Saturday, February 23, 2013

ವಿಜಿಲೆನ್ಸ್ ವರದಿ: ಮರಳು ಸಾಗಾಟದಲ್ಲಿ ಅವ್ಯವಹಾರ:ಸುಪರ್ ವೈಸರುಗಳ ವಜಾ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅಕ್ರಮ ಮರಳು ಸಾಗಾಟದಲ್ಲಿ ಅವ್ಯವಹಾರದ ಬಗ್ಗೆ ಲಭಿಸಿದ ದೂರಿನ ಆಧಾರದಲ್ಲಿ ವಿಜಲೆನ್ಸಿ ನಡೆಸಿದ ತನಿಖಾ ವರದಿಯ ಆಧಾರದಲ್ಲಿ ಎರಡು ಸುಪರ್ ವೈಸರ್ ಗಳನ್ನು ಸರಕಾರ ವಜಾ ಗೊಳಿಸಿ ಅವರಿಂದ 1.15 ಕೋಟಿ ರೂ ದಂಡ ವಸೂಲಿ ಮಾಡುವಂತೆ ಆದೇಶ ನೀಡಿದ ಬಗ್ಗೆ ಮೀಂಜ ಗ್ರಾ. ಪಂ. ವ್ಯಾಪ್ತಿಯಿಂದ ವರದಿಯಾಗಿದೆ.
ಮೀಂಜ ಪಂಚಾಯತಿನ ಮರಳು ತೆಗೆಯುವ ಮೀಂಜ ಮನ್ನಿಪ್ಪಾಡಿ ಕಡವುಗಳಲ್ಲಿನ ಸುಪರ್ ವೈಸರ್ ಪೋಕರ್ ಹಾಗು ಗುಡ್ರಿಯಾ ಕಡವಿನ ಸುಪರ್ ವೈಸರ್ ಶೈಲೇಶ್ ಆಳ್ವಾರನ್ನು ಆರೋಪದಂತೆ ಸುಪರ್ ವೈಸರ್ ಸ್ಥಾನಗಳಿಂದ ವಜಾಗೊಳಿಸಲಾಗಿದೆ.ಸುಪರ್ ವೈಸರ್ ಪೋಕರ್ ರಿಂದ 72,೦5,443 ರೂಪಾಯಿ ಹಾಗು ಶೈಲೇಶ್ ರಿಂದ 43,೦2,240 ರೂ ದಂಡ ವಸೂಲಿ ಮಾಡುವಂತೆಯೂ ಆದೇಶ ನೀಡಲಾಗಿದೆ. ಎರಡು ಕಡವುಗಳಿಂದ ದಾಖಲೆ ಪತ್ರಗಳಿಲ್ಲದೆ ಹಾಗು ಪಾಸ್ ಗಳನ್ನು ದುರುಪಯೋಗ ಪಡಿಸಿ   ಮರಳು ಸಾಗಾಟವಾಗುತ್ತಿದೆ ಎಂಬ ದೂರುಗಳು ಸಂಭಂಧಪಟ್ಟ ಇಲಾಖೆಗೆ ತಲುಪಿದ ಹಿನ್ನೆಲೆಯಲ್ಲಿ ಹಾಗು ಇವರ ವಿರುದ್ದ ತಪಾಸಣೆ ವೇಳೆ ಮಾತ್ರ ಪಾಸ್ ಗಳನ್ನು ನೀಡಲಾಗುತ್ತಿದೆ ಎಂಬ ದೂರುಗಳು ಅದೇ ರೀತಿ ಇನ್ನೂ ಹಲವು ಆರೋಪಗಳು ಸಂಭಂಧ ಪಟ್ಟ ಇಲಾಖೆಗೆ ತಲುಪಿದ ಹಿನ್ನೆಲೆಯಲ್ಲಿ ಸರಕಾರ ಕ್ರಮ ಕೈಗೊಂಡಿದೆ.ಇಂತಹ ಕ್ರಮದಿಂದ ಜಿಲ್ಲೆಗಳ ಹಲವು ಕಡೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಅವ್ಯವಹಾರಗಳು ಹೊರಬರುವ ಸಾದ್ಯತೆ ಇದೆ ಎಂಬುದಾಗಿ ವಿಜಿಲೆನ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No comments:

Post a Comment