Friday, March 1, 2013

ಕೊಲಂಬೋ ಜೈಲಿನಲ್ಲಿದ್ದ ಬಂಗ್ರ ಮಂಜೇಶ್ವರ ನಿವಾಸಿ 14 ವರ್ಷಗಳ ಬಳಿಕ ತಿರುವನಂತಪುರಕ್ಕೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಸುದೀರ್ಘವಾದ 14 ವರ್ಷ ಶ್ರೀಲಂಕಾದ ಕೊಲಂಬೋ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿದ ಮಂಜೇಶ್ವರ ನಿವಾಸಿಯೊಬ್ಬರನ್ನು ಇದೀಗ  ತಿರುವನಂತಪುರಕ್ಕೆ ಕರೆತರಲಾಗಿದ್ದು ಬಳಿಕ ಅವರನ್ನು ತಿರುವನಂತಪುರದ ಪೂಜಾಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.
ಬಂಗ್ರ ಮಂಜೇಶ್ವರ ನಿವಾಸಿ ಇಸ್ಮಾಯಿಲ್(52) ಎಂಬವರಾಗಿದ್ದಾರೆ ೧೪ ವರ್ಷ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿ ಇದೀಗ ತಿರುವನಂತಪುರ ತಲುಪಿದವರು.ಮಂಜೇಶ್ವರದಲ್ಲಿ ಚಿಲ್ಲರೆ ಜವುಳಿ ವ್ಯಾಪಾರಿಯಾಗಿದ್ದ ಇಸ್ಮಾಯಿಲ್ ರವರು ಜವುಳಿ   1992 ರಲ್ಲಿ ಚೆನ್ನೈಗೆ ತೆರಳಿದ್ದಾಗ ಅಲ್ಲಿಂದ ಏಜಂಟನೋರ್ವ  ಜವುಳಿ ವ್ಯಾಪಾರದಲ್ಲಿ ಇನ್ನಷ್ಟು ಹಣಗಳಿಸುವ ಆಮಿಷವೊಡ್ಡಿ ಇವರನ್ನು ವ್ಯಾಪಾರದ ನಿಮಿತ್ತ ಶ್ರೀಲಂಕಾಗೆ ಕಲುಹಿಸಿಕೊಟ್ಟಿದ್ದರು.ಕಳುಹಿಸುವಾಗ ಜವುಳಿ ಕಟ್ಟದ ಮದ್ಯೆ ಮಾದಕ ದ್ರವ್ಯಗಳನ್ನು ಅಡಗಿಸಿಟ್ಟಿದ್ದನು.ಅದನ್ನು ತಿಳಿಯದ ಇಸ್ಮಾಯಿಲ್ ಮಾಲು ಸಹಿತ ಶ್ರೀಲಂಕಾದ ಕೊಲಂಬೊ ತಲುಪಿದಾಗ ತಪಾಸಣೆ ವೇಳೆ ಅಲ್ಲಿಯ ಅಧಿಕಾರಿಗಳು ಇಸ್ಮಾಯಿಲ್ ರನ್ನು ಮಾಲಿನ ಸಹಿತ ಬಂಧಿಸಿ ವಿಚಾರಣೆಗೊಳಪಡಿಸಲಾಯಿತು.ಏನೂ ಅರಿವಿಲ್ಲದ ಇಸ್ಮಾಯಿಲ್ ಗೆ  ಏಜಂಟರು ಮಾಡಿದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂತು ನ್ಯಾಯಾಲಯದ ಆದೇಶದಂತೆ ಅವರನ್ನು ಅಲ್ಲಿನ ಕಾರಾಗೃಹದಲ್ಲಿ ಇರಿಸಲಾಯಿತು.
