Monday, March 18, 2013

ಸಿ.ಕೆ.ಚಂದ್ರಪ್ಪನ್ ಪ್ರಥಮ ಚರಮ ವಾರ್ಷಿಕ ಸಂಸ್ಮರಣ ಸಮಾವೇಶ 22 ರಂದು ಉಪ್ಪಳದಲ್ಲಿಮಂಜೇಶ್ವರ:ಕಮ್ಯುನಿಸ್ಟ್ ಪಕ್ಷದ ಜನಪ್ರಿಯ ನೇತಾರರೂ ಪ್ರಬುದ್ದ ಪಾರ್ಲಿಮೆಂಟೇರಿಯನ್ ಆಗಿದ್ದ ದಿವಂಗತ:ಸಿ.ಕೆ.ಚಂದ್ರಪ್ಪನವರ ಪ್ರಥಮ ಚರಮ ವಾರ್ಷಿಕ ದಿನವಾಗಿದೆ ಮಾರ್ಚ್ 22.ಅಂದು ರಾಜ್ಯಾದಾಧ್ಯಂತ ಸಂಸ್ಮರಣ ಸಮಾವೇಶ,ಪ್ರಬಾತ್ ಫೇರಿ,ಉಪನ್ಯಾಸ,ಮೊದಲಾದ ವಿವಿಧ ಕಾರ್ಯಕ್ರಮಗಳೊಂದಿಗೆ ಚರಮ ವಾರ್ಷಿಕ ದಿನ ಆಚರಿಸಲು ಕಮ್ಯುನಿಸ್ಟ್ ಪಕ್ಷ ತೀರ್ಮಾನಿಸಿದೆ.ಮಂಜೇಶ್ವರ ಮಂಡಲದಲ್ಲಿ ಪ್ರಧಾನ ಸಂಸ್ಮರಣ ಸಮಾವೇಶ ಮಾರ್ಚ್-22 ರಂದು ಅಪರಾಹ್ನ 3 ಗಂಟೆಗೆ ಉಪ್ಪಳ ಕೈಕಂಬ ಪಂಚಮಿ ಹಾಲ್ ನಲ್ಲಿ ಜರಗಲಿದೆ.
ಸಮಾವೇಶವನ್ನು ಸಿ.ಪಿ.ಐ.ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸುವರು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ಜಿಲ್ಲಾ ಸಮಿತಿ ಸದಸ್ಯರಾದ ಯಂ.ಚಂದ್ರ ನಾಯ್ಕ್,ಎಂ.ಜಿ ಹೆಗ್ಡೆ,ಎಂ.ಸಂಜೀವ ಶೆಟ್ಟಿ,ರಾಮಕೃಷ್ಣ ಕಡಂಬಾರ್,ಬಿ.ಎಂ.ಅನಂತ,ಮೊದಲಾದವರು ಭಾಗವಹಿಸಲಿದ್ದು ಸಮಾವೇಶ ಯಶಶ್ವೀ ಗೊಳಿಸಲು ಸಿಪಿಐ ಮಂಡಲ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

No comments:

Post a Comment