Saturday, February 2, 2013

ಬಸ್ ಕ್ಲೀನರ್ ಮೃತ ದೇಹ ಬಾವಿಯಲ್ಲಿ ಪತ್ತೆ



ಮಂಜೇಶ್ವರ:ಬಸ್ ಕ್ಲೀನರ್ ರೊಬ್ಬರ ಮೃತ ದೇಹ ನೆರೆ ಮನೆಯ ಬಾವಿಯಲ್ಲಿ ಪತ್ತೆಯಾದ ಘಟನೆ ಇಲ್ಲಿಗೆ ಸಮೀಪದ ಹೊಸಬೆಟ್ಟುನಿಂದ ವರದಿಯಾಗಿದೆ.
ವೃತ್ತಿಯಲ್ಲಿ ಬಸ್ ಕ್ಲೀನರ್ ಆಗಿರುವ ಹೊಸಬೆಟ್ಟು ಪೊಲೀಸ್ ಕ್ವಾರ್ಟರ್ಸ್ ಬಳಿಯ ನಿವಾಸಿ ದಿನಕರ ನಾಯಕ್(೪೬) ಎಂಬವರಾಗಿದ್ದಾರೆ ಮೃತಪಟ್ಟ ವ್ಯಕ್ತಿ.ಕಳೆದ ಹಲವಾರು ವರ್ಷಗಳಿಂದ ತಲಪಾಡಿ-ಆನೆಕಲ್ಲು ರೂಟ್ ಬಸ್ಸುಗಳಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತಿದ್ದ ದಿನಕರ್ ನಾಯಕ್ ಗುರುವಾರ ಸಂಜೆ ಮನೆಯಿಂದ ಹೊರಟವರು ನಂತ್ರ ಹಿಂತಿರುಗಿ ಮನೆಗೆ ಬಂದಿರಲಿಲ್ಲ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.ಶನಿವಾರ ಬೆಳಿಗ್ಗೆ ನೆರೆ ಮನೆ ನಿವಾಸಿ ರಾಮಕೃಷ್ಣ ಭಟ್ ರವರ ಮನೆ ಮಂದಿ ನೀರು ಸೇದಲು ಬಾವಿಯ ಸಮೀಪಕ್ಕೆ ಬಂದಾಗ ದಿನಕರ ನಾಯ್ಕ್ ರವರ ಮೃತ ದೇಹ ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

No comments:

Post a Comment