Tuesday, February 12, 2013

ಮಸೀದಿಯ ನಾಮ ಫಲಕಕ್ಕೆ ಹಾನಿ:ಮಚ್ಚಂಪ್ಪಾಡಿ ಉದ್ರಿಕ್ತ:Flash Newsಮಂಜೇಶ್ವರ:ಇಲ್ಲಿಗೆ ಸಮೀಪದ ಮಚ್ಚಂಪ್ಪಾಡಿ ರಸ್ತೆಯಲ್ಲಿ ಇರಿಸಲಾಗಿದ್ದ ಮಸೀದಿಯೊಂದರ ನಾಮಫಲಕಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿದ್ದು ಇದರಿಂದ ಮಚ್ಚಂಪ್ಪಾಡಿಯಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿರುವುದಾಗಿ ತಿಳಿದು ಬಂದಿದೆ.
ಇಂದು ಬೆಳಿಗ್ಗೆ ನೋಡುವಾಗ ಬೋರ್ಡ್ ಗೆ ಬಣ್ಣ ದ ಕಲರನ್ನು ಚೆಲ್ಲಿ ಬೋರ್ಡ್ ನ್ನು ಹಾನಿಗೊಳಿಸಲಾಗಿದೆ ಎಂದು ದೂರಲಾಗಿದೆ. ಇದಕ್ಕಿಂತ ಒಂದು ತಿಂಗಳು ಮೊದಲು ಇದರ ಹತ್ತಿರವಿರುವ ಬಸ್ಸು ತಂಗುದಾನವನ್ನು ಕೂಡಾ ಸಮಾಜ ಘಾತಕ ಶಕ್ತಿಗಳು ಹಾನಿಗೊಳಿಸಿದ್ದವು.ಇದೀಗ ಸ್ಥಳಕ್ಕೆ ಕುಂಬಳೆ ಸರ್ಕಲ್ ಟಿ.ಪಿ.ರಂಜಿತ್ ಹಾಗು ಮಂಜೇಶ್ವರ ಠಾಣಾಧಿಕಾರಿ ಬಿಜು ಲಾಲ್ ತಂಡ ತಲುಪಿದೆ.

No comments:

Post a Comment