Friday, March 8, 2013

ಮಂಜೇಶ್ವರ್ ಟೈಮ್ಸ್ ಪುಟ್ಟ ಹೆಜ್ಜೆಯೊಂದಿಗೆ 5ನೇ ವರ್ಷಕ್ಕೆ

ರಹಿಮಾನ್ ಉದ್ಯಾವರ

ನಿಮ್ಮ ನೆಚ್ಚಿನ ತಾಣವಾದ ಮಂಜೇಶ್ವರ ಟೈಮ್ಸ್  ತಮ್ಮೆಲ್ಲರ ಸಹಕಾರದಿಂದ ದಿನದಿಂದ ದಿನಕ್ಕೆ ತನ್ನ ಓದುಗರ ಸಂಖ್ಯೆ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ಹೋಗುತ್ತಿದೆ .ಇನ್ನು ಶೀಘ್ಹ್ರದಲ್ಲೇ ಈ ತಾಣವನ್ನು ಹೊಸ ವಿನ್ಯಾಸದಲ್ಲಿ  ರೂಪಿಸಬೇಕೆಂಬ ಕನಸನ್ನು ಕಾಣುತಿದ್ದೇವೆ.ಇದೀಗ ಮಂಜೇಶ್ವರ್ ಟೈಮ್ಸ್ ಬ್ಲಾಗ್ ಸುದ್ದಿ ತಾಣದ ರೀತಿಯಲ್ಲಿ ನಿಮ್ಮ ಮುಂದೆ ಬಂದು ಇದೀಗ 4 ವರ್ಷ ಪೂರ್ತಿ ಗೊಳಿಸಿ 5 ನೇ ವರ್ಷಕ್ಕೆ ಅಡಿಯಿಡುತ್ತಿದೆ.ಇದೀಗ ಮಂಜೇಶ್ವರ್ ಟೈಮ್ಸ್ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಸಂತೋಷದ ವಿಷಯ.
ಮಂಜೇಶ್ವರ್ ಟೈಮ್ಸ್ ಬ್ಲಾಗ್ ಆರಂಭಿಸುವಾಗ ವ್ಯಾಪಾರಿ,ಪಾರ್ಟಿ,ಅಥವಾ ಜಾತಿ ಮೊದಲಾದ ವೃತ್ತಿಪರ ಪತ್ರಿಕೋದ್ಯಮಕ್ಕೆ ಪರ್ಯಾಯವಾಗುವ ಕನಸು ಹೊತ್ತು ರಂಗಕ್ಕೆ ಬಂದ ತಾಣವಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕೆಲವು ಮಿತ್ರರ ಹಾಗು ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಕೆಲ ಸ್ನೇಹಿತರು ಸೇರಿ ಆರಂಭಿಸಿದ ಈ ತಾಣ ನಿಮ್ಮೆಲ್ಲರ ಸಹಕಾರದಿಂದ ಜನಪ್ರಿಯವಾಗಲು ಕಾರಣವಾಗಿದೆ ಅದಕ್ಕೆ ನಾವು ಎಂದಿಗೂ ಅಭಾರಿಯಾಗಿದ್ದೇವೆ.ನಾವು ಸಂಪೂರ್ಣವಾಗಿ ನಮ್ಮನ್ನು ಇದರಲ್ಲಿ ತೊಡಗಿಸಿಕೊಂಡಿಲ್ಲವಾದರೂ ಕೆಲಸದ ಬಿಡುವಿನ ವೇಳೆಯಲ್ಲಿ ಈ ತಾಣದಲ್ಲಿ ಸುದ್ದಿ ಮತ್ತು ಅಂಕಣಗಳನ್ನು ಪ್ರಕಟಿಸುತ್ತಾ ಬಂದಿದ್ದೇವೆ .
