Tuesday, March 19, 2013

ಇಟಲಿ ರಾಯಭಾರಿಗೆ ಎ.9ರವರೆಗೆ ವಿದೇಶಕ್ಕೆ ಹೋಗಲು ನಿರ್ಬಂಧ- ಮಾರ್ಚ್ -19-2013

*ರಾಜತಾಂತ್ರಿಕ ರಕ್ಷಣೆಯ ವ್ಯಾಪ್ತಿಯಲ್ಲಿ ಇಟಲಿ ರಾಯಭಾರಿ ಬರುವುದಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ತನಗೆ ನೀಡಿದ ವಚನ ವನ್ನು ಉಲ್ಲಂಘಿಸಿದ ಇಟಲಿಯನ್ ರಾಯಭಾರಿ ಡೇನಿಯಲ್ ಮನ್ಸಿನಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದು ಕೊಂಡಿದೆ ಹಾಗೂ ಅವರು ಎಪ್ರಿಲ್ 2 ರವರೆಗೆ ಭಾರತದಿಂದ ಹೊರಗೆ ಹೋಗುವಂತಿಲ್ಲ ಎಂದು ತಾಕೀತು ಮಾಡಿದೆ. ಎಪ್ರಿಲ್ 2ರಂದು ಪ್ರಕರ ಣದ ಮುಂದಿನ ವಿಚಾರಣೆ ನಡೆಯಲಿದೆ.ಇಬ್ಬರು ಭಾರತೀಯ ಬೆಸ್ತರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕರನ್ನು ಮಾರ್ಚ್ 22ರ ಒಳಗೆ ಮರಳಿ ಭಾರತಕ್ಕೆ ಕರೆತರಲು ಇಟಲಿಯನ್ ರಾಯಭಾರಿ ವಿಫಲವಾದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕಲಾಪ ಆರಂಭಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಈ ನಡುವೆ, ತನ್ನ ರಾಯಭಾರಿಯ ಚಲನವಲನಗಳ ಮೇಲೆ ಯಾವುದೇ ಪ್ರಾಧಿಕಾರ ನಿರ್ಬಂಧ ವಿಧಿಸುವಂತಿಲ್ಲ, ಇದು ರಾಜತಾಂತ್ರಿಕರಿಗೆ ರಕ್ಷಣೆ ನೀಡುವ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂಬ ಒಕ್ಕಣೆಯ ಪತ್ರವೊಂದನ್ನು ಇಟಲಿ ಭಾರತಕ್ಕೆ ಬರೆದಿದೆ.
ಇಟಲಿಯನ್ ರಾಯಭಾರಿ ಭಾರತದಿಂದ ಓಡಿಹೋಗುವುದಿಲ್ಲ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಅವರನ್ನು ನಂಬಬಹುದು ಎಂದು ರಾಯಭಾರಿಯ ಪರ ವಕೀಲರು ಹೇಳಿದಾಗ, ತನಗೆ ಅವರ ಮೇಲೆ ನಂಬಿಕೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.“ನೀವು ನಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದೀರಿ” ಎಂದು ನ್ಯಾಯಾಲಯ ಚಾಟಿ ಬೀಸಿತು.ತನಗೆ ರಾಜತಾಂತ್ರಿಕ ರಕ್ಷಣೆಯಿದೆ ಎಂಬ ರಾಯಭಾರಿಯ ವಾದವನ್ನು ಮನ್ನಿಸಲು ನ್ಯಾಯಾಲಯ ನಿರಾಕರಿಸಿತು. ತಾನು ಇಟಲಿ ಸರಕಾರದ ಪರವಾಗಿ ವಚನ ನೀಡಿದ್ದೆ ಎಂದು ರಾಯಭಾರಿ ಹೇಳಿದರು.
ಇಟಲಿ ಸರಕಾರ ಮತ್ತು ಅದರ ರಾಯಭಾರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಖಾತರಿಯ ಆಧಾರದಲ್ಲಿ ಆರೋಪಿ ನಾವಿಕರಿಗೆ ಸ್ವದೇಶಕ್ಕೆ ಹೋಗಲು ಅನುಮತಿ ನೀಡಿರುವುದಾಗಿ ನ್ಯಾಯಾಲಯ ತಿಳಿಸಿತ್ತು. ಯಾಲಯದ ಅಧಿಕಾರ ವ್ಯಾಪ್ತಿಗೆ ಸ್ವಯಂ ಪ್ರೇರಿತವಾಗಿ ಸಮರ್ಪಿಸಿಕೊಂಡ ಬಳಿಕ ರಾಜತಾಂತ್ರಿಕ ರಕ್ಷಣೆಯ ಮಾತುಗಳನ್ನಾಡುವುದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
ತನ್ನ ರಾಯಭಾರಿಗೆ ಚಲನವಲನದ ಪೂರ್ಣ ಸ್ವಾತಂತ್ರವನ್ನು ನೀಡಬೇಕೆಂದು ಕೋರಿ  ಇಟಲಿ ರಾಯಭಾರ ಕಚೇರಿ ಮಾರ್ಚ್ 15ರಂದು ಬರೆದ ಪತ್ರವನ್ನು ತಾನು ತಿರಸ್ಕರಿಸಿರುವುದಾಗಿ ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಹೇಳಿತು. ಭಾರತದಲ್ಲಿನ ಯಾವುದೇ ಪ್ರಾಧಿಕಾರಕ್ಕೂ ತನ್ನ ರಾಯಭಾರಿಯ ಚಲನವಲನಗಳನ್ನು ನಿರ್ಬಂಧಿಸುವ ಅಧಿಕಾರವಿಲ್ಲ ಎಂಬ ಇಟಲಿ ರಾಯಭಾರ ಕಚೇರಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರ, ಭಾರತದಲ್ಲಿ ಸರಕಾರ ಅನುಸರಿಸುವ ಸಂವಿಧಾನದ ಬಗ್ಗೆ ಇಟಲಿ ಸರಕಾರಕ್ಕೆ ತಿಳಿದಿಲ್ಲ ಎಂದಿದೆ.
ತಮ್ಮ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನ ಅನುಮತಿ ಪಡೆದು ಇಟಲಿಗೆ ತೆರಳಿರುವ ಮರೀನ್‌ಗಳನ್ನು ತಾನು ಮತ್ತೆ ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಇಟಲಿ ಸರಕಾರ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 
ಕೃಪೆ ವಾ.ಭಾರತಿ 

No comments:

Post a Comment