Saturday, March 2, 2013

ಕಾಸರಗೋಡು: 12ನೆ ದಿನಕ್ಕೆ ಕಾಲಿಟ್ಟ ಎಂಡೋ ಸಂತ್ರಸ್ತರ ಹೋರಾಟ: ಸಂಧಾನ ವಿಫಲ


ಕಾಸರಗೋಡು: 12ನೆ ದಿನಕ್ಕೆ ಕಾಲಿಟ್ಟ ಎಂಡೋ ಸಂತ್ರಸ್ತರ ಹೋರಾಟ: ಸಂಧಾನ ವಿಫಲ

ಕಾಸರಗೋಡು,: ಎಂಡೋಸ ಲ್ಫಾನ್ ಸಂತ್ರಸ್ತರ ಜನಪರ ಒಕ್ಕೂಟದ ನೇತೃತ್ವದಲ್ಲಿ ನಗರದ ಹೊಸ ಬಸ್ಸು ನಿಲ್ದಾಣ  ಪರಿಸರದ ಸಹಿ ವೃಕ್ಷದಡಿ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ 12ನೆ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಮುಖ್ಯಮಂತ್ರಿ ಉಮ್ಮನ್ ಚಾಂಡಿಯ ವರ ನಿರ್ದೇಶನದಂತೆ ಶಾಸಕ ಎನ್.ಎ. ನೆಲ್ಲಿ ಕುನ್ನು ನೇತೃತ್ವದಲ್ಲಿ ಇಂದು ಬೆಳಗ್ಗೆ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರೂ, ಪರಿಹಾರ ಕಾಣದೆ ಮಾತುಕತೆ ವಿಫಲವಾಯಿತು. ಶಾಸಕ ಎನ್.ಎ.ನೆಲ್ಲಿ ಕುನ್ನು ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್, ಉಪಜಿಲ್ಲಾಧಿಕಾರಿ ಸುಧೀರ್ ಬಾಬು ವೊದಲಾದವರು ಹೋರಾಟದ ಸ್ಥಳಕ್ಕೆ ಆಗಮಿಸಿದ್ದರು. ಹೋರಾಟಗಾರರು ಮುಂದಿಟ್ಟಿರುವ ಬೇಡಿಕೆಗಳನ್ನು ನ್ಯಾಯಯುತವಾಗಿ ಪರಿಹರಿಸಲಾಗುವುದು ಎಂದು ಶಾಸಕರು  ಭರವಸೆ ನೀಡಿದರು. ಎಂಡೋ ಸಂತ್ರಸ್ತರ ಸಾಲ ಮನ್ನಾ ಮಾಡುವ ಕುರಿತು ಸಮಿತಿಯೊಂದನ್ನು ನೇಮಿಸಲಾಗುವುದು.
ಮಾನವ ಹಕ್ಕು ಆಯೋಗ ನೀಡಿದ ಸಲಹೆಯಂತೆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ತಿಳಿಸಿರುವುದಾಗಿ ಹೇಳಿದ ಶಾಸಕರು, ಈ ಕುರಿತು ಶೀಘ್ರವೇ ಸಭೆ ಯೊಂದನ್ನು ಕರೆಯುವುದಾಗಿ ಭರವಸೆ ನೀಡಿದರು.
ಆದರೆ ಶಾಶ್ವತ ಪರಿಹಾರ ಕುರಿತು ಮುಖ್ಯಮಂತ್ರಿ ಜೊತೆ ನಡೆಸಿದ ಬಳಿಕವಷ್ಟೇ ಮುಷ್ಕರದಿಂದ ಹಿಂದೆ ಸರಿಯುವುದು ಎಂದು ಹೋರಾಟದ ನಾಯಕರು ಶಾಸಕರಿಗೆ ಮನವರಿಕೆ ಮಾಡಿದರು. ಇದರಿಂದಾಗಿ ಮಾತುಕತೆ ವಿಫಲವಾಯಿತು. ಮುಷ್ಕರವನ್ನು ಮುಂದುವರಿಸಲು ಒಕ್ಕೂಟವು ತೀರ್ಮಾನಿಸಿದೆ.
ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಮಾಜಿ ಸಚಿವ ಬಿನೋಯ್ ವಿಶ್ವಂ ಇಂದು ಬೆಳಗ್ಗೆ ಭೇಟಿ ನೀಡಿದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಮುಖ್ಯ ಮಂತ್ರಿ ಇದನ್ನು ಗಂಭೀರವಾಗಿ ಪರಿಗ ಣಿಸದೇ ತಮ್ಮ ದೂತರನ್ನು ಕಳುಹಿಸಿ ಹೋರಾಟದ ಹಾದಿ ತಪ್ಪಿಸಲೆತ್ನಿಸುತ್ತಿ ದ್ದಾರೆ ಎಂದು ಆರೋಪಿಸಿದರು.
ಸಂತ್ರಸ್ತರ ಎಲ್ಲಾ ಬೇಡಿಕೆಗಳನ್ನು ಪರಿಹರಿಸಲು ಸರಕಾರ ಮುಂದಾಗಬೇಕೆಂದು ಅವರು ಕರೆ ನೀಡಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಪಿ.ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿ ಕಾಪಿಲ್, ಜಿಪಂ ಉಪಾಧ್ಯಕ್ಷ ಕೆ.ಎಸ್.ಕುರ್ಯಾ ಕೋಸ್. ವಿ.ರಾಜನ್, ರಾಧಾಕೃಷ್ಣನ್ ಪೆರುಂಬಳ, ನ್ಯಾಯವಾದಿ ಸುರೇಶ್ ಬಾಬು, ಬಿಜು ಉಣ್ಣಿತ್ತಾನ್ ವೊದಲಾ ದವರು ಉಪಸ್ಥಿತರಿದ್ದರು

No comments:

Post a Comment