Sunday, February 3, 2013

ದಂಪತಿಗೆ ವಿಚ್ಛೇದನ ನೀಡಿದ ನಾಣ್ಯ!



 ಫೆಬ್ರವರಿ -03-2013

ಜಬಲ್‌ಪುರ (ಮಧ್ಯ ಪ್ರದೇಶ): ಇಲ್ಲಿನ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ವಿಚ್ಛೇದನ ಪಡೆಯಲು ಬಂದಿದ್ದ ದಂಪತಿಯನ್ನು ನಾಣ್ಯವೊಂದು ಬೇರ್ಪಡಿಸಿದ ಘಟನೆ ವರದಿಯಾಗಿದೆ.
ಸಪ್ನಾ ಸಾಕೇತ್ ಎಂಬ 36 ವರ್ಷದ ಮಹಿಳೆ ತನಗಿಂತ 18 ವರ್ಷ ಕಿರಿಯನಾದ ಅಭಿಷೇಕ್ ಎಂಬಾತನನ್ನು ಆರು ತಿಂಗಳ ಹಿಂದೆ ಎರಡನೆ ವಿವಾಹವಾಗಿದ್ದಳು. ಆರು ತಿಂಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ ಅವರು ಇಲ್ಲಿನ ಜಿಲ್ಲಾ ಮಹಿಳಾ ಪೊಲೀಸ್ ಠಾಣೆ ನಡೆಸುತ್ತಿರುವ ಪರಿವಾರ್ ಪರಾಮರ್ಶ್ ಕೇಂದ್ರದ ಮೊರೆ ಹೋಗಿದ್ದರು. ಅಂತಿಮವಾಗಿ ಅದು ಸಿನಿಮೀಯ ಬೆಳವಣಿಗೆಯನ್ನು ಕಂಡಿತು.
ಕೇಂದ್ರದ ಸಮಾಲೋಚಕರು ಇಬ್ಬರನ್ನೂ ಕೂರಿಸಿಕೊಂಡು ಅವರ ಸಮಸ್ಯೆಯನ್ನು ಪರಿಹರಿಸಲು ಮುಂದಾದರೂ ಅವರ ಪ್ರಯತ್ನಗಳು ಸಫಲವಾಗುವ ಲಕ್ಷಣಗಳು ಗೋಚರಿಸಲಿಲ್ಲ. ಹೀಗಾಗಿ ಸಪ್ನಾ ಒಂದು ರೂಪಾಯಿಯ ನಾಣ್ಯವನ್ನು ಪತಿ ಅಭಿಷೆಕ್ ಕುಮಾರ್‌ಗೆ ನೀಡಿ ಹೆಡ್ ಬಿದ್ದರೆ ಬೇರೆಯಾಗೋಣ ಮತ್ತು ಟೈಲ್ ಬಿದ್ದರೆ ಒಟ್ಟಿಗೆ ಮನೆಗೆ ಹೋಗೋಣ, ಟಾಸ್ ಹಾಕು ಎಂದಳು. ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ ಆತ ಮೊದಲಿಗೆ ಟಾಸ್ ಹಾಕಿದಾಗ ಹೆಡ್ ಬಿತ್ತು.
ಈ ಬಗ್ಗೆ ಸಪ್ನಾ ಅನುಮಾನ ವ್ಯಕ್ತಪಡಿಸಿದಾಗ ಆತ ಮತ್ತೆ ಎರಡು ಬಾರಿ ಟಾಸ್ ಹಾಕಿದಾಗಲೂ ಹೆಡ್ ಬಿತ್ತು. ಹೀಗಾಗಿ ಸ್ವಪ್ನಾ ಒಪ್ಪಂದ ಬದ್ಧತೆಯನ್ನು ನಾನು ಗೌರವಿಸುತ್ತೇನೆಂದು ಹೇಳಿ ವಿಚ್ಛೇದನಕ್ಕೆ ಒಪ್ಪಿಕೊಂಡಳು ಎಂದು ಕೇಂದ್ರದ ಹಿರಿಯ ಸಮಾಲೋಚಕಿ ರೇಖಾ ಖರೆ ತಿಳಿಸಿದ್ದಾರೆ.
ಇದು ಕಾನೂನು ಬದ್ಧವಾಗಿಲ್ಲದಿದ್ದರೂ, ಈ ಮಾರ್ಗದಲ್ಲಿಯೇ ಅವರು ದೂರವಾಗಿದ್ದಾರೆ. ಸಪ್ನಾ ಸಾಕೇತ್ ಮೊದಲಿಗೆ ತನ್ನ ಪತಿಯ ಪೋಷಕರು ನೀಡುತ್ತಿರುವ ಕಿರುಕುಳದ ಕುರಿತು ದೂರು ನೀಡಲು ಕೇಂದ್ರಕ್ಕೆ ಬಂದಿದ್ದರು, ಅದರೆ ಅದು ವಿಚ್ಛೇದನದಲ್ಲಿ ಅಂತ್ಯಗೊಂಡಿತು ಎಂದು ರೇಖಾ ಖರೆ ತಿಳಿಸಿದ್ದಾ

No comments:

Post a Comment