Tuesday, March 19, 2013


ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ 250 ಕೋಟಿ ರೂ. ಯೋಜನೆ: ಅಜಿತ್ ಸಿಂಗ್
mail-img print-img

ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ 250 ಕೋಟಿ ರೂ. ಯೋಜನೆ: ಅಜಿತ್ ಸಿಂಗ್

ಮಂಗಳವಾರ - ಮಾರ್ಚ್ -19-2013

ಮಂಗಳೂರು, ಮಾ.18: ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ೨೫೦ ಕೋಟಿ ರೂಪಾಯಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 100 ಕೋಟಿ ರೂಪಾಯಿ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ತಿಳಿಸಿದ್ದಾರೆ. ಅವರು ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವೈಮಾನಿಕ  ಸರಕು ನಿರ್ವಹಣೆಯ ನೂತನ ಏರ್ ಕಾರ್ಗೋ ಕಾಂಪ್ಲೆಕ್ಸ್ ಹಾಗೂ ಸಾಮಾನ್ಯ ಸರಕು ನಿರ್ವಹಣಾ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯನ್ನು 3400 ಮೀಟರ್ ವಿಸ್ತರಿಸಲು ಕೇಂದ್ರ ಸರಕಾರ 250 ಕೋಟಿ ರೂಪಾಯಿಯ ಯೋಜನೆ ಯನ್ನು ತಯಾರಿಸಿದೆ. ಇದಕ್ಕಾಗಿ 280 ಎಕರೆ ವಿಸ್ತೀರ್ಣದ ಭೂ ಪ್ರದೇಶದ ಅಗತ್ಯವಿದೆ. ರಾಜ್ಯಸರಕಾರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅದನ್ನು ಒದಗಿಸಿ ಕೊಡಲು ಮುಂದಾದರೆ ಈ ಯೋಜನೆ ಯನ್ನು ತ್ವರಿತವಾಗಿ ಕಾರ್ಯಗತ ಗೊಳಿಸಬಹುದು.
ಆ ಮೂಲಕ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೋಯಿಂಗ್ -747-400-ಹಾರಾಟಕ್ಕೆ ಅನುಕೂಲವಾಗಲಿದೆ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಈಗಾಗಲೇ ಘೋಷ ಣೆಯಾಗಿದ್ದರೂ, ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದ್ದ ಕಸ್ಟಮ್ಸ್ ಏರ್‌ಪೋರ್ಟ್  ಕಾಂಪ್ಲೆಕ್ಸ್  ರಚನೆಯಾಗಿರಲ್ಲಿ  ಪ್ರಸಕ್ತ ಹಳೆಯ ವಿಮಾನ ನಿಲ್ದಾಣದ ಆವರಣದಲ್ಲಿ 1400 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಸಂಕೀರ್ಣವನ್ನು ಆರಂಭಿಸಲಾಗಿದೆ.
ಈ ಸಂಕೀರ್ಣದ ಮೂಲಕ ವಾರ್ಷಿಕ 5000 ಮೆಟ್ರಿಕ್ ಟನ್ ಅಂತಾರಾಷ್ಟ್ರೀಯ ಸರಕು ಆಮದು, ೧೩,೦೦೦ ಮೆಟ್ರಿಕ್ ಟನ್  ಅಂತಾರಾಷ್ಟ್ರೀಯ ಸರಕು ರಫ್ತು, ಹಾಗೂ 36,000 ಮೆಟ್ರಿಕ್ ಟನ್ ದೇಶದ ಆಂತರಿಕ ಸರಕು ಸಾಗಾಟ ನಿರ್ವಹಣೆಗೆ ಈ ಸಂಕೀರ್ಣದಿಂದ ಸಹಾಯವಾಗಲಿದೆ  ಎಂದು ಅಜಿತ್ ಸಿಂಗ್ ತಿಳಿಸಿದರು.
