದಲ್ಲಿ ಅದನ್ನು ೦೦೦೦ ಗೆ ಸೆಟ್ ಮಾಡಿರಲಾಗುತ್ತದೆ.ಈ ಸಂಖ್ಯೆಯನ್ನು ನಿಮಗೆ ಸುಲಭದಲ್ಲಿ ನೆನಪಿಟ್ಟುಕೊಳ್ಳಬಹುದಾದ ಸಂಖ್ಯೆಗೆ ಬದಲಾಅಯಿಸಿಕೊಳ್ಳಿ.ಯಾವುದೇ ಫೋನ್ ಸೆಕ್ಯೂರಿಟಿ ಸೆಟ್ಟಿಂಗ್ ನಲ್ಲೂ ಈ ಕುರಿತ ಆಯ್ಕೆಗಲಿವೆ.ಸೆಟ್ಟಿಂಗ್ಸ್ ಬದಲಾಯಿಸಿ ಹ್ಯಾಕರ್ಸ್ ಗಳಿಂದ ರಕ್ಷಣೆಯನ್ನು ಪಡೆಯಬುದಾಗಿದೆ.

No comments:

Post a Comment