Saturday, March 23, 2013

ಅಮೆರಿಕಕ್ಕೆ 1 ಕೋಟಿ ಭಾರತೀಯರ ವಲಸೆ’ಮಾರ್ಚ್ -23-2013

ವಾಷಿಂಗ್ಟನ್, ಮಾ.22: ಭಾರತದಿಂದ  ಒಂದು ಕೋಟಿ ಮಂದಿ ಒಳಗೊಂಡಂತೆ ವಿಶ್ವಾದ್ಯಂತದಿಂದ ಸುಮಾರು 100 ಕೋಟಿಗೂ ಅಧಿಕ  ಜನರು ಖಾಯಂ ಆಗಿ ನೆಲೆಸಲು ಅಮೆರಿಕಕ್ಕೆ ತೆರಳಲು ಬಯಸಿದ್ದಾರೆ ಎಂದು ಇತ್ತೀಚಿನ ಜನಮತ ಸಂಗ್ರಹವೊಂದು ತಿಳಿಸಿದೆ. ಅಮೆರಿಕವು ಅತ್ಯಂತ ಜನಪ್ರಿಯ ಜಾಗತಿಕ ತಾಣಗಳಲ್ಲಿ ಒಂದಾಗಿ ಉಳಿದಿರುವುದು ಇದಕ್ಕೆ ಕಾರಣವೆನ್ನಲಾಗಿದೆ.ಅಮೆರಿಕಕ್ಕೆ ತೆರಳಲು ಬಯಸುವ ವಲಸೆಗಾರರಲ್ಲಿ ಹೆಚ್ಚಿನವರು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ ಎಂದು ‘ಗ್ಯಾಲಪ್’ ನಡೆಸಿರುವ ಸಮೀಕ್ಷೆ ತಿಳಿಸಿದೆ.ಚೀನಾದಿಂದ ಸುಮಾರು 19 ದಶಲಕ್ಷ ಮಂದಿ, ನೈಜೀರಿಯದಿಂದ 13 ದಶಲಕ್ಷ  ಜನರು, ಭಾರತದಿಂದ 10 ದಶಲಕ್ಷ  ಜನರು ಹಾಗೂ ಬ್ರೆಝಿಲ್ ಮತ್ತು ಬಾಂಗ್ಲಾದೇಶದಿಂದ ತಲಾ 60 ಲಕ್ಷ ಮಂದಿ ಅಮೆರಿಕಕ್ಕೆ ವಲಸೆ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.ಖಾಯಂ ಆಗಿ ಅಮೆರಿಕದಲ್ಲಿ ನೆಲೆಸಲು ತೆರಳುವವರಲ್ಲಿ ಪಾಕಿಸ್ತಾನ ಹಾಗೂ ಇರಾನ್ ರಾಷ್ಟ್ರಗಳ ಜನರ ಸಂಖ್ಯೆ ಬಹಳ ಕಡಿಮೆಯಿರುವುದಾಗಿಯೂ ವರದಿ ತಿಳಿಸಿದೆ.
ಪಾಕಿಸ್ತಾನದವರಲ್ಲಿ ಹೆಚ್ಚಿನವರು ಸೌದಿ ಅರೇಬಿಯ ಹಾಗೂ ಬ್ರಿಟನ್‌ಗಳಲ್ಲಿ ನೆಲೆಸಲು ಬಯಸಿದರೆ, ಇರಾನ್‌ನ ವಲಸಿಗರಲ್ಲಿ ಹೆಚ್ಚಿನವರು  ಜೋರ್ಡಾನ್ ಹಾಗೂ ಲೆಬನಾನ್‌ಗೆ ತೆರಳಲು ಆದ್ಯತೆ ನೀಡುತ್ತಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.ಸಮೀಕ್ಷೆಯ ಪ್ರಕಾರ ಲೈಬೀರಿಯದ ಶೇಕಡ 37 ಮಂದಿ ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಲು ಬಯಸಿರುವುದಾಗಿ ವರದಿ ಹೇಳಿದೆ.ವಿಶ್ವದಾದ್ಯಂತದ ಹಿರಿಯರಲ್ಲಿ (ಸುಮಾರು 630 ದಶಲಕ್ಷ ಜನರು) ಶೇಕಡ 13ರಷ್ಟು ಮಂದಿ ತಮ್ಮ ದೇಶವನ್ನು ತೊರೆದು ಇನ್ನೊಂದು ರಾಷ್ಟ್ರಕ್ಕೆ ಖಾಯಂ ಆಗಿ ಸ್ಥಳಾಂತರಗೊಳ್ಳಲು ಬಯಸುತ್ತಿದ್ದಾರೆ ಎಂದೂ ಸಮೀಕ್ಷೆ ತಿಳಿಸಿದೆ.
ಕೃಪೆ:ವಾ.ಭಾರತಿ

No comments:

Post a Comment