Friday, March 22, 2013

ಪ್ರಯಾಣಿಕನಿಗೆ 88,000 ರೂ. ಪರಿಹಾರ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ದಿಲ್ಲಿ ಗ್ರಾಹಕ ಆಯೋಗ ಆದೇಶ



ಮಾರ್ಚ್ -23-2013

ಹೊಸದಿಲ್ಲಿ, ಮಾ. 22: ದುಬೈಗೆ ಪ್ರಯಾಣಿಸಬೇಕಿದ್ದ ವಿಮಾನವನ್ನು ರದ್ದುಪಡಿಸಿದ ಬಳಿಕ ಪರ್ಯಾಯ ವ್ಯವಸ್ಥೆ ಮಾಡದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕನೊಬ್ಬರಿಗೆ 88,000 ರೂ. ಪರಿಹಾರ ನೀಡುವಂತೆ ದಿಲ್ಲಿ ರಾಜ್ಯ ಬಳಕೆದಾರರ ಆಯೋಗ ಆದೇಶ ನೀಡಿದೆ.
 ಏರ್‌ಲೈನ್ಸ್ ನಷ್ಟ ಪರಿಹಾರ ನೀಡಬೇಕಾಗಿದೆ ಎಂದು ಆಯೋಗ ಹೇಳಿತು. ವಿಮಾನವನ್ನು ರದ್ದುಪಡಿಸಿದ ಬಳಿಕ ಅದರ ಪ್ರಯಾಣಿಕರು ಅನುಭವಿಸುವ ಸಂಕಷ್ಟವನ್ನು ಏರ್‌ಲೈನ್ಸ್ ಅರಿಯಬೇಕು ಹಾಗೂ ಇಂಥ ಸಂದರ್ಭಗಳಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿಕೊಡುವುದು ಅದರ ಕರ್ತವ್ಯವಾಗಿದೆ ಎಂದು ಅದು ಅಭಿಪ್ರಾಯಪಟ್ಟಿತು.
ಇಲ್ಲಿನ ಜಿಲ್ಲಾ ವೇದಿಕೆಯೊಂದು ನೀಡಿದ ತೀರ್ಪನ್ನು ಎತ್ತಿ ಹಿಡಿಯುವ ವೇಳೆ ರಾಜ್ಯ ಗ್ರಾಹಕ ಆಯೋಗ ಮೇಲಿನಂತೆ ತನ್ನ ಅಭಿಪ್ರಾಯವನ್ನು ನೀಡಿತು. ಸಂತ್ರಸ್ತ ಪ್ರಯಾಣಿಕನ ದೂರನ್ನು ಎತ್ತಿಹಿಡಿದಿದ್ದ ಜಿಲ್ಲಾ ಗ್ರಾಹಕ ವೇದಿಕೆ ಪ್ರಯಾಣಿಕನಿಗೆ 88,000 ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಇದರಲ್ಲಿ ಪರಿಹಾರ ಮತ್ತು ಇನ್ನೊಂದು ವಿಮಾನದಲ್ಲಿ ಹೋಗುವುದಕ್ಕಾಗಿ ಪ್ರಯಾಣಿಕ ಟಿಕೆಟ್‌ಗೆ ನೀಡಿದ ಹೆಚ್ಚುವರಿ ಮೊತ್ತ ಸೇರಿದೆ.

‘‘ಬಳಕೆದಾರನೊಬ್ಬ ವಿಮಾನದ ಟಿಕೆಟ್ ಕಾದಿರಿಸಿದ ಬಳಿಕ, ತನ್ನ ನಿಯಂತ್ರಣ ಮೀರಿದ ಕಾರಣಗಳನ್ನು ಹೊರತುಪಡಿಸಿ ನಿಗದಿತ ಪ್ರಯಾಣವನ್ನು ಖಾತರಿಪಡಿಸುವುದು ಏರ್‌ಲೈನ್ಸ್‌ನ ಜವಾಬ್ದಾರಿಯಾಗಿದೆ’’ ಎಂದು ರಾಜ್ಯ ಆಯೋಗ ಹೇಳಿತು.
ಜಿಲ್ಲಾ ವೇದಿಕೆಯ ತೀರ್ಪನ್ನು ಏರ್‌ಲೈನ್ಸ್ ರಾಜ್ಯ ಆಯೋಗದಲಿ ಪ್ರಶ್ನಿಸಿತ್ತು. ತಾಂತ್ರಿಕ ಕಾರಣಕ್ಕಾಗಿ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿತ್ತು ಎಂದು ಅದು ವಾದಿಸಿತು.
ಯಾವ ತಾಂತ್ರಿಕ ಕಾರಣ ಎಂಬುದನ್ನು ಏರ್‌ಲೈನ್ ವಿವರಿಸಿಲ್ಲ ಎಂದು ಹೇಳಿದ ಆಯೋಗ ಅದರ ಮೇಲ್ಮನವಿಯನ್ನು ತಳ್ಳಿಹಾಕಿತು.
2005 ಮೇ 22ರಂದು ದಿಲ್ಲಿ ನಿವಾಸಿ ಸುನೀಲ್ ಗೋಯಲ್ ದಿಲ್ಲಿಯಿಂದ ಅಬುಧಾಬಿಗಾಗಿ ದುಬೈಗೆ ಹೋಗಬೇಕಾಗಿತ್ತು.
ಆದರೆ, ವಿಮಾನವನ್ನು ರದ್ದುಪಡಿಸಲಾಗಿತ್ತು ಹಾಗೂ ಅದಕ್ಕೆ ಯಾವುದೇ ಕಾರಣವನ್ನು ನೀಡಲಾಗಿರಲಿಲ್ಲ ಎಂದು ತನ್ನ ದೂರಿನಲ್ಲಿ ಅವರು ಹೇಳಿದ್ದರು. ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ತಾನು ಇನ್ನೊಂದು ವಿಮಾನದಲ್ಲಿ ದುಬಾರಿ ದರ ತೆತ್ತು ಪ್ರಯಾಣಿಸಬೇಕಾಯಿತು ಎಂದು ಹೇಳಿದ್ದರು.
ಕೃಪೆ:ವಾ.ಭಾರತಿ 

No comments:

Post a Comment