Friday, March 29, 2013

ಯೆನೆಪೊಯ ವಿವಿಯಿಂದ 2013-14ನೆ ಸಾಲಿನ ಎಂಬಿಬಿಎಸ್-ಬಿಡಿಎಸ್ ಪ್ರಾಯೋಜಿತ ಸೀಟುಗಳಿಗಾಗಿ ಅರ್ಜಿ ಆಹ್ವಾನ



ಮಾರ್ಚ್ -29-2013

ಮಂಗಳೂರು: ಯೆನೆಪೊಯ ವಿಶ್ವ ವಿದ್ಯಾಲಯದಿಂದ 2013-14ನೆ ಸಾಲಿನ ಎಂಬಿಬಿಎಸ್-ಬಿಡಿಎಸ್‌ಗೆ ಸಂಪೂರ್ಣ ಶುಲ್ಕ ವಿನಾಯಿತಿ ಹೊಂದಿರುವ ಪ್ರಾಯೋಜಿತ ಸೀಟುಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಯೆನೆಪೊಯ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
 ಪ್ರತಿಭಾವಂತ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕ ಹಾಗೂ ನಿಗದಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. 2012-13ನೆ ಸಾಲಿನಲ್ಲಿ ನಿಗದಿ ಪಡಿಸಿದ ವಾರ್ಷಿಕ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ ಅಥವಾ ಜೈವಿಕ ತಂತ್ರಜ್ಞಾನ ಶಾಸ್ತ್ರ ವಿಷಯ ಗಳಲ್ಲಿ ಶೇ.80 ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ಕರ್ನಾಟಕ ಅಥವಾ ಕೇರಳ ರಾಜ್ಯದ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.
ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಸಲ್ಲಿಸಿದ ಅರ್ಜಿಯ ಪ್ರತಿ, ಸಂಸ್ಥೆಯ ಪ್ರಾಂಶುಪಾಲರಿಂದ ದೃಢೀಕರಿಸಿದ ಅಂಕಪಟ್ಟಿ (ಹೊಂದಿದ್ದರೆ, ಇಲ್ಲದಿದ್ದರೆ ಫಲಿತಾಂಶ ಪ್ರಕಟವಾದ ತಕ್ಷಣ) ಪ್ರತಿಯೊಂದಿಗೆ ಬಿಳಿಹಾಳೆಯಲ್ಲಿ ಅರ್ಜಿಯನ್ನು ಯೆನೆಪೊಯ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ ಕಚೇರಿಯಲ್ಲಿ ರೂ.750 ಪಾವತಿಸಿ ಪ್ರವೇಶ ಪತ್ರದ ಅರ್ಜಿಯನ್ನು ವೆಬ್‌ಸೈಟ್: www.yenepoya.edu.in  ಪಡೆದುಕೊಳ್ಳಬಹುದು.
ಭರ್ತಿಮಾಡಿದ ಅರ್ಜಿಯನ್ನು ಮೇ 5ರೊಳಗೆ ಪ್ರೊ.ಪಿ.ಸಿ.ಎಂ.ಕುಂಞ.ಸಂಚಾಲಕರು, ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜುಕೇಶನ್ ಆ್ಯಂಡ್ ಚ್ಯಾರಿಟೆಬಲ್ ಟ್ರಸ್ಟ್, ಯೆನೆಪೊಯ ವಿಶ್ವವಿದ್ಯಾಲಯ ಆವರಣ, ದೇರಳಕಟ್ಟೆ, ಮಂಗಳೂರು- 575018 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

No comments:

Post a Comment