ಪ್ರಸಕ್ತ ಮಂಗಳೂರು ವಿಮಾನ ನಿಲ್ದಾಣದಿಂದ ವಾರದಲ್ಲಿ ೨೦೦ವಿಮಾನ ಸಂಚಾರವನ್ನು ನಿರ್ವಹಿಸಲಾಗುತ್ತದೆ. ಮಂಗಳೂರು ವಿಮಾನ ನಿಲ್ದಾಣದಿಂದ ದೇಶದೊಳಗೆ ಆಂತರಿಕ ಪ್ರಯಾಣಿಕರ ವಾರ್ಷಿಕ  ಸರಾಸರಿ  ಸಂಖ್ಯೆ ಶೆ.6.4 ರಷ್ಟಿದ್ದು, ಅಂತಾ ರಾಷ್ಟ್ರೀಯ ಪ್ರಯಾಣಿಕರ ಸರಾಸರಿ 3.9 ರಷ್ಟಿದೆ.ಈ ಪ್ರಮಾಣವನ್ನು ಮುಂದಿನ ಐದು ವರ್ಷದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆಯನ್ನು ಶೇ10.15ಕ್ಕೆ ಹಾಗೂ ಸರಕು ನಿರ್ವಹಣೆಯ ಸರಾಸರಿಯನ್ನು ಶೇ.12ರಿಂದ 15ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಅಜಿತ್ ಸಿಂಗ್ ತಿಳಿಸಿದರು.
ನೂತನ ಸರಕು ಸಾಗಾಟದ ಸಂಕೀರ್ಣದ ನಿರ್ಮಾಣದಿಂದ ಜಿಲ್ಲೆಯಲ್ಲಿ ಬೆಳೆದ ಬೆಳೆ,ಬೇಗ ಹಾಳಾಗುವ ವಸ್ತುಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ದೇಶ ವಿದೇಶಗಳ ಪ್ರಮುಖ ಕೇಂದ್ರಗಳ ಜೊತೆ ಕ್ಲಪ್ತ ಸಮಯದಲ್ಲಿ ಸಂಪರ್ಕ ಸಾಧಿಸಲು ಸಹಾಯವಾಗಲಿದೆ.ದೇಶದ ಪ್ರಮುಖ ನಗರಗಳಾದ ದೆಹಲಿ, ಚೆನ್ನೈ, ಕೊಲ್ಕೊತ್ತಾ, ಮುಂಬೈ, ನಗರಗಳೊಂದಿಗೆ ಸಂಪರ್ಕಸಾಧಿಸಲು ಸಾಧ್ಯವಾಗಲಿದೆ.
ದಕ್ಷಿಣ ಭಾರತದಲ್ಲಿ ಕೊಯಂಬತ್ತೂರು, ತಿರುಚಿಯೊಂದಿಗೆ ಮೂರನೆಯದಾಗಿ ಮಂಗಳೂರು ವಿಮಾನ ನಿಲ್ದಾಣ ಸರಕು ಸಂಕೀರ್ಣವನ್ನು ಹೊಂದಿರುವ ದೇಶದ 24ನೆ ವಿಮಾನ ನಿಲ್ದಾಣವಾಗಿ ರೂಪುಗೊಂಡಂತಾಗಿದೆ ಎಂದು ಅಜಿತ್ ಸಿಂಗ್ ತಿಳಿಸಿದರು. 1951ರಲ್ಲಿ ಜವಾಹರಲಾಲ್ ನೆಹರೂ ಪ್ರಥಮ ಬಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಲಕನಾಗಿದ್ದಾಗ ಭೇಟಿ ನೀಡಿರುವುದನ್ನು ಪೆಟ್ರೋಲಿಯಂ ಖಾತೆ ಸಚಿವ ರಪ್ಪವೊಯ್ಲಿ ನೆನಪಿಸಿಕೊಂಡರು.
ಮಂಗಳೂರು ವಿಮಾನ ನಿಲ್ದಾಣದ ಬೆಳವಣಿಗೆಗೆ ಕಾರಣರಾದವರಿಗೆ ಮೊಯ್ಲಿ ಕೃತಜ್ಞತೆ ಸಲ್ಲಿಸಿದರು. ಸಹಾಯಕ  ವಿಮಾನಯಾನ ಸಚಿವ ಕೆ.ಸಿ ವೇಣುಗೋಪಾಲ್,ಸಂಸದ ಆಸ್ಕರ್ ಫೆರ್ನಾಂಡಿಸ್, ಜಯಪ್ರಕಾಶ್ ಹೆಗ್ಡೆ,ಶಾಸಕರಾದ ಅಭಯ ಚಂದ್ರ ಜೈನ್, ಕೃಷ್ಣ ಜೆ.ಪಾಲೆಮಾರ್,ರಮಾನಾಥ ರೈ,ಗೋಪಾಲ ಭಂಡಾರಿ,ಯು.ಟಿ.ಖಾದರ್,ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ.ಅಗರ್‌ವಾಲ್, ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ರಾಧಾಕೃಷ್ಣ ಸಮಾರಂಭದಲ್ಲಿ ಭಾಗವಹಿಸಿದ್ದರು.

No comments:

Post a Comment