Wednesday, March 27, 2013

ಎ.1ರಿಂದ ಡೀಸೆಲ್ ಚಾಲಿತ ತ್ರಿಚಕ್ರ ವಾಹನಗಳ ನೋಂದಾವಣೆ ನಿಷೇಧ ಮಾರ್ಚ್ -27-2013

ಪುತ್ತೂರು, ಮಾ.26: ಸರಕಾರದ ಸೂಚನೆಯಂತೆ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೊಳಪಟ್ಟ ತಾಲೂಕುಗಳಾದ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ಪ್ರದೇಶಗಳಲ್ಲಿ ಎ.1ರಿಂದ ಡೀಸೆಲ್ ಚಾಲಿತ ತ್ರಿಚಕ್ರ ಪ್ರಯಾಣಿಕರ ವಾಹನಗಳ ನೋಂದಾವಣೆಯನ್ನು ನಿಷೇಧಿಸಿದೆ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ನಂದರಾಜೇ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಆಯುಕ್ತರು ಬೆಂಗಳೂರು ಇವರ ಆದೇಶದಂತೆ ಕರ್ನಾಟಕದಾ ದ್ಯಂತ ಡೀಸೆಲ್ ಚಾಲಿತ ತ್ರಿಚಕ್ರ ಪ್ರಯಾಣಿಕರ ವಾಹನಗಳ ನೋಂದಣಿ ಮಾಡುವುದನ್ನು ಎ.1ರಿಂದ ಅನ್ವಯವಾಗುವಂತೆ ಸರಕಾರವು ನಿಷೇಧಿಸಿದೆ. ಈ ಆದೇಶದ ಮೇರೆಗೆ ಪುತ್ತೂರು ಕಚೇರಿ ವ್ಯಾಪ್ತಿಗೆ ಬರುವ ಮೂರು ತಾಲೂಕುಗಳ ಪ್ರದೇಶಗಳಲ್ಲಿ ಸದ್ರಿ ದಿನಾಂಕದಿಂದ ಜಾರಿಗೆ ಬರುವಂತೆ ಡೀಸೆಲ್ ಚಾಲಿತ ತ್ರಿಚಕ್ರ ಪ್ರಯಾಣಿಕ ವಾಹನಗಳನ್ನು ತಮ್ಮ ಕಚೇರಿಯಲ್ಲಿ ನೋಂದಾಯಿಸ ಲಾಗುವುದಿಲ್ಲ. ಹಾಗೂ ಸರಕಾರದ ಅಧಿಸೂಚನೆ 2009ರ ಆಗಸ್ಟ್ 29ರ ಪ್ರಕಾರ ಯಾವ ಸ್ಥಳಗಳಲ್ಲಿ ಎಲ್‌ಪಿಜಿ ರೆಟ್ರೋಫಿಟ್ಮೆಂಟ್ ಕೇಂದ್ರಗಳು ಮತ್ತು ಮರು ಇಂಧನ ಸೌಲಭ್ಯ ಹೊಂದಲಾಗಿದೆಯೋ ಅಂತಹ ಸ್ಥಳಗಳಲ್ಲಿ 4-ಸ್ಟ್ರೋಕ್ ಎಂಜಿನ್ ಹೊಂದಿರುವ ಎಲ್‌ಪಿಜಿ ಮತ್ತು ಪೆಟ್ರೋಲ್ ಇಂಧನಗಳನ್ನು ಹೊಂದಿ ರುವ ಆಟೊರಿಕ್ಷಾ ಕ್ಯಾಬ್‌ಗಳು ಮಾತ್ರ ನೋಂದಾಯಿಸಲು ಅವಕಾಶವಿರುತ್ತದೆ. ಎಲ್‌ಪಿಜಿ ಕೇಂದ್ರಗಳ ಸೌಲಭ್ಯಗಳು ಲಭ್ಯವಿಲ್ಲದೇ ಇರುವ ಪ್ರದೇಶಗಳ ವ್ಯಾಪ್ತಿಯಲ್ಲಿ 4-ಸ್ಟ್ರೋಕ್ ಎಂಜಿನ್ ಪೆಟ್ರೋಲ್ ಆಟೊ ರಿಕ್ಷಾ ಕ್ಯಾಬ್‌ಗಳನ್ನು ಮಾತ್ರ ನೋಂದಾಯಿಸಲಾಗುವುದು. ಆದುದರಿಂದ ಆಟೊರಿಕ್ಷಾ ಕ್ಯಾಬ್‌ಗಳನ್ನು ಖರೀದಿಸುವ ಎಲ್ಲಾ ಸಾರ್ವಜನಿಕರು ಈ ಮಾಹಿತಿಯನ್ನು ಗಮನಿಸುವಂತೆ ವಿನಂತಿಸಿರುವ ಅವರು ಹೆಚ್ಚಿನ ಮಾಹಿತಿಗಾಗಿ ತಮ್ಮ ಕಚೇರಿಯನ್ನು ಕಚೇರಿ ಕೆಲಸದ ಸಮಯದಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಕೃಪೆ ವಾ.ಭಾರತಿ 

No comments:

Post a Comment