Monday, March 25, 2013

ಮಟ್ಕಾ ಧಾಳಿ:4 ಮಂದಿ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ 4 ಮಂದಿಯನ್ನು ಪೊಲೀಸರು ಸೆರೆ ಹಿಡಿದು ಕೇಸು ದಾಖಲಿಸಿರುತ್ತಾರೆ.
ಉಪ್ಪಳ ಫತ್ವಾಡಿ ರಸ್ತೆಯಿಂದ ಆಟದಲ್ಲಿ ನಿರತರಾಗಿದ್ದ ಫತ್ವಾಡಿ ನಿವಾಸಿ ಅಬ್ದುಲ್ ಖಾದರ್(44) ಸಂತಡ್ಕ ನಿವಾಸಿ ಸತೀಶ(25)ಎಂಬಿವರನ್ನು ಸೆರೆ ಹಿಡಿದು ಆಟಕ್ಕೆ ಬಳಸಲಾಗಿದ್ದ 1020 ರೂವನ್ನು ವಶಪಡಿಸಲಾಗಿದೆ.
ಕುಂಜತ್ತೂರು ಮಟ್ಕಾ ಅಡ್ಡೆಗೆ ಧಾಳಿ ನಡೆಸಿದ ಪೊಲೀಸರು ಸ್ಥಳೀಯ ನಿವಾಸಿಗಳಾದ ಕೃಷ್ಣ(40) ಹಾಗು ಉಮೇಶ(30) ಎಂಬಿವರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ 390 ರೂ ವನ್ನು ವಶಪಡಿಸಿಕೊಂಡಿದ್ದಾರೆ.

No comments:

Post a Comment