ಕಳೆದ ೧೪ ವರ್ಷಗಳಲ್ಲಿ ಇಸ್ಮಾಯಿಲ್ ರವರು ಕೊಲಂಬೋದ ಜೈಲಿನಲ್ಲಿ ಸೆರೆಮನೆವಾಸದಲ್ಲಿರುವಾಗ ತಿಂಗಳ ಮೊದಲು ದೂರವಾಣಿ ಮೂಲಕ ಕುಟುಂಬವನ್ನು ಸಂಪರ್ಕಿಸಿದ್ದರು.ಮಾತ್ರವಲ್ಲದೆ ನಿರಪರಾಧಿಯಾದ ಇಸ್ಮಾಯಿಲ್ ರವರ ಬಿಡುಗಡೆಗೆ ಆಗ್ರಹಿಸಿ ಅವರ ಪತ್ನಿ ಜಮೀಲಾ ಹಿಂದೆ ರಾಷ್ಟ್ರಪತಿ,ಪ್ರಧಾನಮಂತ್ರಿ,ಕೇಂದ್ರ ಸಚಿವರಾದ ಆಹ್ಮದ್,ಕಾಸರಗೋಡು ಸಂಸದ ಪಿ.ಕರುಣಾಕರನ್,.ಟಿ ಮಹಮ್ಮದ್ ಬಷೀರ್ ಮೊದಲಾದರವರಿಗೆ ಮನವಿಯನ್ನು ಸಲ್ಲಿಸಿದ್ದರು.
ಇದೀಗ ಭಾರತ ಹಾಗು ಶ್ರೀಲಂಕಾ ಸರಕಾರ ಇತ್ತೀಚೆಗೆ ಮಾಡಿಕೊಂಡ ಒಡಂಬಡಿಕೆಯಂತೆ ಶ್ರಿಲಂಕಾ ಜೈಲಿನಲ್ಲಿ ಬಂಧಿಯಾಗಿ ಕಳೆಯುತ್ತಿರುವ ಭಾರತೀಯರನ್ನು ಭಾರತಕ್ಕೆ ಕಳುಹಿಸಿಕೊಟ್ಟೂ ಅವರ ಮುಂದಿನ ಶಿಕ್ಷೆಯನ್ನು ಭಾರತದ ಜೈಲುಗಳಲ್ಲಿ ಕಳೆಯಬಹುದೆಂಬ ಒಡಂಬಡಿಕೆಯನ್ನು ಮಾಡಲಾಗಿತ್ತು.ಇದೀಗ ಒಡಂಬಡಿಕೆಯಂತೆ ಇಸ್ಮಾಯಿಲ್ ಸೇರಿದಂತೆ ಇತರ 6ಮಂದಿ ಕೇರಳಿಯರನ್ನು ತಿರುವನಂತಪುರಕ್ಕೆ ಕರೆತರಲಾಗಿದೆ.ಇನ್ನು ಕೆಲವೇ ದಿನಗಳಲ್ಲಿ ಇಸ್ಮಾಯಿಲ್ ರವರ ಶಿಕ್ಷಾಅವಧಿ ಪೂರ್ಣಗೊಳ್ಳಲಿದ್ದು ಬಗ್ಗೆ ಶ್ರೀಲಂಕಾದಿಂದ ಸಂಭಂಧಪಟ್ಟ ದಾಖಲೆಗಳು ಕೈ ಸೇರಿದ ಬಳಿಕ 2 ವಾರದ ಬಳಿಕ ಇಸ್ಮಾಯಿಲ್ ತಿರುವನಂತಪುರದ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ತಲುಪುವ ನಿರೀಕ್ಷೆ ಇದೆ.
ಇಸ್ಮಾಯಿಲ್ ಪುತ್ರ ಸಮೀರ್ ಹಾಗು ಸಂಭಂಧಿಕರು ನಿನ್ನೆ ತಿರುವನಂತಪುರಕ್ಕೆ ಹೋಗಿ ಅವರ ಯೋಗಕ್ಷೇಮ ವಿಚಾರಿಸಿ ಬಂದಿರುತ್ತಾರೆ.  

No comments:

Post a Comment