ಮಂಜೇಶ್ವರ ಟೈಮ್ಸ್ ಬ್ಲಾಗಿಗೆ ಬೇಟಿ ನೀಡಿ ತಾವೂ ಓದಿ,ಇತರರೀಗೂ ಸಂದೇಶ ಕಳಿಸಿ ಓದಿದ್ದನ್ನು ಚರ್ಚಿಸಿ ಮಂಜೇಶ್ವರ್ ಟೈಮ್ಸ್ ನ ಜತೆಗೊಂದು ಭಾವನಾತ್ಮಕ ನಂಟು ಬೆಳೆಸಿ ಕೊಂಡವರು ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗು ಗಲ್ಫ್ ರಾಜ್ಯಗಳಲ್ಲಿ ಧಾರಾಳವಿದ್ದಾರೆ.ಈಗಿನ್ನೂ ಅಂತರ್ಜಾಲ ತಾಣಗಳಲ್ಲಿ ತೇಲಾಡುತ್ತಿರುವ ತಾಣಗಳಿಗೆಲ್ಲಾ ಸಂಪೂರ್ಣವಾಗಿ ಪರ್ಯಾಯವಾಗಿ ಬಿಡುವಷ್ಟು ಎತ್ತರಕ್ಕೆ ಮಂಜೇಶ್ವರ್ ಟೈಮ್ಸ್ ಬೆಳೆದಿಲ್ಲವೆಂಬುದು ನಿಜ.ಆದರೆ ಈ ನಾಲ್ಕು ವರ್ಷಗಳಲ್ಲಿ ಅದು ಕೆಲವರ ನಿದ್ದೆಕೆಡಿಸುವಷ್ಟು ಚೈತನ್ಯ ಬೆಳೆಸಿಸಿಕೊಂಡಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.
ಈ ತಾಣವು ಜಾತಿ ನಿಂದನೆಯ ವಿರುದ್ದವಾಗಿದ್ದು ಎಲ್ಲಾ ಜಾತಿಯವರಿಗೂ ಒಂದೇ ಸ್ಥಾನವನ್ನು ಕಲ್ಪಿಸಿದೆ ಅದೇ ರೀತಿ ಯಾವುದೇ ರಾಜಕೀಯ ಸಿದ್ದಾಂತಕ್ಕೂ ವಿರುದ್ದವಾಗದೇ ಸಮಾಜ ಘಾತಕ ವ್ಯಕ್ತಿಗಳ ವಿರುದ್ದ ಧ್ವನಿ ಎಬ್ಬಿಸಿ ಸಮಾಜದ ದಮನಿತರ ದ್ವನಿಯಾಗಬೇಕೆಂಬ ಕನಸನ್ನು ಹೊತ್ತು ಸಾಗುತ್ತಿದೆ ಇದಕ್ಕೆ ನಮ್ಮ ಎಲ್ಲಾ ಓದುಗರ ಸಹಕಾರ ಅತೀ ಅಗತ್ಯ.
ಈ ತಾಣದ ಮೂಲಕ ಸಮಾಜದ ದಮನಿತರ ಪರವಾದ ಧ್ವನಿಯಾಗಬೇಕೆಂಬ ನಮ್ಮ ಕನಸು ನನಸಾಗಿರುವುದಕ್ಕೆ ತಾಣದ ಯಶಸ್ಸು ಸಾಕ್ಷಿ ಎಂಬುವುದು ನನ್ನ ನಂಬಿಕೆ . ನಮ್ಮ ಈ ಸುದ್ದಿ ತಾಣ ಧಾರ್ಮಿಕ ಕೋಮುವಾದದ ವಿರುದ್ಧವಾಗಿರಬೇಕು , ಮೂಲಭೂತವಾದದ ವಿರುದ್ಧವಾಗಿರಬೇಕು ಎಂಬ ನಿಲುವನ್ನು ಹೊಂದಿದ್ದು ಇಂದಿಗೂ ನಮ್ಮ ನಿಲುವಿಗೆ ನಾವು ಬದ್ಧರಾಗಿದ್ದೇವೆ .
ಮಂಜೇಶ್ವರ್ ಟೈಮ್ಸ್ ಬಗ್ಗೆ ನಿಮ್ಮ ಅನಿಸಿಕೆ, ಸಲಹೆ ಸೂಚನೆಗಳನ್ನು ಕಾತುರದಿಂದ ಎದುರು ನೋಡುತಿದ್ದೇವೆ.
                                                                                                                ರಹಿಮಾನ್ ಉದ್ಯಾವರ
                                                                                                                ಪ್ರಧಾನ ಸಂಪಾದಕರು
         

No comments:

Post a Comment