Sunday, March 24, 2013

8 ವರ್ಷದ ಬಾಲಕ 61 ವಯಸ್ಸಿನ ಅಜ್ಜಿಯೊಂದಿಗೆ ವಿವಾಹ




ದಕ್ಷಿಣ ಆಫ್ರಿಕದ ಶ್ವಾನೆಯಲ್ಲಿ ವಿಚಿತ್ರ ವಿವಾಹವೊಂದು ನಡೆದಿದೆ. 8ರ ಹರೆಯದ ಶಾಲಾಬಾಲಕ ಸನೆಲಿ ಮಸಿಲೆಲ 61ರ ಹರೆಯದ ಅಜ್ಜಿ ಹೆಲೆನ್‌ ಶಬಂಗುವನ್ನು ವರಿಸಿದ್ದಾನೆ. ಶಬಂಗುವಿನ ಐವರು ಮಕ್ಕಳು ಮತ್ತು ಪತಿ ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು. ನೆರೆದಿದ್ದ 100 ಅತಿಥಿಗಳ ಮುಂದೆ ಮಸಿಲೆಲ ಮತ್ತು ಶಬಂಗು ಉಂಗುರ ವಿನಿಮಯ ಮಾಡಿಕೊಂಡರು ಮತ್ತು ಪರಸ್ಪರ ಚುಂಬಿಸಿದರು.


ಸತ್ತ ತನ್ನ ಪೂರ್ವಜರು ಈ ಮದುವೆಯಾಗುವಂತೆ ತನಗೆ ಆದೇಶಿಸಿದ್ದರೆಂದು ಮಸಿಲೆಲ ಹೇಳಿದನು. ಆದರೆ ಈ ಜೋಡಿ ವಿವಾಹ ದೃಢಪತ್ರಕ್ಕೆ ಸಹಿ ಮಾಡಲಿಲ್ಲ ಮತ್ತು ಮುಂದೆ ಜತೆಯಾಗಿ ಜೀವಿಸುವುದೂ ಇಲ್ಲ. ಒಂದು ವಿಧಿಯಾಗಿ ಮಾತ್ರ ಈ ವಿವಾಹವನ್ನು ನಡೆಸಲಾಯಿತು ಮತ್ತು ಕಾನೂನುರೀತ್ಯಾ ಇದಕ್ಕೆ ಬದ್ಧತೆ ಹೊಂದಬೇಕಿಲ್ಲವೆಂದು ಮಸಿಲೆಲ ಕುಟುಂಬ ಹೇಳುತ್ತಿದೆ.

ಶಬಂಗುವನ್ನು ಮದುವೆಯಾಗಲು ತನಗೆ ಸಂತಸವಾಗಿದೆ. ಆದರೆ ಮುಂದೆ ತಾನು ವಯಸ್ಕನಾದಾಗ ತನ್ನದೇ ವಯಸ್ಸಿನ ಮಹಿಳೆಯನ್ನು ಮದುವೆಯಾಗಲಿದ್ದೇನೆ ಎಂದು ಮಸಿಲೆಲ ಹೇಳಿದನು. ಬಾಲಕನ ಅಜ್ಜ ತಾನು ಸಾಯುವ ಮುನ್ನ ಆತ ವಿವಾಹವಾಗುವುದನ್ನು ಕಾಣುವ ಕೊನೆಯಾಸೆ ವ್ಯಕ್ತಪಡಿಸಿದ್ದರೆಂದು ಬಾಲಕನ ತಾಯಿ ಪೇಟಿಯೆನ್ಸ್‌(46) ತಿಳಿಸಿದರು.

ಈ ವಿವಾಹವಾಗುವ ಮೂಲಕ ಪೂರ್ವಿಕರನ್ನು ಸಂತುಷ್ಟಿಪಡಿಸಬಹುದು ಮತ್ತು ಹಾಗೆ ಮಾಡದಿದ್ದಲ್ಲಿ ಕುಟುಂಬಕ್ಕೆ ಕೆಡುಕಾಗಬಹುದೆಂಬ ಪೇಟಿಯೆನ್ಸ್‌ ಅಭಿಪ್ರಾಯವನ್ನು ಶಬಂಗು ಒಪ್ಪಿಕೊಂಡಿದ್ದಳು

No comments:

Post a Comment