Sunday, February 17, 2013

ಮಳೆಯಿಂದಾಗಿ ನಿಯಂತ್ರಣ ತಪ್ಪಿದ ವಾಹನಗಳ ಅಫಘಾತನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಿಯಂತ್ರಣ ತಪ್ಪಿದ ವಾಹನಗಳು ಅಲ್ಲಲ್ಲಿ ಅಫಘಾತಕ್ಕೀಡಾದ ಬಗ್ಗೆ ವರದಿಯಾಗಿದೆ.
ನಿಯಂತ್ರಣ ತಪ್ಪಿದ ಲಾರಿಯೊಂದು ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ಇಲ್ಲಿಗೆ ಸಮೀಪದ ವಾಮಂಜೂರುನಿಂದ ವರದಿಯಾಗಿದೆ.ಮೀನು ಹೇರಿಕೊಂಡು ಕಲ್ಲಿಕೋಟೆಯಿಂದ ಮಂಗಳೂರಿಗೆ ಸಾಗುತಿದ್ದ ಟೆಂಪೋ ನಿನ್ನೆ ರಾತ್ರಿ ವಾಮಂಜೂರು ಚೆಕ್ ಪೋಸ್ಟ್ ಬಳಿ ನಿಲ್ಲಿಸಲಾಗಿದ್ದ ಲಾರಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದಿದ್ದು ಇದರಿಂದ ಟೆಂಪೋ ಸಂಪೂರ್ಣ ನುಜ್ಜುಗುಜ್ಜಾಗಿದ್ದು  ಚಾಲಕ ಕಲ್ಲಿಕೋಟೆ ನಿವಾಸಿ ಫೈಸಲ್ (೨೫) ಕ್ಲೀನರ್ ರಿಯಾಜ್(೩೫) ಎಂಬವರು ಗಾಯಗೊಂಡಿದ್ದಾರೆ.ಮಾತ್ರವಲ್ಲದೆ ಇದೇ ಪರಿಸರದಲ್ಲಿ ಮಂಗಲೂರಿಗೆ ತೆರಳುತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪರಿಸರದ ಹೊಂಡಕ್ಕೆ ಮಗುಚಿ ಬಿದ್ದಿತ್ತು ಎಲ್ಲರೂ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

No comments:

Post a Comment