Monday, February 25, 2013

ಕುಂಜತ್ತೂರಿನಲ್ಲಿ ಕೃಷಿಕರಿಂದಲೇ ತರಕಾರಿ ಸಂತೆ


 ಮಂಜೇಶ್ವರ್ ಟೈಮ್ಸ್

 ಮಂಜೇಶ್ವರ್ ಟೈಮ್ಸ್ 

 ಮಂಜೇಶ್ವರ್ ಟೈಮ್ಸ್ 

 ಮಂಜೇಶ್ವರ್ ಟೈಮ್ಸ್ 

ಮಂಜೇಶ್ವರ್ ಟೈಮ್ಸ್ ವಿಶೇಷ ವರದಿ 
ಮಂಜೇಶ್ವರ:ಜೈವಿಕ ಗೊಬ್ಬರಗಳ ಉಪಯೋಗದಿಂದ ಬೆಳೆಸಿದ ತರಕಾರಿ ಕೃಷಿಯಲ್ಲಿ ಲಭಿಸಿದ ಫಸಲಿಗೆ  ಅಂಗಡಿಗಳಿಗೆ ವಿತರಿಸುವಾಗ ಸೂಕ್ತ ಬೆಲೆ ಲಭಿಸದೇ ಇರುವುದರಿಂದ ಬೇಸೆತ್ತ ಪ್ರದೇಶದ ಕೃಷಿಕರು ನೇರವಾಗಿ ಗ್ರಾಹಕರಿಗೆ ವಿತರಿಸುವ ವಿನೂತನವಾದ ರೀತಿಯ ತರಕಾರಿ ಸಂತೆಗೆ ಮುಂದಾಗಿರುತ್ತಾರೆ.
ಕೃಷಿ ಇಲಾಖೆಯ ತರಕಾರಿ ಅಭಿವೃದ್ದಿಗೆ ಕ್ಲಸ್ಟರ್ ಯೋಜನೆಯಂತೆ ಬೆಳೆದ ತರಕಾರಿಗಳಾದ ಸೌತೆಕಾಯಿ,ಬೆಂಡೆ,ತೊಂಡೆ,ಹಾಗಲಕಾಯಿ,ಬಸಳೆ ಮೊದಲಾದ ತರಕಾರಿಗಳನ್ನು ಅಂಗಡಿಗಳಿಗೆ ವಿತರಿಸುವಾಗ ಕೇವಲ ೧೫ ರೂಪಾಯಿಗೆ ಖರೀದಿಸುವ ಅಂಗಡಿಮಾಲಕರು ಗ್ರಾಹಕರಿಗೆ ೫೦ ನಿಂದ ೬೦ ರೂ ಗೆ ಮಾರುತಿದ್ದಾರೆಂಬುದಾಗಿ ಸ್ಥಳೀಯ ಕೃಷಿಕರೊಬ್ಬರು ತಿಳಿಸಿದ್ದಾರೆ.ಇದರಿಂದಾಗಿ ಇಲ್ಲಿಯ ಸ್ಥಳೀಯ ಕೃಷಿಕರೆಲ್ಲಾ ಒಂದಾಗಿ ಕಳೆದ ಕೆಲವು ದಿನಗಳಿಂದ ಕುಂಜತ್ತೂರು ಜಂಕ್ಷನ್ ನಲ್ಲಿ ನೇರವಾಗಿ ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ನಡೆಸುತಿದ್ದಾರೆ.ಜೈವಿಕ ಗೊಬ್ಬರದಿಂದ ಉಪಯೋಗಿಸಿ ಬೆಳೆಸಿದ ಶುದ್ದ ತರಕಾರಿ ಕಡಿಮೆ ಬೆಲೆಯಲ್ಲಿ  ಇಲ್ಲಿಂದ ಮಾರಾಟ ಮಾಡುತ್ತಿರುವುದರಿಂದ ಇಲ್ಲಿಗೆ ತಲುಪುವ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಕುಂಜತ್ತೂರಿನ ಸನ್ನಡ್ಕ ಎಂಬ ಸ್ಥಳದಲ್ಲಿ 12 ಎಕ್ರೆ ಭೂಮಿಯನ್ನು ಪಡೆದು ಕೃಷಿಯನ್ನು ಮಾಡಲಾಗುತ್ತಿದೆ.ಬೆಳಿಗ್ಗೆ 6 ಗಂಟೆಗೆ ತರಕಾರಿಯನ್ನು ಕುಂಜತ್ತೂರು ಜಂಕ್ಷನ್ ಗೆ ತಂದು 10 ಗಂಟೆಯ ತನಕ ಮಾರಿ ನಂತ್ರ ಅವರವರ ಕೆಲಸಕ್ಕೆ ತೆರಳುತಿದ್ದಾರೆ.ಕೃಷಿಕರಾದ ಮಹಮ್ಮದ್ ಹನೀಫ್,ಖಲಿಲ್,ಬಾಲಕೃಷ್ಣ,ಖಾದರ್ ಮೊದಲಾದವರು ಸಂತೆಗೆ ನೇತೃತ್ವ ನೀಡುತಿದ್ದಾರೆ.
ಸೌಲಭ್ಯಗಳಿಂದ ವಂಚಿತರಾದ ಕೃಷಿಕರು:ಮಂಜೇಶ್ವರ ಗ್ರಾ.ಪಂ.ಹಾಗು ಕೃಷಿಭವನದ ಅಧಿಕಾರಿಗಳು ಕೃಷಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅಸಹಾಯಕರಾಗಿದ್ದು ಮನವಿಗಳಿಗೆ ಸ್ಪಂಧಿಸದೇ ಮೀನ ಮೇಷ ಎಣಿಸುತಿದ್ದಾರೆಂಬುದಾಗಿ ಕೃಷಿ ಪದ್ದತಿಯ ಕನ್ವೀನರ್ ಕೃಷಿಕನಾದ ಮೊಯಿದೀನ್ ಕುಂಞಿ ಆರೋಪಿಸಿದ್ದಾರೆ.ಇವರಿಗೆ ತರಕಾರಿ ಮಾರಲು ಒಂದು ಮಾರುಕಟ್ಟೆಯ ಅಗತ್ಯವಿದೆ.ಕುಂಜತ್ತೂರಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸ್ಥಳದಲ್ಲಿ ಸರಕಾರಿ ಭೂಮಿ ಇದೆ.ಗ್ರಾ.ಪಂಚಾಯತ್ ಮನಸ್ಸು ಮಾಡಿದರೆ ಇಲ್ಲೊಂದು ಮಾರ್ಕೆಟ್ ನಿರ್ಮಿಸಲು ಸಾಧ್ಯವಿದೆ.ಇದೀಗ ಜನಸಂಚಾರ ವಿರುವ ಸ್ಥಳದಲ್ಲೇ ಮೀನು ಹಾಗು ತರಕಾರಿ ಮಾರಲ್ಪಡುತ್ತಿದೆ ಇದರಿಂದಾಗಿ ನಾಗರಿಕರು ಕೂಡಾ ಸಮಸ್ಯೆಯನ್ನು ಎದುರಿಸಬೇಕಾಗಿದೆ.ಸಂಭಂಧಪಟ್ಟವರು ಮುತುವರ್ಜಿ ವಹಿಸಿ ಇತ್ತ ಕಡೆ ಗಮನ ಹರಿಸಲು ಇಲ್ಲಿಯ ಕೃಷಿಕರು ಹಾಗು ನಾಗರಿಕರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ

No comments:

Post a Comment