Monday, February 11, 2013

ಮಂಜೇಶ್ವರ ಫೇಮಸ್ ಕ್ಲಬ್ ತಂಡದಿಂದ ಕ್ರಿಕೆಟ್ ಟೂರ್ನಿ


ಮಂಜೇಶ್ವರ; ಮಂಜೇಶ್ವರ ಫೇಮಸ್ ಕ್ಲಬ್ ವತಿಯಿಂದ  ಕಳೆದ 3 ವಾರಗಳಿಂದ ಮಂಜೇಶ್ವರ ಪಂಚಾಯತ್ ಮೈದಾನದಲ್ಲಿ ನಡೆಯುತಿದ್ದ ಕ್ರಿಕೆಟ್ ಟೂರ್ನಿಮೆಂಟ್ ಸೋಮವಾರ ಸಮಾಪ್ತಿ ಗೊಂಡಿತು.ಸಮಾರೋಪ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಮೂಸ ರಫೀಕ್ ಅಧ್ಯಕ್ಷತೆ ವಹಿಸಿದರು,ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ .ಕೆ.ಎಂ.ಅಶ್ರಫ್ ರವರು ನೆರವೇರಿಸಿದರು ವೇದಿಕೆಯಲ್ಲಿ ವಿಶಿಷ್ಟ ಅತಿಥಿಗಳಾಗಿ ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಮುಶ್ರತ್ ಜಹಾನ್,ಮಂಜೇಶ್ವರ ಗ್ರಾ.ಪಂ.ಸದಸ್ಯ ಹರೀಶ್ ಚಂದ್ರ,ಮಂಜೇಶ್ವರ ಪಂ.ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಪವನ್ ಕುಮಾರ್,ಪಂ.ಸದಸ್ಯ ಅದ್ರಾಮ ಹಾಜಿ,ಗ್ರಾಹಕರ ವೇದಿಕೆ ಕಾರ್ಯದರ್ಶಿ ರಹಿಮಾನ್ ಉದ್ಯಾವರ,ಲತೀಫ್ ಎಂ.ಎಚ್ ಮೊದಲಾದವರು ಉಪಸ್ಥರಿದ್ದರು.ಮೊತ್ತ 32 ತಂಡಗಳು ಬಾಗವಹಿಸಿದ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಫೈನಲ್ ನಲ್ಲಿ ಮಂಜೇಶ್ವರ ಫೇಮಸ್ ಕ್ರಿಕೆಟ್ ಕ್ಲಬ್ ತಂಡ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡರೆ ಧ್ವೀತಿಯ ಸ್ಥಾನವನ್ನು ನವೋದಯ ಹೊಸಂಗಡಿ ತಂಡದ ಪಾಲಾಯ್ತು. ವಿಜೇತರಿಗೆ ಪ್ರಥಮ ಬಹುಮಾನವಾಗಿ 25000 ರೂ ನಗದು ಹಾಗು ಟ್ರೋಫಿಯನ್ನು ಜಿಲ್ಲಾ ಪಂ.ಸದಸ್ಯ .ಕೆ.ಎಂ ಅಶ್ರಫ್ ವಿತರಿಸಿದರು ಧ್ವೀತಿಯ ಬಹುಮಾನ ವಿಜೇತರಿಗೆ 12000 ರೂ ನಗದು ಹಾಗು ಟ್ರೋಪಿಯನ್ನು ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಮುಶ್ರತ್ ಜಹಾನ್ ವಿತರಿಸಿದರು.ಸಮಾರಂಭದಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ  ಮೃತಪಟ್ಟ  ಕ್ರೀಡಾಪಟು ಫೇಮಸ್ ಕ್ಲಬ್ ಸದಸ್ಯ ಮಂಜೇಶ್ವರ ಪಾಂಡ್ಯಾಲ್ ನಿವಾಸಿ ಅಬ್ದುಲ್ ರಜಾಕ್ ಕುಟುಂಬಕ್ಕೆ ಫೇಮಸ್  ಕ್ಲಬ್ ತಂಡದ ವತಿಯಿಂದ 1 ಲಕ್ಷ ರೂಪಾಯಿ ಧನಸಹಾಯವಾಗಿ ವಿತರಿಸಲಾಯ್ತು.ಅರಫಾತ್ ಮಂಗಳೂರು ಕಾರ್ಯಕ್ರಮ ನಿರೂಪಿಸಿ ಎಂ.ಪಿ ರಫೀಕ್ ಧನ್ಯವಾದ ಸಮರ್ಪಿಸಿದರು.

No comments:

Post a Comment