Friday, March 22, 2013

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ : ಸಂಜಯ್ ದತ್ತ್‌ಗೆ ಇನ್ನೂ ಮೂರೂವರೆ ವರ್ಷ ಜೈಲು


1993ರ ಮುಂಬೈ ಸರಣಿ ಸ್ಫೋಟ ಪ್ರಕರಣ : ಸಂಜಯ್ ದತ್ತ್‌ಗೆ ಇನ್ನೂ ಮೂರೂವರೆ ವರ್ಷ ಜೈಲು
 ಮಾರ್ಚ್ -22-2013

*ಜೈಲು ಶಿಕ್ಷೆಯ ಅವಧಿ ಆರು ವರ್ಷಗಳಿಂದ ಐದು ವರ್ಷಗಳಿಗೆ ಇಳಿಕೆ
ಹೊಸದಿಲ್ಲಿ,ಮಾ.21: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್‌ಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಜೈಲು ಶಿಕ್ಷೆ ವಿಧಿಸಿದ್ದ ಟಾಡಾ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ಆದರೆ ಸಂಜಯ್ ದತ್ತ್ ಅವರ ಜೈಲು ಶಿಕ್ಷೆಯ ಅವಧಿಯನ್ನು ಆರು ವರ್ಷಗಳಿಂದ ಐದು ವರ್ಷಗಳಿಗೆ ಇಳಿಸಿದೆ. ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಂಜಯ್ ದತ್ತ್‌ಗೆ ಟಾಡಾ ನ್ಯಾಯಾಲಯ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅವರು ಈಗಾಗಲೇ ೧೮ ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದು, ಆನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಹೀಗಾಗಿ ಅವರು ಇನ್ನು ಮುಂದೆ ಮೂರೂವರೆ ವರ್ಷಗಳನ್ನು ಮಾತ್ರ ಜೈಲಿನಲ್ಲಿ ಕಳೆಯಬೇಕಾಗಿದೆ.
“ಅಪರಾಧದ ಸನ್ನಿವೇಶಗಳು ಹಾಗೂ ಸ್ವರೂಪವು ಅತ್ಯಂತ ಗಂಭೀರವಾಗಿರುವುದರಿಂದ ಸಂಜಯ್ ದತ್ತ್‌ಗೆ ಜಾಮೀನು ಬಿಡುಗಡೆ ನೀಡಲು ಸಾಧ್ಯವಿಲ್ಲ” ಎಂದು  ನ್ಯಾಯಮೂರ್ತಿ ಗಳಾದ ಪಿ. ಸದಾಶಿವಂ ಹಾಗೂ ಬಿ.ಎಸ್. ಚವಾಣ್ ಅವರಿದ್ದ ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ.  ಈ ಬಾಲಿವುಡ್ ನಟನಿಗೆ ಜೈಲು ಶಿಕ್ಷೆಯನ್ನು ವಿಧಿಸುವ ಟಾಡಾ ನ್ಯಾಯಾಲಯದ ನಿರ್ಧಾರವು ಸರಿಯಾಗಿಯೇ ಇದೆ ಎಂದು ಅದು ಅಭಿಪ್ರಾಯಿಸಿದೆ.
ಸಂಜಯ್ ದತ್ತ್ ಸೇರಿದಂತೆ ಮುಂಬೈ ಸ್ಫೋಟ ಪ್ರಕರಣದಲ್ಲಿ ಜಾಮೀನು ಬಿಡುಗಡೆ ಪಡೆದಿರುವ ಎಲ್ಲ ಆರೋಪಿಗಳು ನಾಲ್ಕು ವಾರಗಳೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕಾಗುತ್ತದೆ. ಏತನ್ಮಧ್ಯೆ ಸುಪ್ರೀಂಕೋರ್ಟ್‌ನ ಇಂದಿನ ತೀರ್ಪನ್ನು ಪ್ರಶ್ನಿಸಿ ಸಂಜಯ್‌ದತ್ತ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.1993ರ ಮುಂಬೈ ಸರಣಿ ಸ್ಫೋಟ ಘಟನೆಯ ಸಂದರ್ಭದಲ್ಲಿ  9 ಎಂಎಂ ಪಿಸ್ತೂಲ್ ಹಾಗೂ ಒಂದು ಎಕೆ-೫೬ ರೈಫಲನ್ನು ಅಕ್ರಮವಾಗಿ ಹೊಂದಿದ್ದ ಆರೋಪದಲ್ಲಿ ಸಂಜಯ್‌ದತ್ತ್‌ಗೆ ಟಾಡಾ ನ್ಯಾಯಾಲಯವು 1997ರಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಆದರೆ ಭಯೋತ್ಪಾದನೆಯ ಸಂಚಿನಲ್ಲಿ ಪಾಲ್ಗೊಂಡ ಆರೋಪದಿಂದ ಅವರನ್ನು ದೋಷಮುಕ್ತಗೊಳಿಸಿತ್ತು.ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 1997ರಿಂದ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ ಬಳಿಕ ಜಾಮೀನು ಬಿಡುಗಡೆಗೊಂಡಿದ್ದರು
ಕೃಪೆ ವಾ.ಭಾರತಿ 

No comments:

Post a Comment