Sunday, March 24, 2013

ಸರಪಳಿ ಹಾವು ಕಚ್ಚಿದ ವಿಷ ತೆಗೆಯಲೆಂದು 90 ಸಾವಿರ ರೂಪಾಯಿ ಕೇಳಿದ ಕಪಟ ಮಂತ್ರವಾದಿ



ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರವ್ಯಕ್ತಿಯೊಬ್ಬರನ್ನು ಸರಪಳಿ ಹಾವು ಕಚ್ಚಿರುವುದಾಗಿ ನಂಬಿಸಿ ವಿಷ ತೆಗೆಯಲು 90 ಸಾವಿರ ನೀಡಬೇಕೆಂದು ಒತ್ತಾಯಿಸಿ ಕೊನೆಗೆ ವ್ಯಕ್ತಿಯ ಜೇಬಿನಲ್ಲಿದ್ದ 38 ಸಾವಿರ ಪಡೆದು ಬಾಕಿ ಹಣಕ್ಕೆ ಕಾಲಾವಧಿ ನೀಡಿದ ಕಪಟ ಮಂತ್ರವಾದಿಯ ವಿಚಿತ್ರವಾದ ಘಟನೆ  ನಗರದ ಜನನಿಬಿಡ ಪ್ರದೇಶವಾದ ಕಾಸರಗೋಡು ಚಟ್ಟಂಚಾಲ್ನಾಯಿಮ್ಮಾರ್ ಮೂಲೆಯಿಂದ ತಡವಾಗಿ ಬೆಳಕಿಗೆ ಬಂದಿದೆ.
ಮಂತ್ರವಾದಿಯಿಂದ ಮೋಸವಾದ ತೂಮಿನಾಡು ಇಲ್ ಟಾಪ್ ನಗರ ನಿವಾಸಿ ಇಸ್ಮಾಯಿಲ್ 
ಮಂತ್ರವಾದಿಯ ಮೋಸಕ್ಕೆ ಬಲಿಯಾದ ವ್ಯಕ್ತಿ  ಕುಂಜತ್ತೂರು ಸಮೀಪದ ತೂಮಿನಾಡು ಹಿಲ್ ಟಾಪ್ ನಗರ ನಿವಾಸಿ ಇಸ್ಮಾಯಿಲ್(36ಎಂಬವರಾಗಿದ್ದಾರೆಇಸ್ಮಾಯಿಲ್ರವರಿಗೆ ಕೆಲಕಾಲದಿಂದ ಕಾಲಿನಲ್ಲಿ ಒಂದು ಬೊಕ್ಕೆ ಕಾಣಿಸಿಕೊಂಡಿತ್ತು.ಇದನ್ನು ಹಲವು ಡಾಕ್ಟರ್ ಗಳಿಗೆ ತೋರಿಸಲಾಗಿತ್ತದಾದರೂ ಬೊಕ್ಕೆಯ ನೋವು ದಿನದಿಂದ ದಿನಕ್ಕೆಜಾಸ್ತಿಯಗುವುದನ್ನು ಕಂಡು ಕೆಲವೊಂದು ಮೂಡನಂಬಿಕೆಯ ಜನರ ಮಾತನ್ನು ಕೇಳಿದ ಇಸ್ಮಾಯಿಲ್ ರವರು ಕಾಸರಗೋಡಿನ ಚಟ್ಟಂಚಾಲ್ ನಾಯಿಮ್ಮಾರ್ಮೂಲೆಯಲ್ಲಿರುವ ಮಾಂತ್ರಿಕನತ್ತಿರ ಹೋದರು.ಅಲ್ಲಿ ಮಾಂತ್ರಿಕ ಇಸ್ಮಾಯಿಲ್ ರವರ ಕಾಲಿನ ಬೊಕ್ಕೆಯನ್ನು ವಿಶ್ಲೇಶಿಸಿದ್ದು ಬೇರೆಯೇ ರೀತಿ ಇದೊಂದು ಬೊಕ್ಕೆಯಲ್ಲ ಸರಪಳಿಹಾವುಕಚ್ಚಿ ಅದರ ವಿಷ ನಿಮ್ಮ ಕಾಲಿನ ರಕ್ತ ಸಂಚಾರದಲ್ಲಿ ಮಿಶ್ರಣವಾಗಿದೆ ಇದರ ವಿಷವನ್ನು ತೆಗೆಯಬೇಕಾಗಿದೆ ಅದಕ್ಕೆ ಖರ್ಚು ಆಗಬಹುದುದೆಂದುಹೇಳಿದ್ದಾರೆನ್ನಲಾಗಿದೆ.