Wednesday, February 20, 2013

ಲಿಂಗ ಅಸಮಾನತೆಗೆ ಪಿತೃ ಪ್ರಧಾನ ಮನಸ್ಥಿತಿ ಕಾರಣ: ಆಮಿರ್ ಖಾನ್



ಹೊಸದಿಲ್ಲಿ: ದೇಶದಲ್ಲಿ ಮಹಿಳೆಯರಿಗೆ ಸಮಾಜದಲ್ಲಿ ಕೆಳ ಹಂತದ ಸ್ಥಾನಮಾನ ನೀಡಿರುವುದಕ್ಕೆ ಜನರಲ್ಲಿನ ಪಿತೃ ಪ್ರಧಾನ ಮನಸ್ಥಿತಿ ಕಾರಣವಾಗಿದೆ ಎಂದು ಬಾಲಿವುಡ್ ಚಿತ್ರ ನಟ ಆಮಿರ್‌ಖಾನ್ ದೂಷಿಸಿದ್ದಾರೆ.
 
ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಜತೆ ಇಲ್ಲಿನ ಮಹಿಳಾ ಕಾಲೇಜಿನಲ್ಲಿ ನಡೆದ ಲಿಂಗ ಅಸಮಾನತೆ ಕುರಿತ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, ಸಮಾಜದಲ್ಲಿಂದು ಮಹಿಳೆಯರಿಗೆ ಕಳ ಹಂತದ ಸ್ಥಾನಮಾನವಿದೆ ಮತ್ತು ತಮ್ಮ ಶಿಕ್ಷಣವನ್ನು ಉಪಯೋಗಿಸಿಕೊಂಡು ಅದನ್ನು ಹೇಗೆ ಉತ್ತಮಗೊಳಿಸಿಕೊಳ್ಳಬಹುದು ಎಂಬ ಪ್ರಶ್ನೆಗಳು ಯುವತಿಯರಿಂದಲೇ ಕೇಳಿ ಬರುತ್ತಿದೆ ಎಂದರು.
ಸಮಾಜದಲ್ಲಿ ಇಂದು ಮಹಿಳೆಯರಿಗಿರುವ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಪಿತೃ ಪ್ರಧಾನ ಮನಸ್ಥಿತಿಯ ವ್ಯವಸ್ಥೆಯನ್ನು ನಾವು ದೂಷಿಸಬೇಕಿದೆ. ಪುರುಷರು ಶ್ರೇಷ್ಠರು ಎಂಬ ಭಾವನೆಗಳೊಂದಿಗೆ ಹುಟ್ಟಿರುವ ನಾವು ಈ ಸಮಸ್ಯೆಯನ್ನು ಮುತ್ಸಧಿತನದೊಂದಿಗೆ ವ್ಯವಹರಿಸಬೇಕಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ನಾವು ಮೊದೆಲು ತಡೆಯಬೇಕಿದೆ ಎಂದರು.
ಪಿತೃ ಪ್ರಧಾನ ಮನಸ್ಥಿತಿಯ ವ್ಯವಸ್ಥೆಯೊಂದಿಗೆ ವ್ಯವಹರಿಸುವುದು ಸುಲಭದ ಮಾತಲ್ಲ. ನಿಧಾನವಾಗಿ ಆ ಮನಸ್ಥಿತಿಯನ್ನು ಹೋಗಲಾಡಿಸಬೇಕಿದೆ. ಚಲನಚಿತ್ರಗಳು, ಕಲೆ, ಸಂಸ್ಕೃತಿ ಹೀಗೆ ನಮಗೆ ಸಾಧ್ಯವಾಗುವ ಎಲ್ಲಾ ಮಾಧ್ಯಮಗಳ ಮೂಲಕ ನಾವು ಜನರ ಮನಸ್ಸನ್ನು ಗೆದ್ದು ಆ ಮೂಲಕ ಈ ಮನಸ್ಥಿತಿಯನ್ನು ಹೋಗಲಾಡಿಸಬೇಕಿದೆ ಎಂದರು.
ಸಮಾಜದಲ್ಲಿ ಎಲ್ಲಾ ಹಂತದಲ್ಲಿಯೂ ಭ್ರಷ್ಟಾಚಾರ ವಿರುವುದರಿಂದ ಭ್ರಷ್ಟರನ್ನು ಚುನಾಯಿಸುವುದನ್ನು ನಾವು ಮೊದಲು ತಡೆಯಬೇಕು ಮತ್ತು ನಾವೇ ಸ್ವತಃ ಭ್ರಷ್ಟಾಚಾರದಿಂದ ದೂರವುಳಿಯುವುದರಿಂದ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗಲಿದೆ ಎಂದರು. ಡೇವಿಡ್ ಕ್ಯಾಮರೂನ್ ಜತೆ ಆಮಿರ್ ಖಾನ್ ಸುಮಾರು 30 ನಿಮಿಷ ಸಂವಾದದಲ್ಲಿ ಪಾಲ್ಗೊಂಡಿದ್ದರು

No comments:

Post a Comment