Sunday, February 3, 2013

ಮುಸ್ಲಿಂ ಸಂಘಟನೆಗಳ ಒಕ್ಕೂಟ ರಚಿಸಲು ನಿರ್ಣಯ



ಫೆಬ್ರವರಿ -03-2013

ಮುಸ್ಲಿಂ ಸಂಘಟನೆಗಳ ಮುಖಂಡರ ಸಭೆ 
ಮಂಗಳೂರು, ಫೆ.2: ಮುಸ್ಲಿಂ ಸಮುದಾ ಯದಲ್ಲಿ ಸಮನ್ವಯ ಮೂಡಿಸುವ ಹಾಗೂ ಸಮುದಾಯದ ವಿರುದ್ಧ ನಡೆಯುವ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ರಚಿಸುವ ನಿರ್ಣಯವನ್ನು ವಿವಿಧ ಸಂಘಟನೆಗಳ ಪ್ರಮುಖರ ಉಪಸ್ಥಿತಿ ಯಲ್ಲಿ ಕೈಗೊಳ್ಳಲಾಗಿದೆ.
ಇಂದು ನಗರದ ವುಡ್‌ಲ್ಯಾಂಡ್ಸ್ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ವಿವಿಧ ಸಂಘಟನೆಗಳ ಪ್ರಮುಖರ ಸಭೆ ಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿಶ್ವರೂಪಂ ಚಲನಚಿತ್ರ ದಲ್ಲಿ ತೋರಿಸಲಾಗಿರುವ ಮುಸ್ಲಿಂ ವಿರೋಧಿ ನಿಲುವುಗಳು, ಟಿಪ್ಪು ಹೆಸರಿ ನಲ್ಲಿ ಸ್ಥಾಪಿಸುವ ವಿಶ್ವವಿದ್ಯಾನಿಲಯದ ಬಗ್ಗೆ, ಅನಾರೋಗ್ಯದಿಂದ ಬಳಲುತ್ತಿ ರುವ ಪಿಡಿಪಿ ನಾಯಕ ಅಬ್ದುನಾಸರ್ ಮಅದನಿಯವರನ್ನು ಬಂಧ ಮುಕ್ತಗೊ ಳಿಸಲು ಆಗ್ರಹಿಸುವ ಹೋರಾಟ ಹಾಗೂ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಆರೆಸ್ಸೆಸ್ ಬಗ್ಗೆ ನೀಡಿರುವ ಹೇಳಿ ಕೆಯ ವಿಷಯದಲ್ಲಿ ಸಮುದಾಯದ ಪ್ರತಿಕ್ರಿಯೆ ಕುರಿತ ಚರ್ಚಿಸಲಾಯಿತು. ಸಮುದಾಯಕ್ಕೆ ಧಕ್ಕೆಯಾಗುವ ವಿಷಯ ಬಂದಾಗ ಒಕ್ಕೂಟದ ನೇತೃತ್ವ ದಲ್ಲಿ ಹೋರಾಟ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುವ ಉದ್ದೇಶವನ್ನು ಪ್ರಕಟಿಸಲಾಯಿತು.
ಇದೇ ವಿಷಯವಾಗಿ ಚರ್ಚಿಸಲು ಮಂಗಳವಾರ ಮತ್ತೊಮ್ಮೆ ಸಭೆ ಸೇರಿ ಅದೇ ಸಂದರ್ಭದಲ್ಲಿ ದ.ಕ. ಜಿಲ್ಲಾ ಸಂಘಟನೆಗಳ ಒಕ್ಕೂಟ ರಚನೆಯ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು.
ಮುಸ್ಲಿಂ ಸೆಂಟ್ರಲ್ ಕಮಿಟಿ, ಮಂಗಳೂರು ಸೆಂಟ್ರಲ್ ಕಮಿಟಿ, ಜಮೀಯತುಲ್ ಫಲಾಹ್, ಜಮಾಅತೆ ಇಸ್ಲಾಮೀ ಹಿಂದ್, ಅಂಜುಮನ್ ಖಾದಿಮುಲ್ ಮುಸ್ಲಿಮೀನ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ನಾಗರಿಕ ಹಕ್ಕು ಹೋರಾಟ ಸಮಿತಿ, ಎಸ್ಕೆಎಸ್ಸೆಸ್ಸೆಫ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಿಎಫ್‌ಐ, ಎಸ್ ಡಿಪಿಐ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಪಿಯುಸಿಎಲ್, ಎಐಐಸಿ, ಆಲ್ ಇಂಡಿಯಾ ಮುಸ್ಲಿಂ ಪರಿಷತ್ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು

No comments:

Post a Comment