ಕಪಟ ಮಂತ್ರವಾತಿಯ ಮಾತಿನಲ್ಲಿ ಭರವಸೆಯನ್ನು ಮೂಡಿಸಿದ ಇಸ್ಮಾಯಿಲ್ ಖರ್ಚು ಎಷ್ಟೆಂದು ಕೇಳದೆ ಸಮ್ಮತಿಸಿದರು.ಕೂಡಲೇ ಮಂತ್ರವಾದಿಒಂದು ಚಿಪ್ಪಿಯನ್ನು ಕಾಲಿನ ಬೊಕ್ಕೆಯ ಮೇಲೆ  ಸ್ವಲ್ಪ ಸಮಯ ಇರಿಸಿ ಇನ್ನು ನೀವು ಹೋಗಬಹುದು ವಿಷವೆಲ್ಲಾ ಜಾರಿ ಹೋಗಿದೆಂದು ಹೇಳಿ 90 ಸಾವಿರ ರೂಪಾಯಿಗೆಬೇಡಿಕೆ ಇಟ್ಟಾಗ ಇಸ್ಮಾಯಿಲ್ ಕೈಯಲ್ಲಿ ಕೊಡಲು ಹಣವಿಲ್ಲದಾಗ ವಿಷಪೂರಿತ ಹಾವು ನಿಮ್ಮ ತಲೆದಿಂಬಿನಡಿಗೆ ಬರಬುದೆಂದೆಲ್ಲಾ ಹೆದರಿಕೆ ಹುಟ್ಟಿಸುವಂತಹ ಹಲವುಕಟ್ಟುಕತೆಗಳನ್ನು ಹೇಳಿ ಬೆದರಿಸಿ ಬೆರೊಂದು ಕಾರ್ಯಕ್ಕಾಗಿ ಸಾಲವಾಗಿ ತೆಗೆದ  ಜೇಬಿನಲ್ಲಿದ್ದ 38 ಸಾವಿರ ರೂಪಾಯಿಯನ್ನು ಪಡೆದು ಬಾಕಿ ಹಣ ಕೂಡಲೇ ತರಬೇಕೆಂದುಹೇಳಿ ಕಳಿಸಿದ್ದೆನ್ನಲಾಗಿದೆ.ಹಿಂತಿರುಗಿ ಬಂದ  ಇಸ್ಮಾಯಿಲ್ ಮರುದಿವಸ ಸಂಭಂಧಿಕ ಹಾಗು ಊರಿನೊಬ್ಬರನ್ನು ಕರೆಕೊಂಡು ಹೋದಾಗ ಇದನ್ನು ನೋಡಿದ ಮಾಂತ್ರಿಕ ಪೆಟ್ಟುಬೀಳುವುದು ಖಚಿತವೆಂದು ಬಾವಿಸಿ ಮನೆ ಬಿಟ್ಟು ಓಡಿದನೆನ್ನಲಾಗಿದೆ.ಬಡ ಕುಟುಂಬದಲ್ಲಿ ಜೀವನವನ್ನು ಸಾಗಿಸುತ್ತಿರುವ ಇಸ್ಮಾಯಿಲ್ ಇದೀಗ ಮಾಂತ್ರಿಕನ ಕೈಯಲ್ಲಿತನ್ನಲ್ಲಿರುವ ಎಲ್ಲಾ ಹಣವನ್ನು ಕೊಟ್ಟು ಪೇಚಾಟದಲ್ಲಿ ಸಿಲುಕಿ ದಿನವೂ ಮಾಂತ್ರಿಕನ ಮನೆಯ ಮುಂಬಾಗಿಲಿನಲ್ಲಿ ನಿಂತು ಕಾದು ಕಾದು ಹಿಂತಿರುಗುತಿದ್ದಾರೆ.


No comments:

Post a Comment