Monday, February 11, 2013

ಲೀಗ್ ಆಡಳಿತವಿರುವ ಮಂಜೇಶ್ವರ ಗ್ರಾ.ಪಂ.ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಪದವಿ ಬಿ.ಜೆ.ಪಿ ಗೆ



ಮಂಜೇಶ್ವರ:ಮುಸ್ಲಿಂ ಲೀಗ್ ಅಡಳಿತವಿರುವ ಮಂಜೇಶ್ವರ ಗ್ರಾ.ಪಂ ಕ್ಷೇಮ ಕಾರ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ ಪದವಿಯು ನಾಮ ಪತ್ರಿಕೆ ಸಲ್ಲಿಕೆಯ ವಿಳಂಭದಿಂದ ಬಿಜೆಪಿ ಕೈವಶವಾಗಿದೆ ಇದರಿಂದಾಗಿ ಮುಸ್ಲಿಂ ಲೀಗ್ ಸದಸ್ಯರಲ್ಲಿ ಕರಾಳ ಛಾಯೆ ಮೂಡಿದೆ.
ಕಳೆದ ಜನವರಿ 1 ರಂದು ನಡೆದ ಚುನಾವಣೆಯಲ್ಲಿ ನಾಮ ಪತ್ರ ಸಲ್ಲಿಸಬೇಕಾದ ಸಮಯದ ಬಳಿಕ ಮುಸ್ಲಿಂ ಲೀಗ್,ಎಡರಂಗ ಅಭ್ಯರ್ಥಿಗಳ ನಾಮ ಪತ್ರ ಸ್ವೀಕರಿಸಿದ ರಿಟರ್ನಿಂಗ್ ಅಧಿಕಾರಿಯ ಕ್ರಮ ವಿವಾದಕ್ಕೀಡಾಗಿದ್ದು ಹಿನ್ನೆಲೆಯಲ್ಲಿ ನಡೆದ ವಾಗ್ವಾದದ ಬಳಿಕ ಚುನಾವಣೆ ಮುಂದೂಡಲಾಗಿತ್ತು. ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.ಇದನ್ನು ಪರಿಶೀಲಿಸಿದ ಚುನಾವಣಾ ಆಯೋಗ ಬಿಜೆಪಿ ಪವನ್ ಕುಮಾರ್ ರವರನ್ನು ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದೆ.

No comments:

Post a Comment