Friday, March 8, 2013

ವ್ಯಾಪರಕ್ಕೆಂದು ಆಗಮಿಸಿದ ಆಂಧ್ರ ನಿವಾಸಿಗಳ 1.10 ಲಕ್ಷ ರೂ ಕಳವು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮನೆ ಮನೆಗಳಿಗೆ ಸಾಮಾಗ್ರಿಗಳನ್ನು ವಿತರಿಸಲು ತಲುಪಿದ ಆಂಧ್ರ ನಿವಾಸಿಗಳಿಂದ ಹಣವನ್ನು ಕಳವು ಗೈದ ಘಟನೆ ಇಲ್ಲಿಗೆ ಸಮೀಪದ ಉಪ್ಪಳದಲ್ಲಿ ನಡೆದಿದೆ.
ಆಂಧ್ರ ಪ್ರದೇಶ ನಿವಾಸಿಗಳಾದ ಮೂವರ ತಂಡ ಮನೆ ಮನೆಗಳಿಗೆ ತಲುಪಿ ಸಾಮಾಗ್ರಿಗಳನ್ನು ಮಾರಾಟ ಗೈಯುತಿತ್ತು.ನಿನೆ ರಾತ್ರಿ  ತಂಡ ವ್ಯಾಪಾರ ಮುಗಿಸಿ ಉಪ್ಪಳಪೇಟೆಯಲ್ಲಿರುವ ಮರದಡಿಯಲ್ಲಿ ರಾತ್ರಿ ನಿದ್ರಿಸಿತೆನ್ನಲಾಗಿದೆ. ಸಮಯದಲ್ಲಿ ಇವರ ಕೈಯಲ್ಲಿದ್ದ 1.10 ಲಕ್ಷ ರೂ ಕಳವಾಗಿದೆ.ರಾತ್ರಿ ಸಮಯಗಳಲ್ಲಿ ಮರದಡಿ ಅಥವಾಅಂಗಡಿ ವರಾಂಡಗಳಲ್ಲಿ ನಿದ್ರಿಸುತ್ತಿರುವ  ತಂಡ ನಿನ್ನೆ ಹಣವನ್ನು ಒಬ್ಬನ ಸೊಂಟಕ್ಕೆ ಕಟ್ಟಿ ನಿದ್ರಿಸಿತೆನ್ನಲಾಗಿದ್ದು ಇಂದು ಬೆಳಿಗ್ಗೆ ಎಚ್ಚೆತ್ತಾಗ ಹಣ ಕಳವಿಗೀಡಾಗಿರುವುದುತಿಳಿದು ಬಂದಿದೆ.ಇದೇ ಪರಿಸರದಲ್ಲಿ ಅಂಗದಿಯೊಂದರ ನಿರ್ಮಾಣ ಕೆಲಸ ಕೂಡಾ ನಡೆಯುತಿದ್ದು ಇಲ್ಲಿಂದ ಕೂಡಾ ಮುಂಬೈ ನಿವಾಸಿಗಳ ನಗದು ಹಾಗು ಮೊಬೈಲ್ಕಳವಿಗೀಡಾದ ಬಗ್ಗೆ ದೂರು ದಾಖಲಾಗಿದೆ.

No comments:

Post a Comment