Saturday, March 23, 2013

ಡೀಸೆಲ್ ಬೆಲೆ ಲೀ.ಗೆ 45 ಪೈಸೆ ಏರಿಕೆ ಮಾರ್ಚ್ -23-2013

ಹೊಸದಿಲ್ಲಿ: ಡೀಸೆಲ್ ದರದಲ್ಲಿ ಶುಕ್ರವಾರ ಲೀಟರ್‌ಗೆ 45 ಪೈಸೆಯಷ್ಟು ಏರಿಕೆಯಾಗಿದೆ. ಈ ವರ್ಷದ ಜನವರಿಯಿಂದ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿರುವುದು ಇದು ಮೂರನೆ ಬಾರಿಯಾಗಿದೆ. ವ್ಯಾಟ್ ಹೊರತು ಪಡಿಸಿ ಡೀಸೆಲ್ ಬೆಲೆಯನ್ನು ಲೀಟರ್‌ಗೆ 45 ಪೈಸೆಯಷ್ಟು ಹೆಚ್ಚಿಸಲಾಗಿದೆಯೆಂದು ಭಾರತದ ಅತಿ ದೊಡ್ಡ ತೈಲ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ) ಹೇಳಿಕೆಯೊಂದರಲ್ಲಿ ತಿಳಿಸಿದೆ. ಶನಿವಾರದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆಯೆಂದು ಅದು ತಿಳಿಸಿದೆ. ನೂತನ ಬೆಲೆಯೇರಿಕೆಯಿಂದಾಗಿ ರಾಜಧಾನಿ ದಿಲ್ಲಿಯಲ್ಲಿ ಡೀಸೆಲ್ ದರ ಲೀಟರ್‌ಗೆ 48.67 ರೂ.ಆಗಲಿದೆ.
ಪ್ರಸ್ತುತ ಅಲ್ಲಿ ಡೀಸೆಲ್ ದರ ಲೀಟರ್‌ಗೆ 48.16 ರೂ. ಆಗಿದೆ. ಡೀಸೆಲ್ ದರವನ್ನು  ಪ್ರತಿ ತಿಂಗಳೂ ಲೀಟರ್‌ಗೆ ೫೦ ಪೈಸೆ ಏರಿಕೆ ಮಾಡಲು ಕೇಂದ್ರ ಸರಕಾರವು ಸಾರ್ವಜನಿಕ ರಂಗದ ತೈಲ ಕಂಪೆನಿಗಳಿಗೆ ಅನುಮತಿ ನೀಡಿತ್ತು. ಡೀಸೆಲ್ ಮಾರಾಟದಲ್ಲಿ ನಷ್ಟವುಂಟಾಗುವುದನ್ನು ಕೊನೆಗೊಳಿಸುವ ಉದ್ದೇಶದಿಂದ ಅದು ಈ ಕ್ರಮವನ್ನು ಕೈಗೊಂಡಿದೆ. 
ವಾ.ಭಾರತಿ 

No comments:

Post a Comment