Friday, March 15, 2013

ಪೆಟ್ರೋಲ್ 1 ರೂ. ಅಗ್ಗ ಡೀಸೆಲ್ 40 ಪೈಸೆ ದುಬಾರಿ ಸಾಧ್ಯತೆಹೊಸದಿಲ್ಲಿ: ಪೆಟ್ರೋಲ್ ಬೆಲೆಯ ನಿರಂತರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರನ್ನು ತುಸು ನೆಮ್ಮದಿಗೊಳಿಸುವ ವಾರ್ತೆಯೊಂದು ಇಂದು ಹೊರಬಿದ್ದಿದೆ. ಅದೇನೆಂದರೆ ಪೆಟ್ರೋಲ್ ಬೆಲೆಯಲ್ಲಿ ಒಂದು ರೂ. ಇಳಿಕೆ ಹಾಗೂ ಡೀಸೆಲ್ ಬೆಲೆಯಲ್ಲಿ 40ರಿಂದ 50 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕುಸಿದಿರುವ ಕಾರಣ ಭಾರತದಲ್ಲೂ ಕೂಡ ಅದರ ಬೆಲೆಯನ್ನು ಇಳಿಸಿ ಗ್ರಾಹಕರ ಹೊರೆಯನ್ನು ಕಡಿಮೆಗೊಳಿಸಲು ತೈಲ ಸಚಿವಾಲಯವು ಚಿಂತನೆ ನಡೆಸಿದೆ. ಆದರೆ  ಡೀಸೆಲ್ ಬೆಲೆಯಲ್ಲಿ ತೈಲ ಕಂಪೆನಿ ಗಳಿಗಾಗುವ ನಷ್ಟವನ್ನು ತುಂಬಲು ಅದರ ಬೆಲೆಯಲ್ಲಿ ಹೆಚ್ಚಳದ ಅನಿವಾರ್ಯತೆಗೆ ಅದು ಮನ್ನಣೆ ನೀಡಿದೆ.
ಮೂಲಗಳ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್‌ನ ಪುನರ್‌ಪರಿಶೀಲನಾ ಬೆಲೆಯು ನಾಳೆಯಿಂದಲೇ ಘೋಷಣೆಯಾಗಲಿದೆ. ಫೆಬ್ರವರಿ ತಿಂಗಳ ಬಳಿಕ ಪೆಟ್ರೋಲ್ ಬೆಲೆಯನ್ನು ಎರಡು ಸಲ ಏರಿಸಲಾಗಿತ್ತು. ತದನಂತರದ ಬೆಲೆ ಇಳಿಕೆಯು ಇದೇ ಪ್ರಥಮದ್ದಾಗಿದೆ.
ಫೆಬ್ರವರಿ 16ರಂದು ಪೆಟ್ರೋಲ್ ಪ್ರತಿ ಲೀಟರ್ ಬೆಲೆಯನ್ನು 1.5 ರೂ.ಗೆ ಏರಿಸಲಾಗಿತ್ತು. ಬಳಿಕ ಮಾರ್ಚ್ 2 ರಂದು ಪುನಃ ಪ್ರತಿ ಲೀಟರಿಗೆ 1.4 ರೂ. ಹೆಚ್ಚಳ ಮಾಡಲಾಯಿತು. ಎರಡೂ ಬಾರಿಯ ಹೆಚ್ಚಳದಲ್ಲಿ ವ್ಯಾಟ್‌ನ್ನು ಒಳಪಡಿಸಿರಲಿಲ್ಲ.ರಾಷ್ಟ್ರ ರಾಜಧಾನಿಯಲ್ಲಿ ಪ್ರಸಕ್ತ ಪೆಟ್ರೋಲ್ ಬೆಲೆಯು ಲೀಟರಿಗೆ 70.74 ರೂ. ಆಗಿದ್ದು ಡೀಸೆಲ್ ಬೆಲೆಯು ಪ್ರತಿ ಲೀಟರಿಗೆ 48.16ರೂ. ಆಗಿದೆ. 

No comments:

Post a Comment